ರಾಜಕೀಯ

ನಿಮ್ಮಂತ ನೀಚ ಮನಸ್ಥಿತಿಯ ರಾಜಕಾರಣಿಯನ್ನ ಕರ್ನಾಟಕ ಹಿಂದೆಂದೂ ಕಂಡಿರಲಿಲ್ಲ: HDK ವಿರುದ್ಧ ಪ್ರದೀಪ್ ಈಶ್ವರ್ ಕಿಡಿ

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ನೈಸ್ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ.

ನಿಮ್ಮಂತ ನೀಚ ಮನಸ್ಥಿತಿಯ ರಾಜಕಾರಣಿಯನ್ನ ಕರ್ನಾಟಕ ಹಿಂದೆಂದೂ ಕಂಡಿರಲಿಲ್ಲ: HDK ವಿರುದ್ಧ ಪ್ರದೀಪ್ ಈಶ್ವರ್ ಕಿಡಿ
ಪ್ರದೀಪ್ ಈಶ್ವರ್, ಎಚ್ ಡಿ ಕುಮಾರಸ್ವಾಮಿ
Published On :

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ನೈಸ್ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಸಾಹೇಬರ ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತವಿರಬೇಕು. ಡಿ.ಕೆ. ಶಿವಕುಮಾರ್ ಅವರ ಕುಟುಂಬದ ಸದಸ್ಯರ ಹೆಸರನ್ನು ತಂದಿದ್ದು, ವೈಯಕ್ತಿಕವಾಗಿ ನನಗೆ ಬಹಳ ಬೇಸರವಾಗಿದೆ ಎಂದು ಪ್ರದೀಪ್ ಈಶ್ವರ್ ಟ್ವೀಟ್ ಮಾಡಿದ್ದಾರೆ.

ಎಚ್.ಡಿ. ಕುಮಾರಸ್ವಾಮಿಯವರಂತಹ ನೀಚ ಮನಸ್ಥಿತಿಯ ರಾಜಕಾರಣಿಯನ್ನು ಕರ್ನಾಟಕ ಹಿಂದೆಂದೂ ಕಂಡಿರಲಿಲ್ಲ. ಮುಂದೆಯೂ ಕಾಣುವುದಿಲ್ಲ. ನಿಮ್ಮ ನೀಚ ಮನಸ್ಥಿತಿಗೆ ಮದ್ದು ಎಲ್ಲಿದೆ? ಎಂದು ಕುಟುಕಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಅವರ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಕುಮಾರಸ್ವಾಮಿ, 2004ರ ನ.3ರಂದು ಸರ್ಕಾರದ ಆಸ್ತಿಯನ್ನು ಡಿ.ಕೆ.ಸುರೇಶ್ ಖರೀದಿಸಿದ್ರು. ಯಾರದ್ದೋ ಹೆಸರಿನಲ್ಲಿದೆ ಎಂದು ಸುಮಾರು 10 ಎಕರೆ ಭೂಮಿ ಖರೀದಿ ನಡೆದಿದ್ದು, ಅದು ಸರ್ಕಾರದ ಯೋಜನೆಗೆ 1997ರಲ್ಲಿ ನೋಟಿಫೈ ಆಗಿದ್ದ ಭೂಮಿಯಾಗಿದೆ. ಅದನ್ನು 2026ರಲ್ಲಿ ಸಿಎಂ ಡಿಕೆ ಪುತ್ರಿ ಆಭರಣ ಖರೀದಿ ಮಾಡುತ್ತಾರೆ. ಹೀಗೆ ಕುಟುಂಬಸ್ಥರ ಹೆಸರಲ್ಲಿ ಭೂಮಿ ಗುಳಂ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.