ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೆ ಮುನ್ನುಡಿ, ಜ.12ಕ್ಕೆ 100ನೇ ಉಪಗ್ರಹವನ್ನು ಕಕ್ಷೆಗೆ ಏರಿಸಲಿರುವ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಜನವರಿ 12ರಂದು ತನ್ನ 100 ನೇ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಮೀಲಕ ಕಕ್ಷೆಗೆ ಸೇರಿಸಲಿದೆ.

Published On :
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಜನವರಿ 12ರಂದು ತನ್ನ 100 ನೇ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಮೀಲಕ ಕಕ್ಷೆಗೆ ಸೇರಿಸಲಿದೆ.
"ನಾವು ಮೈಕ್ರೋಸ್ಯಾಟ್ ಹಾಗೂ ನ್ಯಾನೋಸ್ಯಾಟ್ ಮುಂತಾದ ವಿವಿಧ ಉಪಗ್ರಹಗಳ ಸಮೂಹವನ್ನು ಹೊಂದಿರುತ್ತೇವ. ಇದುವರೆಗೆ ಪಿಎಸ್ ಎಲ್ ವಿ ಉಡಾವಣಾ ವಹನದ ಮೂಲಕ ಒಟ್ಟು 31 ಉಪಗ್ರಹಗಳನ್ನು ಕಖ್ಷೆಗೆ ಕಳಿಸಲಾಗಿದ್ದು ಇದರಲ್ಲಿ 28 ವಿದೇಶೀ ಉಪಗ್ರಹಗಳಾದರೆ ಮೂರು ಭಾರತೀಯ ಉಪಗ್ರಹಗಳಾಗಿದೆ " ಇಸ್ರೋ ಕೇಂದ್ರದ ನಿರ್ದೇಶಕ ಎಂ. ಅಣ್ಣಾದೊರೈ ಹೇಲಿದ್ದಾರೆ.
ಇಸ್ರೋ ಉಪಗ್ರಹ ಉಡಾವಣೆಯಲ್ಲಿ ಇತ್ತೀಚಿನ ವಿಫಲತೆಯ ಕುರಿತು ಮಾತನಾಡಿ, ಇಸ್ರೋ ನಲ್ಲಿನ ವಿಜ್ಞಾನಿಗಳು ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಭವಿಷ್ಯದಲ್ಲಿ ಸಮಸ್ಯೆ ಪುನರಾವರ್ತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪುನರ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದರು.
ಪಿಎಸ್ ಎಲ್ ವಿ ಗೆ ಇದು 42ನೇ ಉದಾವಣೆಯಾಗಿದ್ದು 710ಕೆಜಿ ಕಾರ್ಟೋಸ್ಯಾಟ್, ಭೂ ವೀಕ್ಷಣೆಗಾಗಿ ಎರಡು ಸರಣಿ ಉಪಗ್ರಹ, 613ಕೆಜಿ ಒತ್ಟು ತೂಕದ 30 ಸಹ ಉಪಗ್ರಹಗಳನ್ನು ಹೊತ್ತಿರುವ ಪಿಎಸ್ ಎಲ್ ವಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉದಾವಣೆಗೊಳ್ಳಲಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


