ದೇಶ

ಬಾಲಕನ ಮೊಮೋಸ್ ತಿನ್ನುವ ಚಟಕ್ಕೆ ಮನೆಯಲ್ಲಿದ್ದ ಚಿನ್ನಾಭರಣ ಮಾಯ, ಹೇಗೆ ಅಂತೀರಾ ಈ ಸುದ್ದಿ ಓದಿ...

ಪ್ರಥಮೇಶ್ ಕುಮಾರ್ ಮಿಶ್ರ ಎಂಬ 7ನೇ ತರಗತಿ ಬಾಲಕನಿಗೆ ಇದ್ದ ಒಂದೇ ಒಂದು ದೌರ್ಬಲ್ಯವೆಂದರೆ ಮೊಮೋಸ್ ತಿನ್ನಬೇಕೆನ್ನುವ ಅತಿಯಾದ ಆಸೆ.

ಬಾಲಕನ ಮೊಮೋಸ್ ತಿನ್ನುವ ಚಟಕ್ಕೆ ಮನೆಯಲ್ಲಿದ್ದ ಚಿನ್ನಾಭರಣ ಮಾಯ, ಹೇಗೆ ಅಂತೀರಾ ಈ ಸುದ್ದಿ ಓದಿ...
ಮೊಮೋಸ್
Published On :

ಲಕ್ನೋ: 7ನೇ ತರಗತಿ ಬಾಲಕನ ಮೊಮೋಸ್ ತಿನ್ನುವ ಚಟ ಆತನ ಕುಟುಂಬವನ್ನು ಸಂಕಷ್ಟಕ್ಕೀಡು ಮಾಡಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ದೋರಿಯಾ ಜಿಲ್ಲೆಯ ಭಗವಾನ್‌ಪುರ ತಿವಾರಿ ಗ್ರಾಮದಲ್ಲಿ ನಡೆದಿದೆ.

ಅಷ್ಟಕ್ಕೂ ಆಗಿದ್ದೇನು?

ಪ್ರಥಮೇಶ್ ಕುಮಾರ್ ಮಿಶ್ರ ಎಂಬ 7ನೇ ತರಗತಿ ಬಾಲಕನಿಗೆ ಇದ್ದ ಒಂದೇ ಒಂದು ದೌರ್ಬಲ್ಯವೆಂದರೆ ಮೊಮೋಸ್ ತಿನ್ನಬೇಕೆನ್ನುವ ಅತಿಯಾದ ಆಸೆ. ಡಿಯೋರಿಯಾ-ಕಸ್ಯ ರಸ್ತೆಯಲ್ಲಿರುವ ದುಮ್ರಿ ಚೌರಾಹಾ ಬಳಿ, ಮೋಮೋ ಅಂಗಡಿಯು ಇತ್ತು, ಪ್ರಥಮೇಶ್ ಅಲ್ಲಿಗೆ ಯಾವಾಗಲೂ ಭೇಟಿ ನೀಡುತ್ತಿದ್ದ.

ಈತನ ಮೊಮೋಸ್ ತಿನ್ನುವ ಹುಚ್ಚನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ಸ್ಥಳೀಯರಾದ ದೀಪಕ್, ರಾಕೇಶ್ ಮತ್ತು ಪಿಂಟು. ಆರಂಭದಲ್ಲಿ ಅವನಿಗೆ ಪ್ರತಿನಿತ್ಯ ಉಚಿತವಾಗಿ ಮೊಮೋಸ್ ತಿನ್ನಲು ಕೊಟ್ಟು ಪುಸಲಾಯಿಸಿ ಮೋಸ ಮಾಡಲು ಹೊಂಚು ಹಾಕುತ್ತಿದ್ದರು.

ಕೊನೆಗೆ ಬರಬರುತ್ತಾ ಭಾರೀ ಡಿಮ್ಯಾಂಡ್ ಮಾಡಲು ಆರಂಭಿಸಿದರು, ಅದರೆಂದರೆ ನೀನು ಮನೆಯಿಂದ ಚಿನ್ನ ತರಬೇಕೆಂದು. ಬಾಲಕನಿಗೆ ಉಚಿತವಾಗಿ ಮೊಮೋಸ್ ನೀಡಿ ಆಸೆ ಹುಟ್ಟಿಸಿ ಮನೆಯಿಂದ ಚಿನ್ನ ಕದ್ದುಕೊಂಡು ಬಾ ಎಂದು ಪುಸಲಾಯಿಸಿದರು. ಬಾಲಕ ಮೊಮೋಸ್ ಆಸೆಯಿಂದ ತಾನು ತಪ್ಪು ಮಾಡುತ್ತಿದ್ದೇನೆಂದು ಭಾವಿಸದೆ ಮನೆಯ ಕಪಾಟಿನಿಂದ ತಂದೆ-ತಾಯಿಗೆ ಗೊತ್ತಾಗದೆ ಚಿನ್ನ ಕದ್ದು ತೆಗೆದುಕೊಂಡು ಹೋಗಿ ಮೊಮೋಸ್ ಅಂಗಡಿಯವರಿಗೆ ನೀಡುತ್ತಿದ್ದ. ಹೀಗೆ ಮನೆಯಲ್ಲಿದ್ದ ಆಭರಣ ಒಂದೊಂದೇ ಮಾಯವಾಗುತ್ತಿತ್ತು.

ಒಂದು ದಿನ ಬಾಲಕ ಪ್ರಥಮೇಶನ ತಂದೆ ವಿಮಲೇಶ್ ಕುಮಾರ್ ಮಿಶ್ರ ಅವರ ಸೋದರಿ ಬಂದು ತನ್ನ ಚಿನ್ನವನ್ನು ತೆಗೆದುಕೊಂಡು ಹೋಗಲು ಅಣ್ಣನ ಮನೆಗೆ ಬಂದಾಗಲೇ ವಿಷಯ ಮನೆಯವರಿಗೆ ಗೊತ್ತಾಗಿದ್ದು. ಕಪಾಟು ತೆರೆದು ನೋಡಿದರೆ ಅವರಿಗೆ ಅಚ್ಚರಿ ಮತ್ತು ಆಘಾತ ಕಾದಿತ್ತು. ಅಲ್ಲಿಟ್ಟಿದ್ದ ಬೆಲೆಬಾಳುವ ಆಭರಣಗಳಾದ ನೆಕ್ಲೆಸ್, ಬಳೆ, ಚೈನು, ಉಂಗುರ ಯಾವುದೂ ಇರಲಿಲ್ಲ.

ಮನೆಯವರೆಲ್ಲಾ ಭಯ ಮತ್ತು ಗಾಬರಿಯಿಂದ ಚಿನ್ನ ಎಲ್ಲಿಗೆ ಹೋಯಿತು ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದರು, ಇದನ್ನೆಲ್ಲ ನಿಂತು ನೋಡುತ್ತಿದ್ದ ಬಾಲಕ ಪ್ರಥಮೇಶ ಅಳುತ್ತಾ ಸತ್ಯ ಹೇಳಿಯೇಬಿಟ್ಟ. ತಪ್ಪೊಪ್ಪಿಕೊಂಡ. ಮೊಮೋಸ್ ಫ್ರೀಯಾಗಿ ನೀಡುತ್ತಿದ್ದುದಕ್ಕೆ ಚಿನ್ನ ಕದ್ದುಕೊಂಡು ಹೋಗಿ ಕೊಡುತ್ತಿದ್ದೆ ಎಂದು ಮನೆಯವರ ಮುಂದೆ ಸತ್ಯ ತಿಳಿಸಿದ.

ಪ್ರಥಮೇಶ್ ನ ಪೋಷಕರು ಪೊಲೀಸರಿಗೆ ದೂರು ನೀಡಿದರು. ಮೊಮೋಸ್ ತೆಗೆದುಕೊಂಡಿದ್ದಕ್ಕೆ ಪ್ರಥಮೇಶ ಕೊಟ್ಟ ಚಿನ್ನವನ್ನು ವಶಪಡಿಸಿಕೊಂಡು ಲೆಕ್ಕ ಹಾಕಿದರು, ಬರೋಬ್ಬರಿ 85 ಲಕ್ಷ ರೂಪಾಯಿ ಮೌಲ್ಯದ ಚಿನ್ನವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.