ಡಿಆರ್ ಡಿಒ ಬೇಹುಗಾರಿಕೆ ಪ್ರಕರಣ: ಮಹಿಳಾ ಪಾಕ್ ಏಜೆಂಟ್ ನ್ನು ಆರೋಪಿಯನ್ನಾಗಿಸಿದ ಎಟಿಎಸ್
ಡಿಆರ್ ಡಿಒ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಮಹಿಳಾ ಪಾಕ್ ಏಜೆಂಟ್ ಳನ್ನು ಆರೋಪಿಯನ್ನಾಗಿಸಿದೆ.

ನವದೆಹಲಿ: ಡಿಆರ್ ಡಿಒ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಮಹಿಳಾ ಪಾಕ್ ಏಜೆಂಟ್ ಳನ್ನು ಆರೋಪಿಯನ್ನಾಗಿಸಿದೆ.
ಈ ಪಾಕಿಸ್ತಾನ ಏಜೆಂಟ್ ಡಿಆರ್ ಡಿಒ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರನ್ನು ಹನಿ ಟ್ರ್ಯಾಪ್ ಮಾಡಿದ್ದು, ಈಕೆಯನ್ನು ಪ್ರಕರಣದ ಸಹ ಆರೋಪಿಯನ್ನಾಗಿ ಮಾಡಲಾಗಿದೆ.
ಕುರುಲ್ಕರ್ ರಕ್ಷಣಾ ಸಂಶೋಧನೆ ಹಾಗೂ ಡಿಆರ್ ಡಿಒ ನ ಪ್ರಯೋಗಾಲಯಗಳ ಪೈಕಿ ಒಂದರಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಾಕ್ ಮಹಿಳೆಯೊಬ್ಬರಿಗೆ ಗೌಪ್ಯ ಮಾಹಿತಿ ಸೋರಿಕೆ ಆರೋಪದಡಿ ಇವರನ್ನು ಮೇ.03 ರಂದು ಎಟಿಎಸ್ ಬಂಧನಕ್ಕೊಳಪಡಿಸಿತ್ತು.
ಪಾಕ್ ಮಹಿಳೆ ಜಾರಾ ದಾಸ್ಗುಪ್ತಾ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಳು ಮತ್ತು ಕುರುಲ್ಕರ್ ಜೊತೆ ಸಂಪರ್ಕದಲ್ಲಿದ್ದಳು ಎಂದು ಮೂಲಗಳು ತಿಳಿಸಿವೆ. ಏಜೆಂಟ್ನ ಐಪಿ ವಿಳಾಸ ಪಾಕಿಸ್ತಾನದಲ್ಲಿ ಪತ್ತೆಯಾದ ನಂತರ ಎಟಿಎಸ್ ಮೊದಲ ಮಾಹಿತಿ ವರದಿಗೆ (ಎಫ್ಐಆರ್) “ಜಾರಾ ದಾಸ್ಗುಪ್ತಾ” ಎಂಬ ಹೆಸರನ್ನು ಸೇರಿಸಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


