AI ಬಳಸಿ ಬೆಟ್ಟದ ಮೇಲೆ ಹುಲಿ ಇದೆ ಭೀತಿ ಹುಟ್ಟಿಸಿದ ಬಾಲಕ: ಪೊಲೀಸರು ನೀಡಿದ ಶಿಕ್ಷೆ ಏನು ನೋಡಿ; Video
ಗುಡ್ಡದ ಮೇಲೆ ಹುಲಿ ಕುಳಿತಿರುವ ಚಿತ್ರವೊಂದು ಗ್ರಾಮಸ್ಥರ ಮೊಬೈಲ್ ನಲ್ಲಿ ಹರಿದಾಡಿತ್ತು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಕೊಪ್ಪಳದ ಕವಳಿ ಗ್ರಾಮದ ಜನರು ತಮ್ಮ ಗ್ರಾಮದಲ್ಲಿ ಬೃಹತ್ ಗಾತ್ರದ ಹುಲಿ ಓಡಾಡುತ್ತಿದೆ ಎಂದು ಭಾವಿಸಿ ಭಯಭೀತರಾಗಿದ್ದರು.
ಗುಡ್ಡದ ಮೇಲೆ ಹುಲಿ ಕುಳಿತಿರುವ ಚಿತ್ರವೊಂದು ಗ್ರಾಮಸ್ಥರ ಮೊಬೈಲ್ ನಲ್ಲಿ ಹರಿದಾಡಿತ್ತು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆದರೆ ಅಲ್ಲಿ ಯಾವುದೇ ಹುಲಿ ಪತ್ತೆಯಾಗಲಿಲ್ಲ.
ಅಸಲಿಗೆ ಅಲ್ಲಿ ಹುಲಿ ಇದ್ದೇ ಇರಲಿಲ್ಲ. ಈರಣ್ಣ ಹೊನ್ನುಚ್ಚಿ ಎಂಬ ಬಾಲಕ ಕೃತಕ ಬುದ್ಧಿಮತ್ತೆ (AI) ಬಳಸಿ ಈ ಚಿತ್ರವನ್ನು ಸೃಷ್ಟಿಸಿದ್ದ. ಗುಡ್ಡದ ಛಾಯಾಚಿತ್ರವೊಂದನ್ನು ಎಡಿಟ್ ಮಾಡಿ, ಅದರ ಮೇಲೆ ಹುಲಿ ಕುಳಿತಿರುವಂತೆ ಆತ ಚಿತ್ರವನ್ನು ಸಿದ್ಧಪಡಿಸಿದ್ದ. ಬಾಲಕನಿಗೆ ಪಾಠ ಕಲಿಸಬೇಕು ಎಂದು ಪೊಲೀಸರು ಆತನನ್ನು ಅದೇ ಸ್ಥಳಕ್ಕೆ ಕರೆದೊಯ್ದು, ಶಿಕ್ಷೆಯಾಗಿ 50 ಬಾರಿ ಬಸ್ಕಿ ತೆಗೆಸಿದರು.
ಕೊಪ್ಪಳದ ಕವಳಿ ಗ್ರಾಮದ ಈರಣ್ಣ ಎಂಬ ಹುಡುಗ ಎಐ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿದ ಅಸಾಮಿ. ಈರಣ್ಣ ಪೋಷಕರು ಬಡವರು. ದೈನಂದಿನ ಜೀವನ ನಿರ್ವಹಣೆಗೆ ಕೂಲಿ ಮಾಡಬೇಕಾದ ಅನಿವಾರ್ಯತೆ. ಇಂಥ ಪರಿಸ್ಥಿತಿಯಲ್ಲಿ ಒಬ್ಬರೇ ದುಡಿದರೆ ಆಗದು ಅಂತಾ ಮಗ ಈರಣ್ಣನಿಗೆ ಕೆಲಸಕ್ಕೆ ಹೋಗುವಂತೆ ಹೇಳಿದ್ದಾರೆ. ಆದರೆ ಈರಣ್ಣ ಸೋಮಾರಿತನ ಕೂಲಿ ಕೆಲಸ ಮಾಡಲು ಇಷ್ಟವಿಲ್ಲದಿರುವುದು ಹೇಗಾದರೂ ಕೂಲಿಗೆ ಹೋಗುವುದು ತಪ್ಪಿಸಲು ಇಂಥ ಅನಾಹುತ ಸೃಷ್ಟಿಸಿದ್ದಾನೆ.
ಎಐನಲ್ಲಿ ಹುಲಿ ಸೃಷ್ಟಿಸಿ, ಗುಡ್ಡದಲ್ಲಿ ಹುಲಿ ಬಂದಿದೆ ಅಂತಾ ಇನ್ಸ್‌ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದ ಯುವಕ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



