ರಾಜ್ಯ

ಅರಣ್ಯ ಇಲಾಖೆ ಹದ್ದಿನ ಕಣ್ಣು: ಸಫಾರಿ ವಾಹನಗಳಿಗೆ GPS-ಡ್ಯಾಶ್‌ಕ್ಯಾಮ್‌ ಅಳವಡಿಕೆ ಕಡ್ಡಾಯ; ಬಂಡೀಪುರ-ನಾಗರಹೊಳೆಯಲ್ಲಿ ಹೊಸ ವ್ಯವಸ್ಥೆ ಜಾರಿಗೆ!

ವನ್ಯಜೀವಿ ಸಂಘರ್ಷ ಹಾಗೂ ಪ್ರಾಣಿಗಳ ಸಾವಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಫಾರಿ ವಾಹನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಅರಣ್ಯ ಇಲಾಖೆ ಹದ್ದಿನ ಕಣ್ಣು: ಸಫಾರಿ ವಾಹನಗಳಿಗೆ GPS-ಡ್ಯಾಶ್‌ಕ್ಯಾಮ್‌ ಅಳವಡಿಕೆ ಕಡ್ಡಾಯ; ಬಂಡೀಪುರ-ನಾಗರಹೊಳೆಯಲ್ಲಿ ಹೊಸ ವ್ಯವಸ್ಥೆ ಜಾರಿಗೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಹಲವು ಹಂತದ ಪರೀಕ್ಷೆಗಳ ಬಳಿಕ ಕರ್ನಾಟಕದ ಎರಡು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿನ ಎಲ್ಲಾ ಸಫಾರಿ ವಾಹನಗಳಲ್ಲಿ ಜಿಪಿಎಸ್‌ ಆಧಾರಿತ ಸಾಧನಗಳು ಮತ್ತು ಟ್ರ್ಯಾಕರ್‌ಗಳ ಕಾರ್ಯಾಚರಣೆ ಆರಂಭವಾಗಿದೆ.

ಸಫಾರಿ ವೇಳೆ ಪ್ರವಾಸಿಗರು ಹಾಗೂ ಅರಣ್ಯಾಧಿಕಾರಿಗಳಿಂದ ಮಾರ್ಗ ಬದಲಾವಣೆ, ನಿಗದಿತ ಮಾರ್ಗಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವ ಕುರಿತು ಹೆಚ್ಚುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.

ವನ್ಯಜೀವಿ ಸಂಘರ್ಷ ಹಾಗೂ ಪ್ರಾಣಿಗಳ ಸಾವಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಫಾರಿ ವಾಹನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವನ್ಯಜೀವಿ ವಿಭಾಗದ ಅಧಿಕಾರಿ ಕುಮಾರ್ ಪುಷ್ಕರ್ ಮಾತನಾಡಿ, ಎಲ್ಲ ಸಫಾರಿ ವಾಹನಗಳಲ್ಲಿ ಜಿಪಿಎಸ್‌ ಸಾಧನ, ಟ್ರ್ಯಾಕರ್‌ಗಳು ಹಾಗೂ ಡ್ಯಾಶ್‌ ಕ್ಯಾಮ್‌ಗಳನ್ನು ಅಳವಡಿಸಲಾಗಿದೆ. ಹಂತ ಹಂತವಾಗಿ ರಾಜ್ಯದ ಇತರ ಎಲ್ಲ ಅರಣ್ಯ ಪ್ರದೇಶಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವ್ಯವಸ್ಥೆಯ ಪ್ರಮುಖ ಉದ್ದೇಶ ವನ್ಯಜೀವಿ ಸಂಘರ್ಷ, ಪ್ರಾಣಿಗಳ ಕಾಣಿಸಿಕೊಳ್ಳುವಿಕೆ ಹಾಗೂ ಇತರ ಯಾವುದೇ ಘಟನೆಗಳ ಕುರಿತು ತ್ವರಿತವಾಗಿ ಮಾಹಿತಿ ಮತ್ತು ಎಚ್ಚರಿಕೆ ನೀಡುವುದಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದರೊಂದಿಗೆ ಸಫಾರಿ ವಾಹನಗಳ ಚಲನವಲನ ಹಾಗೂ ವನ್ಯಜೀವಿಗಳ ಚಲನವಲನದ ಮೇಲ್ವಿಚಾರಣೆಯೂ ಸಾಧ್ಯವಾಗಲಿದೆ. ಸಫಾರಿ ವಾಹನಗಳ ವೇಗ, ಸಂಚರಿಸಿದ ಮಾರ್ಗ, ತೆಗೆದುಕೊಂಡ ಸಮಯ, ವಾಹನ ನಿಲ್ಲಿಸಿದ ಸ್ಥಳ, ವನ್ಯಜೀವಿಗಳ ಕಾಣಿಸಿಕೊಳ್ಳುವಿಕೆ ಸೇರಿದಂತೆ ಹಲವು ಮಾಹಿತಿಗಳನ್ನು ಈ ಸಾಧನಗಳ ಮೂಲಕ ದಾಖಲಿಸಲಾಗುತ್ತದೆ. ಪ್ರವಾಸಿಗರ ಚಟುವಟಿಕೆಗಳ ಮೇಲೂ ನಿಗಾ ಇರಿಸಲಾಗುತ್ತದೆ. ಅಳವಡಿಸಿರುವ ಕ್ಯಾಮೆರಾಗಳು 360 ಡಿಗ್ರಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.