ಶಾಸಕನ ಫಾರ್ಮ್ ಹೌಸ್ ನಲ್ಲಿ ಪೊಲೀಸರಿಂದಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್; ರಕ್ಷಿಸಬೇಕಾದ CRPF ಸಿಬ್ಬಂದಿಯೂ ಶಾಮೀಲು!
ಮಹಿಳೆ ದಾಖಲಿಸಿರುವ ದೂರಿನ ಪ್ರಕಾರ, ಪರಿಚಯವಿರುವವರ ಆಹ್ವಾನದ ಮೇರೆಗೆ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಲು ಆಕೆ ಹರ್ಯಾಣದ ಫತೇಬಾದ್ ನಿಂದ ಆಮ್ರೋಹಾ ಜಿಲ್ಲೆಗೆ ಆಗಮಿಸಿದ್ದರು.

ಅಮ್ರೋಹಾ: ಧಾರ್ಮಿಕ ಟ್ರಿಪ್ ಗೆ ಮಹಿಳೆಯೊಬ್ಬರನ್ನು ಆಹ್ವಾನಿಸಿ, ಶಾಸಕನೋರ್ವನ ಫಾರ್ಮ್ ಹೌಸ್ ನಲ್ಲಿ ಆಕೆಯ ಮೇಲೆ ಪೊಲೀಸರು ಗ್ಯಾಂಗ್ ರೇಪ್ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ವರದಿಯಾಗಿದೆ.
ಮಹಿಳೆ ದಾಖಲಿಸಿರುವ ದೂರಿನ ಪ್ರಕಾರ, ಪರಿಚಯವಿರುವವರ ಆಹ್ವಾನದ ಮೇರೆಗೆ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಲು ಆಕೆ ಹರ್ಯಾಣದ ಫತೇಬಾದ್ ನಿಂದ ಅಮ್ರೋಹಾ ಜಿಲ್ಲೆಗೆ ಆಗಮಿಸಿದ್ದರು.
ಸೆ.21 ರಂದು ಆಕೆ ಮುಜಾಫರ್ ನಗರದ ನಿವಾಸಿಯಾಗಿದ್ದ ಸಿಆರ್ ಪಿಎಫ್ ಇನ್ಸ್ ಪೆಕ್ಟರ್ ಮೋಹಿತ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಈ ಬಳಿಕ ಅವರು ಮೀರತ್ ಗೆ ತೆರಳಿದ್ದರು. ಅಲ್ಲಿಂದ ಮೋಹಿತ್ ನ ಸಿಆರ್ ಪಿಎಫ್ ಸಹೋದ್ಯೋಗಿ ಮುಖ್ಯಪೇದೆಯಾಗಿದ್ದ ರಾಜಸ್ಥಾನ ಮೂಲದ ಲಲಾರಾಮ್ ಯಾದವ್ ಸಹ ಇವರ ಜೊತೆ ಆಗಮಿಸಿದರು.
ಬಳಿಕ ಸೆ.22 ರಂದು ಸಂಜೆ ಹಸನ್ಪುರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಂಜಯ್ ತೋಮರ್ ಅವರೊಂದಿಗೆ ಸೇರಿದ ಇಬ್ಬರು ಮಹಿಳೆಯನ್ನು ಹಸನ್ ಪುರ-ಅತ್ರಾಸಿ ಬಳಿ ಇರುವ ಉತ್ತರಾಖಂಡ್ ಶಾಸಕರೊಬ್ಬರ ಫಾರ್ಮ್ ಹೌಸ್ ಗೆ ಕರೆದೊಯ್ದರು ಅಲ್ಲೇ ಹತ್ತಿರದಲ್ಲಿ ಎರಡು ಕೊಠಡಿಗಳ ರೂಮ್ ನ್ನೂ ಸಹ ಬಾಡಿಗೆಗೆ ಪಡೆದರು. "ಮುಖ್ಯ ಪೇದೆ ಪ್ರಮೋದ್ ಮದ್ಯ ಹಾಗೂ ಆಹಾರ ತೆಗೆದುಕೊಂಡು ಫಾರ್ಮ್ ಹೌಸ್ ಗೆ ಬಂದರು. ಈ ವೇಳೆ ಮೋಹಿತ್, ಲಲಾರಾಮ್ ಹಾಗೂ ಸಂಜಯ್ ಎಂಬುವವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ಪ್ರಮೋದ್ ಎಂಬಾತನೂ ಅತ್ಯಾಚಾರವೆಸಗಲು ಬಂದಾಗ ಆತನನ್ನು ತಳ್ಳಿ ಕೊಠಡಿ ಒಳಗಿನಿಂದ ಬಾಗಿಲು ಹಾಕಿಕೊಂಡೆ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಪ್ರಾಥಮಿಕ ತನಿಖೆಯಲ್ಲಿ ಘಟನೆ ನಡೆದ ಸ್ಥಳ ಫಾರಮ್ ಹೌಸ್ ಉತ್ತರಾಖಂಡ್ ಶಾಸಕರ ಫಾರಮ್ ಹೌಸ್ ಎಂಬುದು ತಿಳಿದುಬಂದಿದೆ. ತನಿಖೆ ಪ್ರಗತಿಯಲ್ಲಿದ್ದು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



