ಅರಣ್ಯ ಸಿಬ್ಬಂದಿ

ವೇತನ ವಿಳಂಬಕ್ಕೆ ಆಕ್ರೋಶ: ಬಂಡೀಪುರದಲ್ಲಿ ಏಪ್ರಿಲ್ 1ರಿಂದ ಅರಣ್ಯ ಸಿಬ್ಬಂದಿ ಮುಷ್ಕರ..!
ರಾಜ್ಯದಲ್ಲಿ ಸುಮಾರು 6,000 ತಾತ್ಕಾಲಿಕ ಸಿಬ್ಬಂದಿ ಇದ್ದಾರೆ. ಇವರಲ್ಲಿ 4,000ಕ್ಕೂ ಹೆಚ್ಚು ಮಂದಿ ಮುಷ್ಕರದಲ್ಲಿ ಭಾಗವಹಿಸಲು ಸಮ್ಮತಿಸಿದ್ದಾರೆ. ವಾಚರ್‌ಗಳು, ಗಾರ್ಡ್‌ಗಳು, ಡ್ರೈವರ್‌ಗಳು ಸೇರಿದಂತೆ ಅರಣ್ಯದ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೊಡಗು: ಜಾನುವಾರುಗಳನ್ನು ಬೇಟೆಯಾಡುತ್ತಿದ್ದ ಹುಲಿ ಸೆರೆ; ಮೊದಲ ಬಾರಿಗೆ ಥರ್ಮೋ ಡ್ರೋನ್ ಬಳಕೆ!
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಕೊಡಗು ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಹಲವು ಜಾನುವಾರುಗಳನ್ನು ಬೇಟೆಯಾಡಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯಿಂದಲೇ ಮರ ಕಡಿತ: Pergola ನಿರ್ಮಾಣ..!
ಹುಲಿ ಸಂರಕ್ಷಿತ ಪ್ರದೇಶಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972 (WPA) ಅಡಿಯಲ್ಲಿ ಬರುತ್ತವೆ, ಇಲ್ಲಿ ಒಂದೇ ಒಂದು ಮರವನ್ನು ಕಡಿತಗೊಳಿಸುವುದಕ್ಕೂ, ಅರಣ್ಯ ಸಂಪನ್ಮೂಲಗಳನ್ನು ಬಳಸುವುದಕ್ಕೂ ಕಟ್ಟುನಿಟ್ಟಿನ ನಿಷೇಧವಿದೆ.

Viral Video: ಕ್ಷಣಮಾತ್ರದಲ್ಲಿ ಮರವೇರಿ ಹುಲಿ ದಾಳಿಯಿಂದ ಪಾರಾದ ಅರಣ್ಯ ಸಿಬ್ಬಂದಿ
ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಕರ್ತವ್ಯ ನಿರ್ವಹಣೆ ವೇಳೆ ಹುಲಿ ಆಗಮನ ಗ್ರಹಿಸಿದ ಇಬ್ಬರು ಸಿಬ್ಬಂದಿಗಳು ಕೂಡಲೇ ಪಕ್ಕದಲ್ಲೇ ಇದ್ದ ಮರವನ್ನು ಏರಿದ್ದಾರೆ.

ಮೈಸೂರು: ಅಟ್ಟಾಡಿಸಿಕೊಂಡು ಬಂದ ಆನೆಯಿಂದ ತಪ್ಪಿಸಿಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿ ಅರಣ್ಯ ಸಿಬ್ಬಂದಿ ಸಾವು..!
ಕಬಿನಿ ಹಿನ್ನೀರಿನಲ್ಲಿರುವ ಕಾಳೇನಹಳ್ಳಿ ಹಾಡಿಯ ಶಶಾಂಕ್ (22) ಮೃತ ದುರ್ದೈವಿ. ಅರಣ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ನೌಕರನಾಗಿದ್ದ ಶಶಾಂಕ್ ಅವರು, ಎನ್.ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ: ಓರ್ವ ಬೇಟೆಗಾರ ಸಾವು
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಬೇಟೆಗಾರ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಮಹಾರಾಷ್ಟ್ರ: ಹುಲಿ ದಾಳಿಗೆ ವ್ಯಕ್ತಿ ಬಲಿ; ಅರಣ್ಯ ಸಿಬ್ಬಂದಿಗಳ ಮೇಲೆ ಗ್ರಾಮಸ್ಥರ ದಾಳಿ
ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೆಂಡಾಮಂಡಲಗೊಂಡ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿರುವ ಘಟನೆಯೊದಂದು ಮಹಾರಾಷ್ಟ್ರದ ಬಾಂದ್ರಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಹಾಸನ: ಜಿಂಕೆ ಬೇಟೆ; ರೆಸಾರ್ಟ್ ಮಾಲಿಕನ ಬಂಧನ
ಜಿಂಕೆಯನ್ನು ಬೇಟೆಯಾಡಿದ್ದ ರೆಸಾರ್ಟ್ ಮಾಲಿಕ ಶಿಶಿರ್ ಎಂಬಾತನನ್ನು ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ.

ಕಾರ್ಮಿಕರು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ರೈತರು: ನೆರವಿಗೆ ಧಾವಿಸಿ ಭತ್ತದ ನಾಟಿ ಮಾಡಿದ ಅರಣ್ಯ ಸಿಬ್ಬಂದಿ!
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಅರಣ್ಯ ಸಿಬ್ಬಂದಿಗಳು ರೈತ ಕುಟುಂಬಗಳಿಗೆ ನೆರವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಸಹಾಯ ಮಾಡಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

