Ladakh

'ಸಿಗದ ಆಶ್ವಾಸನೆ, ಮಾತುಕತೆಯೂ ಇಲ್ಲ': ಸೆಪ್ಟೆಂಬರ್ 19ರಿಂದ ಮತ್ತೆ ಹೋರಾಟದ ಎಚ್ಚರಿಕೆ ನೀಡಿದ ವಾಂಗ್ಚುಕ್; Video
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಹಾರಗಳನ್ನು ವಿರೋಧಿಸಿ ಅಂದಿನ ಕೇಂದ್ರ ಶಿಕ್ಷಣ ಸಚಿವರ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಜೂ.28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

18,600 ಅಡಿ ಎತ್ತರದ ಹಿಮಪರ್ವತದಲ್ಲಿ ಭಾರತೀಯ ಸೇನೆ ಸಾಹಸ; ಒಂದೇ ಸ್ಕಿಡ್ನಲ್ಲಿ ಹೆಲಿಕಾಪ್ಟರ್ ಇಳಿಸಿ ಗಾಯಾಳು ರಕ್ಷಣೆ, Video
ಪ್ರತಿಕೂಲ ಹವಾಮಾನ ಹಾಗೂ ಅತಿ ಎತ್ತರದ ಪರಿಸ್ಥಿತಿಯ ನಡುವೆಯೂ ಪೈಲಟ್ಗಳು ಅತ್ಯಂತ ನಿಖರತೆಯಿಂದ ಹೆಲಿಕಾಪ್ಟರ್ ಅನ್ನು ನಿಯಂತ್ರಿಸಿ ಗಾಯಾಳುವಿನ ಬಳಿಗೆ ತಲುಪಿದರು.

ಮೈನಸ್ 15 ಡಿಗ್ರಿ ಸೆಲ್ಸಿಯಸ್ನಲ್ಲಿ 22 ಸಾವಿರ ಅಡಿ ಎತ್ತರದಲ್ಲಿ DRDO ಅದ್ಭುತ ಸಾಧನೆ; ಪ್ಯಾರಾಚೂಟ್ ವ್ಯವಸ್ಥೆ ಯಶಸ್ವಿ ಪರೀಕ್ಷೆ! Video
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತೊಂದು ಅದ್ಭುತ ಸಾಧನೆ ಮಾಡಿದೆ. ಲಡಾಖ್ನ ಲೇಹ್ ಜಿಲ್ಲೆಯಲ್ಲಿ 22 ಸಾವಿರ ಅಡಿ ಎತ್ತರದಲ್ಲಿ ಕೊರೆಯುವ ಚಳಿಯಲ್ಲಿ ಭಾರತೀಯ ನಿರ್ಮಿತ ಮಿಲಿಟರಿ ಯುದ್ಧ ಪ್ಯಾರಾಚೂಟ್ ವ್ಯವಸ್ಥೆಯನ್ನು DRDO ಯಶಸ್ವಿಯಾಗಿ ಪರೀಕ್ಷಿಸಿದೆ.

ಭಾರತ-ಚೀನಾ ಗಡಿ ಉದ್ವಿಗ್ನತೆ ನಡುವೆ ಅಮೆರಿಕ ರಾಯಭಾರಿ ಲಡಾಖ್ ಭೇಟಿ; ಬೀಜಿಂಗ್ ಗೆ ಪ್ರಬಲ ಸಂದೇಶ
2020ರ ಗಲ್ವಾನ್ ಸಂಘರ್ಷದ ಬಳಿಕ ಹಾಗೂ 2019ರ ಆಗಸ್ಟ್ 5ರಂದು ಜಮ್ಮು- ಕಾಶ್ಮೀರ ರಾಜ್ಯವನ್ನು ವಿಭಜಿಸಿದ ನಂತರ, ಲಡಾಖ್ಗೆ ಭೇಟಿ ನೀಡಿದ ಅಮೆರಿಕದ ಹಿರಿಯ ರಾಜತಾಂತ್ರಿಕರ ಮೊದಲ ಭೇಟಿ ಇದಾಗಿದೆ.

'ನಾವು Gen Z ಅನ್ನೋದು ನನ್ನಪ್ಪ ಯಾರು ಗೊತ್ತಾ ಅನ್ನೋದರ ಹೊಸ ರೂಪ': ಯೋಧರ ಜೊತೆ ಯುವತಿಯ ವಾಗ್ವಾದಕ್ಕೆ ಸಿಎಂ ಒಮರ್ ಅಬ್ದುಲ್ಲಾ ತೀಕ್ಷ್ಮ ಪ್ರತಿಕ್ರಿಯೆ; Video
ಸಣ್ಣದೊಂದು ಅವಮಾನ ಅಥವಾ ಅಸಮಾಧಾನ ಎದುರಾದ ಕೂಡಲೇ ಜೆನ್ ಜಿ ಎಂದು ಬೆದರಿಕೆಯಾಗಿ ಬಳಸಲು ಆರಂಭಿಸಿದರೆ, ಜೆನ್ ಜಿ ಬಗ್ಗೆ ಇರುವ ಸದಭಿಪ್ರಾಯವನ್ನು ಹಾಳುಮಾಡುತ್ತದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಮಾಜಿ ಸಂಸದೆ ಸುಮಲತಾ ಅಂಬರೀಷ್ ಕೂಡ ಯುವತಿಯ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋನಮ್ ವಾಂಗ್ಚುಕ್ ಲಡಾಖ್ ನ್ನು ನೇಪಾಳವನ್ನಾಗಿಸಲು ಬಯಸುತ್ತಿದ್ದಾರೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ
ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಪ್ರಸನ್ನ ವರಾಲೆ ಅವರ ಪೀಠ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಅವರು ತಮ್ಮ ಪತಿಯ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ...

ಲಡಾಖ್ನಲ್ಲಿ 5.7 ತೀವ್ರತೆಯ ಭೂಕಂಪ
ಭೂಕಂಪ-ಸಂಬಂಧಿತ ಹಾನಿಯ ಬಗ್ಗೆ ಇಲ್ಲಿಯವರೆಗೆ ಯಾವುದೇ ವರದಿ ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಡಾಖ್ ನಲ್ಲಿ ಭಾರತೀಯ ಸೇನೆಗೇ ಒತ್ತಡ, ಕಿರುಕುಳ?; ಯೂಟ್ಯೂಬರ್ ರಕ್ಷಣಾ ಕಾರ್ಯಾಚರಣೆಯಲ್ಲಿ ಮಾಹಿತಿ ಬಹಿರಂಗ; ಗಂಭೀರ ಆರೋಪ
ರಟ್ಟನ್ ಧಿಲ್ಲೋನ್ ಅವರ X ನಲ್ಲಿ ಪೋಸ್ಟ್ ಮಾಡಲಾದ ಪೋಸ್ಟ್ನಿಂದ ಈ ವಿಷಯ ಚರ್ಚೆಗೆ ಗ್ರಾಸವಾಗಿದ್ದು, ಅವರು ಇಂತಹ ಘಟನೆಗಳು ಸೂಕ್ಷ್ಮ ಗಡಿ ಪ್ರದೇಶದಲ್ಲಿ ಸೈನ್ಯವನ್ನು ಅದರ ಪ್ರಾಥಮಿಕ ಜವಾಬ್ದಾರಿಗಳಿಂದ ಬೇರೆಡೆಗೆ ತಿರುಗಿಸುತ್ತವೆ ಎಂದು ವಾದಿಸಿದ್ದಾರೆ.

ಲಡಾಖ್ ಜನರಿಗೆ ಮೋದಿ 'ದ್ರೋಹ'; ಪೊಲೀಸ್ ಗುಂಡಿನ ದಾಳಿ ಬಗ್ಗೆ ನ್ಯಾಯಾಂಗ ತನಿಖೆಗೆ ರಾಹುಲ್ ಆಗ್ರಹ
ಕಳೆದ ಬುಧವಾರ ಲಡಾಖ್ನಲ್ಲಿ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಕಾರ್ಗಿಲ್ ಯುದ್ಧದ ಯೋಧ ತ್ಸೆವಾಂಗ್ ಥಾರ್ಚಿನ್ ಕೂಡ ಸೇರಿದ್ದಾರೆ.

