ವಿಜ್ಞಾನ-ತಂತ್ರಜ್ಞಾನ

ಮಂಗಳನ ಮೇಲೆ ಸೆಲ್ಫಿ ಕ್ಲಿಕ್ಕಿಸಿದ ನಾಸಾ ರೋವರ್

ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹದ ಮೇಲೆ ಸೆಲ್ಫಿ ಕ್ಲಿಕ್ಕಿಸಿದೆ. ಮಂಗಳ ಗ್ರಹದ ಮೌಂಟ್ ಶಾರ್ಪ್ ಪರ್ವತವನ್ನು ಕೊರೆದು ಅಲ್ಲಿನ

ಮಂಗಳನ ಮೇಲೆ ಸೆಲ್ಫಿ ಕ್ಲಿಕ್ಕಿಸಿದ ನಾಸಾ ರೋವರ್
ಮಂಗಳನ ಮೇಲೆ ನಾಸಾ ರೋವರ್ ಸೆಲ್ಫಿ
Published On :

ವಾಶಿಂಗ್ಟನ್: ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹದ ಮೇಲೆ ಸೆಲ್ಫಿ ಕ್ಲಿಕ್ಕಿಸಿದೆ. ಮಂಗಳ ಗ್ರಹದ ಮೌಂಟ್ ಶಾರ್ಪ್ ಪರ್ವತವನ್ನು ಕೊರೆದು ಅಲ್ಲಿನ ಪರಿಸರದ ವಸ್ತುಗಳನ್ನು ಸಂಗ್ರಹಿಸಿ ತನ್ನ ಫೋಟೋವನ್ನೇ ಸೆರೆಹಿಡಿದಿದೆ.

ಐದು ತಿಂಗಳಿನಿಂದ ಮಂಗಳ ಗ್ರಹದ "ಪಹ್ರುಂಪ್ ಬೆಟ್ಟ'ಗಳ ಮೇಲೆ ಕೆಲಸ ಮಾಡುತ್ತಿರುವ ರೋವರ್ ಕಳುಹಿಸಿರುವ ಈ ಸ್ವ-ಚಿತ್ರ ಮನಮೋಹಕ ಪರಿಸರವನ್ನು ಸೆರೆಹಿಡಿದಿದೆ.

ರೋವರ್ ನ ರೋಬೋಟಿಕ್ ಕೈಯ ಮೇಲಿರುವ ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್ (ಎಂ ಎ ಎಚ್ ಎಲ್ ಐ) ಕಳುಹಿಸಿರುವ ಸುಮಾರು ಡಜನ್ ಫೋಟೋಗಳನ್ನು ಒಟ್ಟುಗೂಡಿಸಿ ಈ ಸೆಲ್ಫಿ ಪ್ರಕಟಿಸಲಾಗಿದೆ.

ಈ ಸೆಲ್ಫಿಯನ್ನು 'ಮೊಜಾವ್-೨' ಪ್ರದೇಶದಲ್ಲಿ ಸ್ಯಾಂಪಲ್ ಸಂಗ್ರಹಿಸಲು ಕೊರೆಯುವಾಗ ಜನವರಿ ಕೊನೆಯ ಭಾಗದಲ್ಲಿ ತೆಗೆದಿರುವುದು ಎಂದು ತಿಳಿಸಲಾಗಿದೆ. ಮಂಗಳ ಗ್ರಹದ ಮೇಲೆ ಜೀವ ವೈವಿಧ್ಯತೆ ಸಾಧ್ಯವೇ ಎಂಬುದರ ಸಂಶೋಧನೆಗೆ ಈ ಸ್ಯಾಂಪಲ್ ಗಳು ನೆರವಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.