ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ; ಯುವ ಪ್ರತಿಭೆಗಳಿಗೆ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ? ಆಡಿಷನ್ ಯಾವಾಗ? ಇಲ್ಲಿದೆ ವಿವರ...
ನಮ್ಮನ್ ನೋಡ್ಲಿಕ್ಕೆ ನೀವ್ ಬಂದಿದಿರಿ ನಿಮ್ಮನ್ ನೋಡ್ಲಿಕ್ಕೆ ನಾವ್ ಬರ್ತಿದ್ದೇವೆ. ರಿಷಬ್ ಶೆಟ್ಟಿ ಫಿಲಂಸ್ ಕಡೆಯಿಂದ ಪ್ರತಿಭಾವಂತರಿಗೆ ಸುವರ್ಣ ಅವಕಾಶ ಎಂದು ರಿಷಬ್ ಶೆಟ್ಟಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ದೂರದೃಷ್ಟಿಯುಳ್ಳ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು 'ಕಾಂತಾರ' ನಂತರ ಹೊಸ ಸಿನಿಮಾಗೆ ತಯಾರಿ ಆರಂಭಿಸಿದ್ದಾರೆ.
ತಮ್ಮ ಹೊಸ ಸಿನಿಮಾಗಾಗಿ ಉದಯೋನ್ಮುಖ ಪ್ರತಿಭಾವಂತ ನಟ, ನಟಿಯರ ಹುಡುಕಾಟದಲ್ಲಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು, ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಲು ಆಡಿಷನ್ ಕರೆದಿದ್ದಾರೆ.
ನಮ್ಮನ್ ನೋಡ್ಲಿಕ್ಕೆ ನೀವ್ ಬಂದಿದಿರಿ ನಿಮ್ಮನ್ ನೋಡ್ಲಿಕ್ಕೆ ನಾವ್ ಬರ್ತಿದ್ದೇವೆ. ರಿಷಬ್ ಶೆಟ್ಟಿ ಫಿಲಂಸ್ ಕಡೆಯಿಂದ ಪ್ರತಿಭಾವಂತರಿಗೆ ಸುವರ್ಣ ಅವಕಾಶ ಎಂದು ರಿಷಬ್ ಶೆಟ್ಟಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಸಿನಿಮಾ ರಂಗದ ನಿಮ್ಮ ಪಯಣ ಇಲ್ಲಿಂದಲೇ ಆರಂಭವಾಗಬಹುದು. ಒಂದು ಹೊಸ ಕಥೆ ರೂಪುಗೊಳ್ಳುತ್ತಿದ್ದು, 'ರಿಷಬ್ ಶೆಟ್ಟಿ ಫಿಲ್ಮ್ಸ್'ನ ಈ ರೋಚಕ ಹೊಸ ಯೋಜನೆಗೆ ನಾವು ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದೇವೆ. ನಿಮ್ಮಲ್ಲಿ ಅದಕ್ಕೆ ಬೇಕಾದ ಸಾಮರ್ಥ್ಯವಿದೆ ಎಂದು ನಿಮಗೆ ಅನ್ನಿಸಿದರೆ, ಸಿನಿಮಾ ಜಗತ್ತಿಗೆ ಕಾಲಿಡಲು ಇದೊಂದು ಉತ್ತಮ ಅವಕಾಶವಾಗಬಹುದು. ಬನ್ನಿ, ಈ ಪಯಣದ ಭಾಗವಾಗಿ," ಎಂದು ರಿಷಬ್ ಹೇಳಿದ್ದಾರೆ.
ಅಕ್ಟೋಬರ್ 2 ರಂದು ವಿಜಯ ಕಾಲೇಜಿನಲ್ಲಿ(ಜಯನಗರ 4ನೇ ಬ್ಲಾಕ್) ಬೆಳಿಗ್ಗೆ 9:00 ರಿಂದ ಸಂಜೆ 6:00 ರವರೆಗೆ ಆಡಿಷನ್‌ಗಳು ನಡೆಯಲಿದೆ.
ಹೊಸಬರು ಅರ್ಜಿ ಸಲ್ಲಿಸಲು ಸ್ವಾಗತವಿದ್ದು, ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಹಾಗೂ ಉತ್ತರ ಕರ್ನಾಟಕದ ಆಡುಭಾಷೆಯನ್ನು (ಶೈಲಿಯನ್ನು) ಸುಲಲಿತವಾಗಿ ಬಳಸಬಲ್ಲ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



