ಫ್ರಾನ್ಸ್ ಗೂ ಕಾಲಿಟ್ಟ ಭಾರತದ UPI ಪಾವತಿ: ಐಫೆಲ್ ಟವರ್ ನಲ್ಲಿ ಔಪಚಾರಿಕ ಪ್ರಾರಂಭ!
ಭಾರತದ ಯಶಸ್ವೀ ಪಾವತಿ ಮಾದರಿ ಯುಪಿಐ (Unified Payments Interface) ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಖ್ಯಾತಿ ಗಳಿಸುತ್ತಿದ್ದು, ಇದೀಗ ಪ್ರವಾಸಿಗರ ಸ್ವರ್ಗ ಫ್ರಾನ್ಸ್ ನಲ್ಲೂ ಕೂಡ UPI ಪಾವತಿ ಸೇವೆ ಆರಂಭಗೊಂಡಿದೆ.

ಪ್ಯಾರಿಸ್: ಭಾರತದ ಯಶಸ್ವೀ ಪಾವತಿ ಮಾದರಿ ಯುಪಿಐ (Unified Payments Interface) ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಖ್ಯಾತಿ ಗಳಿಸುತ್ತಿದ್ದು, ಇದೀಗ ಪ್ರವಾಸಿಗರ ಸ್ವರ್ಗ ಫ್ರಾನ್ಸ್ ನಲ್ಲೂ ಕೂಡ UPI ಪಾವತಿ ಸೇವೆ ಆರಂಭಗೊಂಡಿದೆ.
ಭಾರತವು ಶುಕ್ರವಾರ ಔಪಚಾರಿಕವಾಗಿ ಪ್ಯಾರಿಸ್ ಪ್ರವಾಸೋಧ್ಯೋಮದ ಕೇಂದ್ರ ಬಿಂದು ಐಫೆಲ್ ಟವರ್ ನಲ್ಲಿ ತನ್ನ ಯುಪಿಐ ಸೇವೆಯನ್ನು ಆರಂಭಿಸಿದೆ. ಆ ಮೂಲಕ ಭಾರತದ ಯುಪಿಐ ಪಾವತಿ ಸೇವೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಬೇಕು ಎನ್ನುವ ಪ್ರಧಾನಿ ಮೋದಿ ಅವರ ದೂರದೃಷ್ಟಿ ಇಂಬು ನೀಡುವಂತಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿ, 'ಭಾರತದ UPI ಔಪಚಾರಿಕವಾಗಿ ಐಕಾನಿಕ್ ಐಫೆಲ್ ಟವರ್‌ನಲ್ಲಿ ಬೃಹತ್ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿದ್ಯುಕ್ತ ಚಾಲನೆ ಪಡೆದಿದ್ದು, ಪ್ರಧಾನಿ ಮೋದಿ ಅವರ ಘೋಷಣೆ ಮತ್ತು UPI ಅನ್ನು ಜಾಗತಿಕವಾಗಿ ತೆಗೆದುಕೊಳ್ಳುವ ದೃಷ್ಟಿಯನ್ನು ಕಾರ್ಯಗತಗೊಳಿಸಲಾಗುತ್ತಿದೆ" ಎಂದು ಟ್ವೀಟ್ ಮಾಡಿದೆ.
ಈ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, "ಇದನ್ನು ನೋಡಲು ಅದ್ಭುತವಾಗಿದೆ. ಇದು ಯುಪಿಐನ ಜಾಗತಿಕ ಮಟ್ಟದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಮತ್ತು ಬಲವಾದ ಸಂಬಂಧಗಳನ್ನು ಬೆಳೆಸಲು ಇದು ಅದ್ಭುತ ಉದಾಹರಣೆಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಪ್ರಾಸಂಗಿಕವಾಗಿ, ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಜನವರಿ 26 ರಂದು ನವದೆಹಲಿಯಲ್ಲಿ 75 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು.
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) 2016 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಭಾರತೀಯ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ಯುಪಿಐ ಎನ್ನುವುದು ಎನ್‌ಪಿಸಿಐ ಪ್ರಕಾರ, ಹಲವಾರು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ಗೆ (ಯಾವುದೇ ಭಾಗವಹಿಸುವ ಬ್ಯಾಂಕ್‌ನ) ಕಾರ್ಯಗತಗೊಳಿಸುವ ವ್ಯವಸ್ಥೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


