ಸೈಕಲ್ ಚಕ್ರಕ್ಕೆ ಸಿಕ್ಕ ಕೋಳಿ ಮರಿಯನ್ನು ಆಸ್ಪತ್ರೆಗೆ ತಂದ ಬಾಲಕ, ಕಂದನ ಮುಗ್ಧತೆಗೆ ಇಂಟರ್ ನೆಟ್ ಲೋಕ ಫುಲ್ ಫಿದಾ!
ತನ್ನ ಸೈಕಲ್ ಚಕ್ರಕ್ಕೆ ಸಿಲುಕಿದ್ದ ಕೋಳಿ ಮರಿಯನ್ನು ಕೂಡಲೇ ಆಸ್ಪತ್ರೆಗೆ ಕರೆತಂದು ತನ್ನ ಬಳಿ ಇದ್ದ ಹತ್ತು ರೂಪಾಯಿ ನೋಟು ನೀಡಿ ಚಿಕಿತ್ಸೆ ನೀಡಿ ಎನ್ನುವ ಪುಟ್ಟ ಬಾಲಕ ಇಂಟರ್ ನೆಟ್ ಸೆನ್ಸೇಷನ್ ಆಗಿ ಬದಲಾಗಿದ್ದಾನೆ.

Published On :
ಐಜ್ವಾಲ್: ತನ್ನ ಸೈಕಲ್ ಚಕ್ರಕ್ಕೆ ಸಿಲುಕಿದ್ದ ಕೋಳಿ ಮರಿಯನ್ನು ಕೂಡಲೇ ಆಸ್ಪತ್ರೆಗೆ ಕರೆತಂದು ತನ್ನ ಬಳಿ ಇದ್ದ ಹತ್ತು ರೂಪಾಯಿ ನೋಟು ನೀಡಿ ಚಿಕಿತ್ಸೆ ನೀಡಿ ಎನ್ನುವ ಪುಟ್ಟ ಬಾಲಕ ಇಂಟರ್ ನೆಟ್ ಸೆನ್ಸೇಷನ್ ಆಗಿ ಬದಲಾಗಿದ್ದಾನೆ.
ಹೌದು.. ಒಂದು ಕೈಯಲ್ಲಿ ಕೋಳಿಮರಿ, ಮತ್ತೊಂದು ಕೈಯಲ್ಲಿ 10 ರೂ.ನೋಟು ಹಿಡಿದಿರುವ ಪುಟ್ಟ ಬಾಲಕನೊಬ್ಬನ ಚಿತ್ರಕ್ಕೆ ಇಂಟರ್ನೆಟ್ ಲೋಕ ಫುಲ್ ಫಿದಾ ಆಗಿದ್ದು, ಬಾಲಕನ ಮುಗ್ದತೆಗೆ ಇಡೀ ಸೋಷಿಯಲ್ ಮೀಡಿಯಾ ಬಳಕೆದಾರರು ಮೂಕವಿಸ್ಮಿತರಾಗಿದ್ದಾರೆ. ಸತ್ತುಹೋದ ಕೋಳಿಮರಿಯನ್ನು ಹಿಡಿದು, ಅದಕ್ಕೆ ಚಿಕಿತ್ಸೆ ನೀಡುವಂತೆ ಆಸ್ಪತ್ರೆಗೆ ತೆರಳಿದ ಈ ಬಾಲಕ, ತಾನು ಉಳಿತಾಯ ಮಾಡಿದ್ದ ಹತ್ತು ರೂಪಾಯಿಯನ್ನು ಹಿಡಿದು, ವೈದ್ಯರ ಬಳಿ ಅಂಗಲಾಚುತ್ತಿದ್ದಾನೆ..!
ಏನಾಗಿತ್ತು?
ಮಿಜೋರಾಂನ ಸಾಯಿರಂಗ್ ಎಂಬಲ್ಲಿಯ ಆರು ವರ್ಷ ವಯಸ್ಸಿನ ದೆರಕ್ ಸಿ ಲಾಲ್ ಚಾನ್ಹಿಮಾ ಎಂಬ ಬಾಲಕ ತನ್ನ ಸೈಕಲ್ ಮೂಲಕ ಶಾಲೆಗೆ ಹೊರಟಿದ್ದ. ಈ ಸಂದರ್ಭದಲ್ಲಿ ಆತನ ಸೈಕಲ್ಲಿಗೆ ಕೋಳಿಮರಿಯೊಂದು ಅಡ್ಡಬಂದಿತ್ತು. ಅದು ತಕ್ಷಣವೇ ಸತ್ತು ಹೋಗಿತ್ತು. ಕೂಡಲೇ ಈ ಬಾಲಕ ಆ ಕೋಳಿಮರಿಯನ್ನು ತನ್ನ ಪುಟ್ಟ ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ತನ್ನ ಬಳಿ ಉಳಿತಾಯ ಮಾಡಿಟ್ಟುಕೊಂಡಿದ್ದ 10 ರೂ. ನೋಟನ್ನು ಹಿಡಿದು ಆಸ್ಪತ್ರೆಗೆ ಬಂದಿದ್ದ.. ಆಸ್ಪತ್ರೆಯ ಸಿಬ್ಬಂದಿಗಳ ಬಳಿ, ಕೋಳಿಮರಿಗೆ ಚಿಕಿತ್ಸೆ ನೀಡುವಂತೆ ಅಂಗಲಾಚಿ ಬೇಡಿಕೊಂಡಿದ್ದ. ಆದರೆ ಕೋಳಿ ಮರಿ ಆಗಲೇ ಸತ್ತು ಹೋಗಿದೆ, ಕೋಳಿಮರಿಗಳಿಗೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡೋಲ್ಲ ಎಂದು ಹೇಳಿ ಆಸ್ಪತ್ರೆ ಸಿಬ್ಬಂದಿ ಈ ಬಾಲಕನನ್ನು ವಾಪಸ್ ಕಳಿಸಿದ್ದಾರೆ.!
ಈ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಈ ಪುಟ್ಟ ಪೋರನ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, 85 ಸಾವಿರಕ್ಕೂ ಹೆಚ್ಚು ಖಾತೆದಾರರು ಈ ಚಿತ್ರವನ್ನು ಶೇರ್ ಮಾಡಿದ್ದರೆ, 11 ಸಾವಿರಕ್ಕೂ ಹೆಚ್ಚು ಜನ ಈ ಚಿತ್ರಕ್ಕೆ ಕಮೆಂಟ್ ಮಾಡಿದ್ದಾರೆ..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MizoramಮಿಜೋರಾಂchickenViral Photoವೈರಲ್ ಫೋಟೋViral Newsವೈರಲ್ ನ್ಯೂಸ್ಐಜ್ವಾಲ್AizwalMizoram viral heroಮಿಜೋರಾಂ ವೈರಲ್ ಹೀರೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


