ದೇಶ

ಟ್ರೂ ಕಾಲರ್ ಐಡಿ ಜೊತೆ ಭಾರತೀಯ ರೈಲ್ವೇ ಒಪ್ಪಂದ: ನಕಲಿ ಐಆರ್ ಸಿಟಿಸಿ ಸಂದೇಶಗಳಿಗೆ ಕಡಿವಾಣ

ರೈಲ್ವೇ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ಬುಕಿಂಗ್ ಸಂದೇಶಗಳ ಅಧಿಕೃತತೆಯನ್ನು ಟ್ರೂಕಾಲರ್ ಖಚಿತಪಡಿಸಲಿದೆ. ಭಾರತೀಯ ರೈಲ್ವೇ ಅಧಿಕೃತ ಟಿಕ್ ಮಾರ್ಕನ್ನು ಟ್ರೂಕಾಲರ್ ಒದಗಿಸಲಿದೆ.

ಟ್ರೂ ಕಾಲರ್ ಐಡಿ ಜೊತೆ ಭಾರತೀಯ ರೈಲ್ವೇ ಒಪ್ಪಂದ: ನಕಲಿ ಐಆರ್ ಸಿಟಿಸಿ ಸಂದೇಶಗಳಿಗೆ ಕಡಿವಾಣ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮೊಬೈಲ್ ಕರೆ ಮಾಡುವವರ ಗುರುತು ಪತ್ತೆ ಹಚ್ಚುವ ಟ್ರೂ ಕಾಲರ್ ಆಪ್ ತಾನು ಭಾರತೀಯ ರೈಲ್ವೇ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದೆ. 

ಐ ಆರ್ ಸಿ ಟಿ ಸಿ ಜಾಲತಾಣದಿಂದ ರೈಲ್ವೇ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ಬುಕಿಂಗ್ ಸಂದೇಶಗಳ ಅಧಿಕೃತತೆಯನ್ನು ಟ್ರೂಕಾಲರ್ ಖಚಿತಪಡಿಸಲಿದೆ. ಭಾರತೀಯ ರೈಲ್ವೇ ಟಿಕ್ ಮಾರ್ಕನ್ನು ಟ್ರೂಕಾಲರ್ ಒದಗಿಸಲಿದೆ. ಇದರಿಂದಾಗಿ ವಂಚನೆಗಳನ್ನು ತಡೆಗಟ್ಟಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ. 

ಅಲ್ಲದೆ ರೈಲ್ವೇ ಸಹಾಯವಾಣಿ 139 ಜೊತೆ ವ್ಯವಹರಿಸುವಾಗ ಭಾರತೀಯ ರೈಲ್ವೇ ಅಧಿಕೃತ ಲೋಗೋ ವನ್ನು ತೋರ್ಪಡಿಸಲಿದೆ. 2007ರಲ್ಲೇ ಭಾರತೀಯ ರೈಲ್ವೇ 139 ಸಹಾಯವಾಣಿಯನ್ನು ಭಾರತ್ ಬಿಪಿಒ ಸಹಯೋಗದಲ್ಲಿ  ಪ್ರಾರಂಭಿಸಿತ್ತು. ದಿನಂಪ್ರತಿ ಸುಮಾರು 2 ಲಕ್ಷ ರೈಲ್ವೇ ಗ್ರಾಹಕರು ಈ ಸೇವೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. 

Related Article

ಕಗ್ಗತ್ತಲಲ್ಲಿ ಹೂಡಿ ರೈಲ್ವೇ ಕೆಳ ಸೇತುವೆ: ವಾಹನ ಸವಾರರಿಗೆ ಅಪಾಯ!

ಬೆಂಗಳೂರು: ರೈಲ್ವೇ ಹಳಿ ಮೇಲೆ ಮಲಗಿ ಆತ್ಯಹತ್ಯೆಗೆ ಯತ್ನಿಸಿದರೂ ಬದುಕುಳಿದ ಬಿಎಂಟಿಸಿ ಮಹಿಳಾ ನೌಕರೆ!

ರಾಯ್​ಪುರ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ; 6 ಸಿಆರ್'ಪಿಎಫ್ ಯೋಧರಿಗೆ ಗಾಯ

ರೈಲ್ವೇ ಸ್ಟೇಷನ್ ಪಾರ್ಕಿಂಗ್ ನಲ್ಲಿ ವಿನಾಕಾರಣ 19 ಕಾರು ಗಾಜುಗಳನ್ನು ಪುಡಿ ಮಾಡಿದ್ದ ಕಿಡಿಗೇಡಿ ಬಂಧನ

ನಕಲಿ ರೈಲ್ವೇ ಟಿಕೆಟ್ ಮಾರಾಟ: ಇಬ್ಬರು ಅಪ್ರಾಪ್ತ ಬಾಲಕರ ರಕ್ಷಿಸಿದ ಆರ್ ಪಿಎಫ್ ಸಿಬ್ಬಂದಿ

ಹೈದರಾಬಾದ್: 6 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.