ವಾಣಿಜ್ಯ

ಯುಪಿಐ ವಹಿವಾಟು ಹೊಸ ದಾಖಲೆ: 5 ವರ್ಷದಲ್ಲಿ 92 ಕೋಟಿ ರೂ. ನಿಂದ 8,375 ಕೋಟಿ ರೂ. ಗೆ ಏರಿಕೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕ್ಯಾಶ್ ಲೆಸ್ ವಹಿವಾಟಿನ ಯುಪಿಐ ದಾಖಲೆ ಬರೆದಿದ್ದು, ಕೇವಲ 5 ವರ್ಷಗಳ ಅವಧಿಯಲ್ಲಿ ತನ್ನ ವಹಿವಾಟಿನ ಪ್ರಮಾಣವನ್ನು 92 ಕೋಟಿ ರೂ ಗಳಿಂದ 8,375 ಕೋಟಿ ರೂಗೆ ಏರಿಕೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಯುಪಿಐ ವಹಿವಾಟು ಹೊಸ ದಾಖಲೆ: 5 ವರ್ಷದಲ್ಲಿ 92 ಕೋಟಿ ರೂ. ನಿಂದ 8,375 ಕೋಟಿ ರೂ. ಗೆ ಏರಿಕೆ
ಯುಪಿಐ ಪಾವತಿ
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕ್ಯಾಶ್ ಲೆಸ್ ವಹಿವಾಟಿನ ಯುಪಿಐ ದಾಖಲೆ ಬರೆದಿದ್ದು, ಕೇವಲ 5 ವರ್ಷಗಳ ಅವಧಿಯಲ್ಲಿ ತನ್ನ ವಹಿವಾಟಿನ ಪ್ರಮಾಣವನ್ನು 92 ಕೋಟಿ ರೂ ಗಳಿಂದ 8,375 ಕೋಟಿ ರೂಗೆ ಏರಿಕೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಡಿಜಿಟಲ್ ಪಾವತಿಗಳಲ್ಲಿ ಗಣನೀಯ ಏರಿಕೆಯಾಗಿದ್ದು, ಕೇವಲ 5 ವರ್ಷದಲ್ಲಿ ವಹಿವಾಟು 92 ಕೋಟಿಯಿಂದ 8,375 ಕೋಟಿಗೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ. ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಯುಪಿಐ ಪಾವತಿಗಳ ಗಣನೀಯ ವಿಸ್ತರಣೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಬೆಳವಣಿಗೆಯನ್ನು 7.8%ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ತಿಳಿಸಿದೆ. 

ಈ ಬಗ್ಗೆ ಲೋಕಸಭೆಗೆ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್ ಲಿಖಿತ ಉತ್ತರ ನೀಡಿದ್ದು, ಯುಪಿಐ ವಹಿವಾಟುಗಳು ಗಣನೀಯ ಬೆಳವಣಿಗೆಯನ್ನು ಕಂಡಿದೆ. ಆರ್ಥಿಕ ವರ್ಷ 2017-18ರಲ್ಲಿ 92 ಕೋಟಿ ಇದ್ದರೆ 2022-23 ಆರ್ಥಿಕ ವರ್ಷದಲ್ಲಿ ವಹಿವಾಟು 8,375 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (CAGR) 147% ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಅದೇ ರೀತಿಯಲ್ಲಿ ಯುಪಿಐ ವಹಿವಾಟಿನ ಮೌಲ್ಯ ಆರ್ಥಿಕ ವರ್ಷ 2017-18ರಲ್ಲಿ 1 ಲಕ್ಷ ಕೋಟಿ ರೂ. ಯಿಂದ ಆರ್ಥಿಕ ವರ್ಷ 2022-23ರಲ್ಲಿ 137 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಸಿಎಜಿಆರ್ ಶೇ.168ರಷ್ಟು ಏರಿಕೆಯನ್ನು ತೋರಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 11 ರವರೆಗೆ ಯುಪಿಐ 8,572 ಕೋಟಿ ವಹಿವಾಟುಗಳನ್ನು ಸಾಧಿಸಿದೆ. ಡಿಜಿಟಲ್ ಪಾವತಿ ವಹಿವಾಟುಗಳ ಒಟ್ಟಾರೆ ವಿಸ್ತರಣೆಗೆ ಯುಪಿಐ ಪ್ರಾಥಮಿಕ ಚಾಲಕವಾಗಿ ಹೊರಹೊಮ್ಮಿದೆ.

ಆರ್ಥಿಕ ವರ್ಷ 2022-23 ರಲ್ಲಿ ಅಂತಹ ವಹಿವಾಟುಗಳಲ್ಲಿ ಶೇ.62ರಷ್ಟು ಒಳಗೊಂಡಿದೆ. ಇದಲ್ಲದೇ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೌಲ್ಯದಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯು ಆರ್ಥಿಕ ವರ್ಷ 2021-22 ರಲ್ಲಿ ಶೇ.9.9ರಷ್ಟು ರಿಂದ ಆರ್ಥಿಕ ವರ್ಷ 2022-23 ರಲ್ಲಿ ಶೇ.7.8 ಕ್ಕೆ ಇಳಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.