ವಿಜ್ಞಾನ-ತಂತ್ರಜ್ಞಾನ

ಮಂಗಳನಲ್ಲಿರುವ ಮಿಥೇನ್ ಅಂಶದ ಬಗ್ಗೆ ಶೋಧ ಆರಂಭ

ಮಂಗಳ ಗ್ರಹದಲ್ಲಿ ಮೀಥೇನ್ ಅನಿಲದ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ನಾಸಾದ ಕ್ಯೂರಿಯಾಸಿಟಿ ರೋವರ್ ...

ಮಂಗಳನಲ್ಲಿರುವ ಮಿಥೇನ್ ಅಂಶದ ಬಗ್ಗೆ ಶೋಧ ಆರಂಭ
ಕ್ಯೂರಿಯಾಸಿಟಿ ರೋವರ್
Published On :

ಸ್ಯಾನ್ ಫ್ರಾನ್ಸಿಸ್ಕೋ: ಮಂಗಳ ಗ್ರಹದಲ್ಲಿ ಮೀಥೇನ್ ಅನಿಲದ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ನಾಸಾದ ಕ್ಯೂರಿಯಾಸಿಟಿ ರೋವರ್ ವರ್ಷಗಳ ಹಿಂದೆ ವರದಿ ನೀಡಿತ್ತು. ಆದರೆ ಇದೀಗ ಮೀಥೇನ್ ಅಂಶ ಇದೆ ಎಂದು ಎರಡು ತಿಂಗಳ ಹಿಂದೆ ಕ್ಯೂರಿಯಾಸಿಟಿ ಪತ್ತೆ ಹಚ್ಚಿದೆ.

ಇದೀಗ ಮಂಗಳನಲ್ಲಿ ಮಿಥೇನ್ ಪತ್ತೆಯಾಗಲು ಕಾರಣವೇನು ಎಂಬುದರ ಬಗ್ಗೆ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಆದಾಗ್ಯೂ, ಮಿಥೇನ್ ಪತ್ತೆಯಾಗಲು ಮಂಗಳನಲ್ಲಿರುವ ಮೈಕ್ರೋಬ್ಸ್‌ಗಳೇ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಹಿಂದೆ ಮಂಗಳನ ಮೇಲ್ಮೈಯಲ್ಲಿ ಪತ್ತೆಯಾದ ಮಣ್ಣಿನಲ್ಲಿ ಕಾರ್ಬನ್ ಅಂಶ  ಪತ್ತೆಯಾಗಿತ್ತು. ಹೀಗಿರುವಾಗ ಮಂಗಳನಲ್ಲಿ ಜೀವಿಗಳು ವಾಸಿಸಿದ್ದವು ಎಂಬುದಕ್ಕೆ ಇದು ನೇರವಾದ ಪುರಾವೆಯನ್ನು ನೀಡುತ್ತಿಲ್ಲವಾದರೂ, ಈ ಹಿಂದೆ ಅಥವಾ ಇನ್ನು ಮುಂದೆ ಇಲ್ಲಿ ಪ್ರಾಣಿಗಳು ಬದುಕಲು ಸಾಧ್ಯ ಎಂಬುದನ್ನು ಸೂಚಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸುಮಾರು ನೂರು ವರ್ಷಗಳ ಹಿಂದೆ ಮಂಗಳನಲ್ಲಿ ಸೂರ್ಯ ಬೆಳಕು ಬಿದ್ದು ರಸಾಯನಿಕ ಕ್ರಿಯೆ ಏರ್ಪಟ್ಟು ಅಲ್ಲಿ ಮಿಥೇನ್ ಅನಿಲ ಉತ್ಪಾದನೆಯಾಗಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.