ದೇಶ

Punjab: ಗ್ಯಾಂಗ್ ಸ್ಟರ್ - ಟೆರರ್ ಮಾಡ್ಯುಲ್ ಪತ್ತೆ; ಗ್ರೆನೇಡ್ ದಾಳಿಗೆ ಸ್ಕೆಚ್; ವಿದೇಶಿ ಹ್ಯಾಂಡ್ಲರ್ ಗಳು ನಿಯೋಜಿಸಿದ್ದ ಐವರ ಬಂಧನ!

ಬಂಧಿತರನ್ನು ಪಾಕಿಸ್ತಾನ, ಕೆನಡಾ ಮತ್ತು ಯುರೋಪ್‌ನಿಂದ ಕಾರ್ಯನಿರ್ವಹಿಸುತ್ತಿರುವ ಹ್ಯಾಂಡ್ಲರ್‌ಗಳು ಹತ್ಯೆಯ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

Punjab: ಗ್ಯಾಂಗ್ ಸ್ಟರ್ - ಟೆರರ್ ಮಾಡ್ಯುಲ್ ಪತ್ತೆ; ಗ್ರೆನೇಡ್ ದಾಳಿಗೆ ಸ್ಕೆಚ್; ವಿದೇಶಿ ಹ್ಯಾಂಡ್ಲರ್ ಗಳು ನಿಯೋಜಿಸಿದ್ದ ಐವರ ಬಂಧನ!
ಸಾಂದರ್ಭಿಕ ಚಿತ್ರ
Published On :

ಚಂಡೀಗಢ: ಪಂಜಾಬ್ ಪೊಲೀಸರು ಐವರನ್ನು ಬಂಧಿಸುವುದರೊಂದಿಗೆ ಗ್ಯಾಂಗ್ ಸ್ಟರ್- ಟೆರರ್ ಮಾಡ್ಯುಲ್ ಪತ್ತೆ ಹಚ್ಚಿದ್ದಾರೆ. ಕಳೆದ ಮೂರು ವಾರಗಳಲ್ಲಿ ಅಂತಹ ಏಳು ಮಾಡ್ಯೂಲ್‌ಗಳನ್ನು ಪತ್ತೆ ಹಚ್ಚಲಾಗಿದೆ.

ಬಂಧಿತರನ್ನು ಪಾಕಿಸ್ತಾನ, ಕೆನಡಾ ಮತ್ತು ಯುರೋಪ್‌ನಿಂದ ಕಾರ್ಯನಿರ್ವಹಿಸುತ್ತಿರುವ ಹ್ಯಾಂಡ್ಲರ್‌ಗಳು ಹತ್ಯೆಯ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ತನ್ನ ಹ್ಯಾಂಡ್ಲರ್‌ಗಳ ಮೂಲಕ, ಹ್ಯಾಂಡ್ ಗ್ರೆನೇಡ್‌ಗಳ ನಿರ್ವಹಣೆ ಮತ್ತು ಸ್ಫೋಟಿಸುವ ಕುರಿತು ಯೂಟ್ಯೂಬ್ ವೀಡಿಯೊಗಳ ಮೂಲಕ ತರಬೇತಿ ನೀಡುತಿತ್ತು ಎಂದು ಮೂಲಗಳು ತಿಳಿಸಿವೆ.

ಬಂಧಿತರ ಮೊಬೈಲ್ ಫೋನ್ ಗಳಿಂದ ಈ ವಿಡಿಯೋಗಳು ಮತ್ತು ವಾಟ್ಸಾಪ್ ಮೂಲಕ ಕಳುಹಿಸಲಾದ ನಂಬರ್ ಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.

ಬಂಧಿತರಲ್ಲಿ ಇಬ್ಬರು ಲುಧಿಯಾನದಲ್ಲಿ ಭಯೋತ್ಪಾದಕ ದಾಳಿ ನಡೆಸಲು ರಾಜಸ್ಥಾನದಿಂದ ಬಂದಿದ್ದರು. ಇತರ ಮೂವರು ಪಂಜಾಬ್‌ನ ಫಿರೋಜ್‌ಪುರದವರಾಗಿದ್ದಾರೆ. ಆರೋಪಿಗಳಿಗೆ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಜಸ್ವೀರ್ ಅಲಿಯಾಸ್ ಚೌಧರಿ ಗ್ರೆನೇಡ್ ದಾಳಿ ನಡೆಸುವ ಕೆಲಸ ನಿಯೋಜಿಸಿದ್ದ.

ಗ್ರೆನೇಡ್ ದಾಳಿ ನಡೆಸಲು ಬಿಹಾರ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಅವರ ವಿದೇಶಿ ಸಂಪರ್ಕಗಳನ್ನು ಪತ್ತೆಹಚ್ಚಲು ರಾಷ್ಟ್ರೀಯ ತನಿಖಾ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಲುಧಿಯಾನ ಪೊಲೀಸ್ ಆಯುಕ್ತ ಸ್ವಪನ್ ಶರ್ಮಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.