ಯುದ್ಧಕ್ಕೆ ಸಿದ್ಧವಾಯ್ತಾ ಪಾಕ್?: ಲಡಾಖ್ ಸಮೀಪ ಪಾಕ್‌ನ ಸಿ130 ಯುದ್ಧ ವಿಮಾನಗಳ ರವಾನೆ, ಭಾರತದ ಕಣ್ಗಾವಲು!
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದುಗೊಳಿಸಿದ ಬಳಿಕ ಭಾರತದ ವಿರುದ್ಧ ಮಸಲತ್ತು ಮಾಡುತ್ತಿರುವ ಪಾಕಿಸ್ತಾನ ಇದೀಗ ಬಹುದೊಡ್ಡ ಕುಕೃತ್ಯಕ್ಕೆ ಕೈ ಹಾಕಿದೆ.

ಇಸ್ಲಾಮಾಬಾದ್/ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದುಗೊಳಿಸಿದ ಬಳಿಕ ಭಾರತದ ವಿರುದ್ಧ ಮಸಲತ್ತು ಮಾಡುತ್ತಿರುವ ಪಾಕಿಸ್ತಾನ ಇದೀಗ ಬಹುದೊಡ್ಡ ಕುಕೃತ್ಯಕ್ಕೆ ಕೈ ಹಾಕಿದೆ.
ಹೌದು ಕೇಂದ್ರಾಡಳಿತ ಲಡಾಖ್ ನ ಸಮೀಪದ ಸ್ಕರ್ದು ಏರ್ ಬೇಸ್ ಗೆ ಪಾಕಿಸ್ತಾನ ತನ್ನ ವಾಯುಪಡೆಗೆ ಸೇರಿದ 3 ಸಿ130 ಏರ್ ಕ್ರಾಫ್ಟ್ ಮತ್ತು ಯುದ್ಧೋಪಕರಣಗಳನ್ನು ರವಾನಿಸಿರುವುದಾಗಿ ವರದಿಯಾಗಿದೆ. ಇನ್ನು ಪಾಕ್ ಏನು ಮಾಡುತ್ತಿದೆ ಎಂಬುದನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಗಡಿಭಾಗದಲ್ಲಿ ಪಾಕಿಸ್ತಾನದ ಚಲನವಲನದ ಬಗ್ಗೆ ಭಾರತದ ಗುಪ್ತಚರ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಸುದ್ದಿಸಂಸ್ಧೆಯೊಂದು ವರದಿ ಮಾಡಿದೆ.
ಪಾಕಿಸ್ತಾನ ದಿಢೀರ್ ಅಂತಾ ಈ ನಿರ್ಧಾರಕ್ಕೆ ಬಂದಿದ್ದು ಸ್ಕರ್ದು ವಾಯುನೆಲೆಗೆ ಜೆಎಫ್-17 ಯುದ್ಧ ವಿಮಾನವನ್ನು ಕಳುಹಿಸುವ ಸಾಧ್ಯತೆ ಇದೆ. ಯುದ್ಧ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಏರ್ ಬೇಸ್ ನಲ್ಲಿ ಪಾಕ್ ಯುದ್ಧೋಪಕರಣಗಳನ್ನು ರವಾನಿಸುತ್ತಿರುವುದಾಗಿ ಮೂಲಗಳು ಹೇಳಿವೆ.
Pakistan, Fighter Jet, Skardu, Air Base, Ladakh, India,ಪಾಕಿಸ್ತಾನ, ಯುದ್ಧ ವಿಮಾನ, ಸ್ಕರ್ದು ಏರ್ ಬೇಸ್, ಲಡಾಖ್, ಭಾರತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


