ರಾಜಕೀಯ

ನಮ್ದು KGF-2 ಬರುತ್ತೆ, ಬ್ಲ್ಯಾಕ್ ಮೇಲ್ ಮಾಡಿ ಹಫ್ತಾ ವಸೂಲಿ ಮಾಡಲ್ಲ ನಾವು; CM ಆಗಿದ್ದಾಗ ಕುಮಾರಸ್ವಾಮಿ ಗೆಣಸು ಕೀಳ್ತಿದ್ರಾ: HC ಬಾಲಕೃಷ್ಣ

ಕೇಂದ್ರ ಸರ್ಕಾರದಲ್ಲಿ ಮಂತ್ರಿ ಆಗಿದ್ದೀಯಲ್ಲಪ್ಪಾ, ಏನು ಕಿತ್ತು ಗುಡ್ಡೆ ಹಾಕ್ತಿದ್ದಿಯಾ, ನಿನ್ನ ಯೋಗ್ಯತೆಗೆ 50 ಸಾವಿರ ಕೊಡಿಸಪ್ಪಾ. ಆಮೇಲೆ ನೀನು ರೈತ ನಾಯಕ ಎಂದು ಒಪ್ಪಿಕೊಳ್ಳುತ್ತೇವೆ. ಕೆಲಸ ಮಾಡೋಕೆ ಬಿಡಿ. ಕೇಂದ್ರದಲ್ಲಿ ಮಂತ್ರಿ ಆಗಿದ್ದೀರಾ ಅಲ್ಲಿ ಕೆಲಸ ಮಾಡಪ್ಪಾ..

ನಮ್ದು KGF-2 ಬರುತ್ತೆ, ಬ್ಲ್ಯಾಕ್ ಮೇಲ್ ಮಾಡಿ ಹಫ್ತಾ ವಸೂಲಿ ಮಾಡಲ್ಲ ನಾವು; CM ಆಗಿದ್ದಾಗ ಕುಮಾರಸ್ವಾಮಿ ಗೆಣಸು ಕೀಳ್ತಿದ್ರಾ: HC ಬಾಲಕೃಷ್ಣ
ಎಚ್.ಸಿ ಬಾಲಕೃಷ್ಣ ಮತ್ತು ಎಚ್.ಡಿ ಕುಮಾರಸ್ವಾಮಿ
Published On :

ಬೆಂಗಳೂರು: ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ, ನಾವು ಅದರ ಬಗ್ಗೆ ಗಮನ ಹರಿಸಬೇಕಾಗಿದೆ. ನಮಗೆ ಬೇರೆ ಕೆಲಸ ಇಲ್ವಾ. ಅವರ ರೀತಿ ದಾಖಲೆ ಕೊಟ್ಟು ಬ್ಲ್ಯಾಕ್ ಮೇಲ್ ಮಾಡಿ ಅವರ ಹತ್ತಿರ ಹಪ್ತಾ ವಸೂಲಿ ಮಾಡಬೇಕಾ ಎಂದು ಪೌರಾಡಳಿತ ಸಚಿವ ಎಚ್. ಸಿ ಬಾಲಕೃಷ್ಣ ಪ್ರಶ್ನಿಸಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಾಲಕೃಷ್ಣ ನಮ್ಮದೂ ಕೆಜಿಎಫ್ 2 ಬರುತ್ತೆ. ಸಮಯ ಬಂದಾಗ ಬಿಡುಗಡೆ ಮಾಡ್ತೀವಿ.. ಅವರು ಹಫ್ತಾ ವಸೂಲಿ ಗಿರಾಕಿ. ಅಸಹ್ಯ ರೀ.. ಬರೀ ಬ್ಲ್ಯಾಕ್ ಮೇಲ್ ಅಷ್ಚೇ.. ಕಾಸು ಇಸ್ಕೊಳ್ಳೋದು ಸುಮ್ಮನಾಗೋದು ಎಂದಿದ್ದಾರೆ. ಅವರ ಹಾಗೆ ಬ್ಲ್ಯಾಕ್ ಮೇಲ್ ಮಾಡಿ ಹಫ್ತಾ ವಸೂಲಿ ಮಾಡುವ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ.

ದರಿದ್ರ ಸರ್ಕಾರ ಅಂತಾರೆ, ನೀವು ಕೇಂದ್ರ ಮಂತ್ರಿಯಾಗಿದ್ದೀರಿ, ತಾಕತ್ ಇದ್ದರೆ ಎಕರೆಗೆ 50 ಸಾವಿರ ರೂಪಾಯಿ ಕೊಡಿಸಿ ಎಂದು ಎಚ್.ಸಿ ಬಾಲಕೃಷ್ಣ ಹೇಳಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿ ಆಗಿದ್ದೀಯಲ್ಲಪ್ಪಾ, ಏನು ಕಿತ್ತು ಗುಡ್ಡೆ ಹಾಕ್ತಿದ್ದಿಯಾ, ನಿನ್ನ ಯೋಗ್ಯತೆಗೆ 50 ಸಾವಿರ ಕೊಡಿಸಪ್ಪಾ. ಆಮೇಲೆ ನೀನು ರೈತ ನಾಯಕ ಎಂದು ಒಪ್ಪಿಕೊಳ್ಳುತ್ತೇವೆ. ಕೆಲಸ ಮಾಡೋಕೆ ಬಿಡಿ. ಕೇಂದ್ರದಲ್ಲಿ ಮಂತ್ರಿ ಆಗಿದ್ದೀರಾ ಅಲ್ಲಿ ಕೆಲಸ ಮಾಡಪ್ಪಾ.. ಬೆಳಬೆಳಗ್ಗೆನೆ ಬಂದು ಇಲ್ಲಿ ಬಂದು ಮುಖ್ಯಮಂತ್ರಿಗಳನ್ನು ಹಿಡಿಕೊಂಡು ಅಲ್ಲಾಡಿಸೋಕೆ ಬತ್ತಿಯಾ ಎಂದು ಕಿಡಿ ಕಾರಿದ್ದಾರೆ.

ಕುಮಾರಸ್ವಾಮಿ ಅವರ ತಾಯಿ ಚನ್ನಮ್ಮ ಅವರಿಗೂ ಐಟಿ ನೊಟೀಸ್ ಕೊಟ್ಟಿದ್ರು.. ಯಾಕೆ ಅಂತಾ ಗೊತ್ತಾ? ಏನಾಯ್ತು ನೊಟೀಸ್, ನರೇಂದ್ರ ಮೋದಿ, ಮತ್ತು ಅಮಿತ್ ಶಾ ಕೈ ಕಾಲು ಹಿಡಕೊಂಡ್ರು ಎಂದರು. ಐಟಿ ಮತ್ತು ಇಡಿಯವರು ಸುಮ್ಮನೆ ನೊಟೀಸ್ ಕೊಡುವುದಿಲ್ಲ ಎಂದರು,

ಅವರ ಸಹೋದರ ಬಾಲಕೃಷ್ಣಗೌಡ ಅವರ ಆಸ್ತಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಂದೇ ವರ್ಷದಲ್ಲಿ ಏಕಾ ಏಕಿ 1000 ಕೋಟಿ ಗೆ ಏರಿತು. ಅದರ ಬಗ್ಗೆ ತನಿಖೆ ನಡೆಸಲಿ. ಆಮೇಲೆ ನಮ್ಮ ವಿರುದ್ಧ ತನಿಖೆ ನಡೆಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಆಲೂಗೆಡ್ಡೆ ಬೆಳೆದು ಸಂಪಾದಿಸಿದ್ರಾ ಎಂದು ಪ್ರಶ್ನಿಸಿದ್ದಾರೆ.

ಬರೀ ಬ್ಲ್ಯಾಕ್ ಮೇಲ್ ಮಾಡೋದೆ ಜೀವನ ಆಗೋಗಿದೆ. ಅಸಹ್ಯ ಆಗುತ್ತೆ. ಕತ್ತೆ ಮೇಯಿಸೋಕೆ ಸಿಎಂ ಆಗಿದ್ರಂತಾ, ನನಗೆ ಡಿಕೆ ಶಿವಕುಮಾರ್ ಸಹಕಾರ ನೀಡಿಲ್ಲ ಎಂದು ಆವಾಗಲೇ ರಾಜಿನಾಮೆ ಕೊಟ್ಟು ಬರುಬೇಕಿತ್ತು ಎಂದಿದ್ದಾರೆ.

2018 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ರಲ್ಲಾ ಅವಾಗ ಎಲ್ಲವನ್ನೂ ಸರಿಮಾಡಬಹುದಿತ್ತಲ್ಲಾ, 2 ಸಲ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಗೆಣಸು ಕೀಳ್ತಿದ್ರಾ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನೈಸ್ ವಿಷಯ ಆರಂಭವಾಗಿದ್ದು 1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಆರಂಭವಾಗಿತ್ತು, ಆಮೇಲೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸರಿ ಮಾಡಬಹುದಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮಾತನಾಡಬಹುದಿತ್ತು. ಈಗ ಅನವಾಶ್ಯಕವಾಗಿ ಕ್ಯಾಸೆಟ್ ಬಿಡ್ತಿನಿ ಅದೂ ಇದು ಅಂತಾ ಹೇಳಿಕೊಂಡು ತಿರುಗಾಡ್ತಿದ್ದಾರೆ. ಈ ಬ್ಲ್ಯಾಕ್ ಮೇಲರ್ ಗಳಿಗೆ ನೀವು ಮಾಧ್ಯಮದವರು ಯಾಕೆ ಮಣೆ ಹಾಕ್ತೀರಾ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.