ಭುವಿಗೆ ಎಷ್ಟೊಂದು ಸೋದರಿಯರು? ಪತ್ತೆಯಾಯ್ತು ಮತ್ತೊಂದು ಗ್ರಹ
ಭೂಮಿಗೆ ಎಷ್ಟೊಂದು ಸೋದರಿಯರು ಎಂದು ಕೇಳಬೇಡಿ. ಏಕೆಂದರೆ, ಕೆಪ್ಲರ್ 452ಬಿ ದೂರದರ್ಶಕವು ಭೂಮಿಯಂಥದ್ದೇ ಗ್ರಹವನ್ನು ಪತ್ತೆ ಹಚ್ಚಿದ ಬೆನ್ನಲ್ಲೇ ನಾಸಾದ ಸ್ಪಿಟ್ಝರ್ ಸ್ಪೇಸ್ ದೂರದರ್ಶಕವು ಸೌರವ್ಯೂಹದ ಹೊರಗೆ ಮತ್ತೊಂದು ಹೊಸ ಗೃಹವನ್ನು ಪತ್ತೆಹಚ್ಚಿದೆ...

ವಾಷಿಂಗ್ಟನ್: ಭೂಮಿಗೆ ಎಷ್ಟೊಂದು ಸೋದರಿಯರು ಎಂದು ಕೇಳಬೇಡಿ. ಏಕೆಂದರೆ, ಕೆಪ್ಲರ್ 452ಬಿ ದೂರದರ್ಶಕವು ಭೂಮಿಯಂಥದ್ದೇ ಗ್ರಹವನ್ನು ಪತ್ತೆ ಹಚ್ಚಿದ ಬೆನ್ನಲ್ಲೇ ನಾಸಾದ ಸ್ಪಿಟ್ಝರ್ ಸ್ಪೇಸ್ ದೂರದರ್ಶಕವು ಸೌರವ್ಯೂಹದ ಹೊರಗೆ ಮತ್ತೊಂದು ಹೊಸ ಗೃಹವನ್ನು ಪತ್ತೆಹಚ್ಚಿದೆ.
ಈ ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ನಾಸಾ ವಿಜ್ಞಾನಿಗಳು ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಅಲ್ಲದೆ ಈ ಗ್ರಹ ಭೂಮಿಗೆ ಅತ್ಯಂತ ಸಮೀಪದಲ್ಲಿದ್ದು, ಇದನ್ನು `ವೈಜ್ಞಾನಿಕ ದತ್ತಾಂಶದ ಸಂಭಾವ್ಯ ಚಿನ್ನದ ಗಣಿ' ಎಂದೇ ಬಣ್ಣಿಸಲಾಗುತ್ತಿದೆ. ಹೊಸ ಗ್ರಹಕ್ಕೆ ಎಚ್‍ಡಿ 219134ಬಿ ಎಂದು ನಾಮಕರಣ ಮಾಡಲಾಗಿದೆ. ಕೆಪ್ಲರ್ ಕಂಡುಹಿಡಿದ ಗ್ರಹವು 1,400
ಜ್ಯೋತಿರ್ವರ್ಷದಷ್ಟು ದೂರವಿದ್ದರೆ, ಹೊಸ ಗ್ರಹವು ಕೇವಲ 21 ಜ್ಯೋತಿರ್ವರ್ಷ ದೂರವಿದೆ. ಹೀಗಾಗಿ ಇದು ಮಾನವ ವಾಸಯೋಗ್ಯ ಆಗಬಲ್ಲದು ಎಂಬ ಅನುಮಾನವೂ ಇದೆ. ಹೊಸ ಗ್ರಹವನ್ನು ನೇರವಾಗಿ ಅಥವಾ ಟೆಲಿಸ್ಕೋಪ್ ನಲ್ಲಿ ನೋಡಲು ಸಾಧ್ಯವಿಲ್ಲ. ಆದರೆ, ಆ ಗ್ರಹವು ಯಾವ ನಕ್ಷತ್ರದ ಕಕ್ಷೆಯಲ್ಲಿ ಸುತ್ತುತ್ತಿದೆಯೋ ಆ ನಕ್ಷತ್ರವನ್ನು ನಾರ್ತ್ ಸ್ಟಾರ್‍ನ ಕ್ಯಾಸಿಯೋಪಿಯಾ ನಕ್ಷತ್ರಪುಂಜದಿಂದ ಬರಿಗಣ್ಣಿನಲ್ಲಿ ನೋಡಬಹುದು ಎಂದು ನಾಸಾ ತಿಳಿಸಿದೆ.
ಮಂಗಳನ ಟ್ರಾಫಿಕ್‍ಗೆ ಬ್ರೇಕ್?: ಭಾರತದ ಮಾಮï ಸೇರಿದಂತೆ ಮತ್ತೆರಡು ಬಾಹ್ಯಾಕಾಶ ನೌಕೆಗಳು ಮಂಗಳನ ಕಕ್ಷೆಯನ್ನು ಸೇರಿಕೊಂಡಿರುವ ಹಿನ್ನೆಲೆಯಲ್ಲಿ ಕೆಂಪು ಗ್ರಹದ ಸುತ್ತಲೂ ಟ್ರಾಫಿಕ್ ಜಾಮ್ ಸಮಸ್ಯೆ ಉದ್ಭವವಾಗಿದೆ. ಇದನ್ನು ಅರಿತಿರುವ ನಾಸಾ, ಈಗ ಬಾಹ್ಯಾಕಾಶ ನೌಕೆಗಳು ಒಂದಕ್ಕೊಂದು ಡಿಕ್ಕಿಯಾಗದಂತೆ ತಡೆಯಲು ಟ್ರಾಫಿಕ್ ನಿಗಾ ವ್ಯವಸ್ಥೆಯನ್ನು ಸಿದಟಛಿಪಡಿಸುತ್ತಿದೆ. ಈಗ ಮಂಗಳನ ಸುತ್ತ ಐದು ನೌಕೆಗಳು ಸುತ್ತುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


