ನೋಕಿಯಾ 1100 ಮತ್ತೆ ಬರುತ್ತಿದೆ... ಆ್ಯಂಡ್ರಾಯಿಡ್ ಜೊತೆ
ನೋಕಿಯಾ ಕಂಪನಿಯ ಉತ್ಕೃಷ್ಟ ಮೊಬೈಲ್ ಫೋನ್ ಎಂದೇ ಹೇಳಲ್ಪಡುವ ನೋಕಿಯಾ 1100 ಮತ್ತೆ ಬರುತ್ತಿದೆಯಂತೆ!..

ನವದೆಹಲಿ: ನೋಕಿಯಾ ಕಂಪನಿಯ ಉತ್ಕೃಷ್ಟ ಮೊಬೈಲ್ ಫೋನ್ ಎಂದೇ ಹೇಳಲ್ಪಡುವ ನೋಕಿಯಾ 1100 ಮತ್ತೆ ಬರುತ್ತಿದೆಯಂತೆ! ಅದೂ ಸ್ಮಾರ್ಟ್ ಫೋನ್ ಆಗಿ ಹೊಸ ಅವತಾರದಲ್ಲಿ. ಆ್ಯಂಡ್ರಾಯ್ಡ್ ಲಾಲಿಪೋಪ್ 5.0, 1.3 ಗಿಗಾ ಹರ್ಟ್ಸ್ ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸ್ಸರ್ ಮತ್ತು 512 ಎಂಬಿ ಮೆಮೊರಿಯೊಂದಿಗೆ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರಲಿದೆ.
2003ರ ಕಾಲವಾಧಿಯಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟಕ್ಕೊಳಗಾದ ಮೊಬೈಲ್ ಫೋನ್ ಮಾಡೆಲ್ ಆಗಿತ್ತು ನೋಕಿಯಾ 1100. ಆದರೆ 2016ರಲ್ಲಿ ಕೊನೆಯ ತಿಂಗಳುಗಳಲ್ಲಿ ನೋಕಿಯಾ ಕಂಪನಿಗೆ ಸ್ಮಾರ್ಟ್‌ಫೋನ್‌ಗ ಳಲ್ಲಿ ತಮ್ಮ ಹೆಸರನ್ನು ಬಳಸಲು ಸಾಧ್ಯವಾಗಲ್ಲ. ಮೈಕ್ರೋಸಾಫ್ಟ್ ಕಂಪನಿಯ ಜತೆಗಿನ ಕರಾರು ಪ್ರಕಾರ ನೋಕಿಯಾ 1100 ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಬಂದರೂ 2017ರ ವರೆಗೆ ಮಾತ್ರ ನೋಕಿಯಾ ತಮ್ಮ ಹೆಸರಲ್ಲಿ ಈ ಸ್ಮಾರ್ಟ್‌ಫೋನ್ ಮಾರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದೀಗ ಲಭ್ಯವಿರುವ ನೋಕಿಯಾ ಸ್ಮಾರ್ಟ್‌ಫೋನ್‌ಗಳಲ್ಲಿ ನೋಕಿಯಾ ಹೆಸರಿನ ಬಳಕೆಯ ಕಾಲಾವಧಿ 10 ವರ್ಷವಾಗಿದೆ. ಆದ್ದರಿಂದಲೇ ತಮ್ಮ ಉತ್ತಮ ಫೋನ್ ಎಂದೆನಿಸಿಕೊಂಡ ನೋಕಿಯಾ 1100 ಫೋನ್‌ನ್ನು ಸ್ಮಾರ್ಟ್‌ಫೋನ್‌ನ್ನಾಗಿ ಪರಿವರ್ತಿಸಲು ನೋಕಿಯಾ ತೀರ್ಮಾನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


