Viral Video: ಕ್ಷಣಮಾತ್ರದಲ್ಲಿ ಮರವೇರಿ ಹುಲಿ ದಾಳಿಯಿಂದ ಪಾರಾದ ಅರಣ್ಯ ಸಿಬ್ಬಂದಿ
ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಕರ್ತವ್ಯ ನಿರ್ವಹಣೆ ವೇಳೆ ಹುಲಿ ಆಗಮನ ಗ್ರಹಿಸಿದ ಇಬ್ಬರು ಸಿಬ್ಬಂದಿಗಳು ಕೂಡಲೇ ಪಕ್ಕದಲ್ಲೇ ಇದ್ದ ಮರವನ್ನು ಏರಿದ್ದಾರೆ.

ಭೋಪಾಲ್: ಅರಣ್ಯ ಸಿಬ್ಬಂದಿಯೊಬ್ಬರು ಹುಲಿ ದಾಳಿಯಿಂದ ಕ್ಷಣ ಮಾತ್ರದಲ್ಲಿ ಪಾರಾಗಿರುವ ಘಟನೆ ಮಧ್ಯಪ್ರದೇಶ ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಕರ್ತವ್ಯ ನಿರ್ವಹಣೆ ವೇಳೆ ಹುಲಿ ಆಗಮನ ಗ್ರಹಿಸಿದ ಇಬ್ಬರು ಸಿಬ್ಬಂದಿಗಳು ಕೂಡಲೇ ಪಕ್ಕದಲ್ಲೇ ಇದ್ದ ಮರವನ್ನು ಏರಿದ್ದಾರೆ. ಈ ವೇಳೆ ಓರ್ವ ಸಿಬ್ಬಂದಿ ತಮ್ಮ ಮೊಬೈಲ್ ನಿಂದ ವಿಡಿಯೋ ರೆಕಾರ್ಡ್ ಮಾಡಿದ್ದು, ಮರವೇರಿದ ಬಳಿಕ ಭಾರಿ ಗಾತ್ರದ ಹುಲಿಯೊಂದು ಅದೇ ಪ್ರದೇಶದಲ್ಲಿ ತನ್ನ ಬೇಟೆ ಅರಸುತ್ತಾ ಬರುತ್ತದೆ.
ಈ ವೇಳೆ ಮರದ ಮೇಲಿದ್ದ ಸಿಬ್ಬಂದಿ ಹುಲಿಯ ವಿಡಿಯೋ ರೆಕಾರ್ಡ್ ಮಾಡಿದ್ದು, ಕೆಲ ನಿಮಿಷಗಳ ಕಾಲ ಅಲ್ಲಿಯೇ ವಾಸನೆ ಗ್ರಹಿಸುತ್ತಿದ್ದ ಹುಲಿ ಬಳಿಕ ಅಲ್ಲಿಂದ ಹೊರಟು ಹೋಗುತ್ತದೆ. ಎದೆ ಝಲ್ ಎನ್ನಿಸುವ ಈ ವಿಡಿಯೋವನ್ನು ಅರಣ್ಯ ಅಧಿಕಾರಿ ಪ್ರವೀಣ್ ಕಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಅಲ್ಲದೆ ಅರಣ್ಯ ಸಿಬ್ಬಂದಿಗಳ ಅಪಾಯದ ಗ್ರಹಿಕೆ ಮತ್ತು ಮುಂದಾಗಬಹುದಾದ ಅಪಾಯದಿಂದ ಪಾರಾದ ಬಗೆಯನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋವನ್ನು ಅನ್ನು ಲಾಲ್ ಎಂಬ ಸಿಬ್ಬಂದಿ ರೆಕಾರ್ಡ್ ಮಾಡಿದ್ದು, ಇಬ್ಬರೂ ಇದೀಗ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



