ರಾಷ್ಟ್ರೀಯ ಬ್ಯಾಂಡ್ಮಿಂಟನ್‌ನಲ್ಲಿ ಕರ್ನಾಟಕ ತಂಡಕ್ಕೆ ಜಾಗವಿಲ್ಲ!
ಮುಂದಿನ ವರ್ಷ ನಡೆಯಲಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಭಾರತೀಯ...

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ತಂಡಗಳಿಗೆ ಕೊಕ್ ನೀಡಿದೆ. ಈ ಕುರಿತು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಬಿಐಎಗೆ ಸ್ಪಷ್ಟನೆ ಕೋರಿದೆ.
ಕರ್ನಾಟಕ ತಂಡ ದಕ್ಷಿಣ ವಲಯದ ಟೂರ್ನಿಯಲ್ಲಿ ಕೇರಳ ವಿರುದ್ಧ ರನ್ನರ್ ಅಪ್ ಆಗಿತ್ತು. ಇನ್ನು ಕೇರಳ ಹಾಲಿ ಚಾಂಪಿಯನ್ ಆಗಿ ಅಲ್ಲದೆ ಆತಿಥ್ಯ ವಹಿಸುವ ಹಿನ್ನೆಲೆಯಲ್ಲಿ ಟೂರ್ನಿಗೆ ನೇರವಾಗಿ ಆಯ್ಕೆಯಾಗಿದೆ. ದೇಶದ ಆರು ವಲಯದ ಚಾಂಪಿಯನ್ ತಂಡದ ಜತೆಗೆ ಡ್ರಾ ಮೂಲಕ ರನ್ನರ್ ಅಪ್ ತಂಡಗಳನ್ನು ಆಯ್ಕೆ ಮಾಡಿ ಒಟ್ಟು ಎಂಟು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಕಡೆ ಕ್ಷಣದಲ್ಲಿ ಬಿಐಎ ಕರ್ನಾಟಕ ತಂಡವನ್ನು ಎಂಟು ತಂಡಗಳ ಪಟ್ಟಿಯಿಂದ ಕೈ ಬಿಟ್ಟಿರುವುದು ಅಚ್ಚರಿ ತಂದಿದೆ.
ಇದರ ಜತೆಗೆ ಆಂಧ್ರ ಪ್ರದೇಶ ವಲಯ ಮಟ್ಟದ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ಈ ಮೂಲಕ ಮುಂದಿನ ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಪಿ.ವಿ.ಸಿಂಧು, ಅಶ್ವಿನಿ ಪೊನ್ನಪ್ಪ, ಪಿ. ಕಶ್ಯಪ್, ಕೆ.ಶ್ರೀಕಾಂತ್, ಸೈನಾ ನೆಹ್ವಾಲ್, ಜ್ವಾಲಾ ಗುಟ್ಟಾರಂತಹ ಘಟಾನುಘಟಿ ಆಟಗಾರರು ತಂಡಗಳ ವಿಭಾಗದಲ್ಲಿ ಕಾಣಸಿಕೊಳ್ಳುತ್ತಿಲ್ಲ.
ಕೇರಳ ತಂಡ ಹೆಚ್ಚು ಪ್ರಾಬಲ್ಯ ಮೆರೆಯುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ತಂಡವನ್ನು ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇರಳ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯದರ್ಶಿ ಎಸ್. ಮುರಳಿಧರನ್, ಬಿಎಐ ನಿಯಮಾವಳಿ ಪ್ರಕಾರ ತಂಡಗಳನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಕರ್ನಾಟಕ ಮತ್ತು ಆಂಧ್ರ ತಂಡಗಳನ್ನು ಹೊರಗಿಟ್ಟಿರುವ ಬಗ್ಗೆ ಪ್ರಶ್ನಿಸುತ್ತೇನೆ. ವೈಯಕ್ತಿಕ ವಿಭಾಗದಲ್ಲೂ ಗೊಂದಲಗಳಿದ್ದು, ತಂಡಗಳ ಆಯ್ಕೆಗಾಗಿ ನಡೆದ ಸಭೆ ಬಗ್ಗೆ ಹೆಚ್ಚು ಪಾರದರ್ಶಕತೆ ಅವಶ್ಯಕತೆ ಇದೆ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಯು.ವಿಮಲ್ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


