ರೈಲ್ವೇ ಸ್ಟೇಷನ್ ಪಾರ್ಕಿಂಗ್ ನಲ್ಲಿ ವಿನಾಕಾರಣ 19 ಕಾರು ಗಾಜುಗಳನ್ನು ಪುಡಿ ಮಾಡಿದ್ದ ಕಿಡಿಗೇಡಿ ಬಂಧನ
ಕಾರು ಪುಡಿಗಟ್ಟಿದ್ದ ದಿನ ರಾತ್ರಿ ಆರೋಪಿ ಯುವಕ ಮನೆಯಲ್ಲಿ ಜಗಳವಾಡಿದ್ದ. ಮಧ್ಯರಾತ್ರಿ ಅದೇ ಸಿಟ್ಟಲ್ಲಿ ಮನೆಯಿಂದ ಹೊರಬಿದ್ದಿದ್ದ.

ತಿರುವನಂತಪುರ: ರೈಲ್ವೇ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ 19 ಕಾರುಗಳ ಗಾಜನ್ನು ರಾತ್ರೋ ರಾತ್ರಿ ಪುಡಿಗಟ್ಟಿದ್ದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ 19 ವರ್ಷದ ಯುವಕ ಅಬ್ರಾಹಂ ಎಂದು ತಿಳಿದುಬಂದಿದೆ.
ಕಾರು ಪುಡಿಗಟ್ಟಿದ್ದ ದಿನ ರಾತ್ರಿ ಆರೋಪಿ ಯುವಕ ಮನೆಯಲ್ಲಿ ಜಗಳವಾಡಿದ್ದ. ಮಧ್ಯರಾತ್ರಿ ಅದೇ ಸಿಟ್ಟಲ್ಲಿ ಮನೆಯಿಂದ ಹೊರಬಿದ್ದಿದ್ದ ಯುವಕನಿಗೆ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ್ದ ಕಾರುಗಳು ಕಾಣಿಸಿದ್ದವು. ಹತ್ತಿರದಲ್ಲಿ ಕಾವಲುಗಾರ ಇರಲಿಲ್ಲವಾದುದರಿಂದ ಕಾರುಗಳನ್ನು ಜಖಂಗೊಳಿಸಿದ ಎಂದು ವಿಚಾರಣೆ ಸಂದರ್ಭದಲ್ಲಿ ಆರೋಪಿ ಬಾಯಿಬಿಟ್ಟಿದ್ದಾನೆ.
ಇದಕ್ಕೂ ಮುನ್ನ ಕಾರುಗಳ ಕಳ್ಳತನಕ್ಕೆ ಆರೋಪಿ ಯತ್ನಿಸಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಕಾರುಗಳಲ್ಲಿ ಕೂಲಿಂಗ್ ಗ್ಲಾಸ್ ಬಿಟ್ಟರೆ ಇತರೆ ಯಾವ ವಸ್ತುಗಳೂ ಕಳವಾಗಿರಲಿಲ್ಲ.
Related Article
ಯಾರದೋ ಕಾರು ಮಾರಿ ಇವರ ಕಾರುಬಾರು: ಕಾರು ಕಳ್ಳರ ಬಂಧನ, ಅವರ ನೆಟ್ವರ್ಕ್ ಕಾರ್ಯಾಚರಣೆ ನಡೆಸುತ್ತಿದ್ದ ಕಥೆ...
ವಿರಾಟ್ ಕೊಹ್ಲಿ ಬಳಿಯಿದ್ದ ಲ್ಯಾಂಬೋರ್ಗಿನಿ ಕಾರು ಮಾರಾಟಕ್ಕಿದೆ: ಬೆಲೆ 1.35 ಕೋಟಿ ರೂ.
ತಮಿಳುನಾಡು: ಮಳೆಯಿಂದ ಜಲಾವೃತಗೊಂಡ ರೈಲ್ವೆ ಸಬ್ ವೇಯಲ್ಲಿ ಕಾರು ಸಿಲುಕಿ ವೈದ್ಯ ಸಾವು
ಸ್ನೇಹಿತರಿಂದ ಅಜಾಗರೂಕ ವಾಹನ ಚಾಲನೆ: ಪೊಲೀಸರಿಂದ ಬೆಂಗಳೂರು ಉದ್ಯಮಿಯ ಬೆಂಝ್ ಕಾರು ವಶ
ಚಿಕ್ಕಮಗಳೂರು: ಕಾರು ಸಮೇತ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ
ಯುಬಿ ಸಿಟಿ ಬಳಿ ಆರ್'ಟಿಒ ಅಧಿಕಾರಿಗಳ ದಿಢೀರ್ ಕಾರ್ಯಾಚರಣೆ: 15 ಐಷಾರಾಮಿ ಕಾರುಗಳು ವಶಕ್ಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


