ನಿತಿನ್ ಗಡ್ಕರಿ ಸೋದರಿ ಮನೆಯಲ್ಲಿ 81 ಕೆಜಿ ಚಿನ್ನ ಕದ್ದ ಚೋರರು
ಮನೆಗಳಲ್ಲಿ ಕಳ್ಳತನ ಮಾಡಿದರೆ ಹತ್ತಿಪ್ಪತ್ತು ಕೆಜಿ ಚಿನ್ನ ಸಿಗುವುದೇ ಜಾಸ್ತಿ. ಅಂತಹದರಲ್ಲಿ ಬರೋಬ್ಬರಿ 81 ಕೆಜಿ ಚಿನ್ನವನ್ನು ಕಳ್ಳರು ಲೂಟಿ ಮಾಡಿದ್ದಾರೆ.

ನಾಗ್ಪುರ್: ಮನೆಗಳಲ್ಲಿ ಕಳ್ಳತನ ಮಾಡಿದರೆ ಹತ್ತಿಪ್ಪತ್ತು ಕೆಜಿ ಚಿನ್ನ ಸಿಗುವುದೇ ಜಾಸ್ತಿ. ಅಂತಹದರಲ್ಲಿ ಬರೋಬ್ಬರಿ 81 ಕೆಜಿ ಚಿನ್ನವನ್ನು ಕಳ್ಳರು ಲೂಟಿ ಮಾಡಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಸಹೋದರಿಯ ಮನೆಗೆ ನುಗ್ಗಿದ ಕಳ್ಳರು 81 ಕೆಜಿ ಚಿನ್ನ, ಎರಡು ಕೆಜಿ ಬೆಳ್ಳಿ ಮತ್ತು 1 ಸಾವಿರ ಅಮೆರಿಕನ್ ಡಾಲರ್ ನೋಟುಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೋಲಾರ್ ವಿದ್ಯುತ್ ಕಂಪೆನಿಯ ಮಾಲೀಕ ಕಿಶೋರ್ ತೋಟಾಡೆರನ್ನು ಗಡ್ಕರಿ ಸಹೋದರಿ ಮನೀಶಾ ವಿವಾಹವಾಗಿದ್ದು, ನಾಗ್ಪುರ್‌ದ ಪಾಂಡೆ ಲೇಔಟ್‌ನಲ್ಲಿ ವಾಸವಾಗಿದ್ದರು. ಕೆಲಸದ ನಿಮಿತ್ತ ತೋಟಾಡೆ ಕೋಲ್ಕತಾಗೆ ತೆರಳಿದ್ದು, ನಾಗ್ಪುರ್‌ಗೆ ಮರಳಿದ ಅವರನ್ನು ಕರೆ ತರಲು ಮನೀಶಾ ಮತ್ತು ಅವರ ಪುತ್ರ ಶಂತನು ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಮನೀಶಾ ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯಿಲ್ಲ ಮತ್ತು ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳದಿರುವುದೇ ಕಳ್ಳತನಕ್ಕೆ ಕಾರಣವಾಗಿರಬಹುದು ಎಂದು ರಾಣಾ ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


