ಬೇಸಿಗೆಯಲ್ಲಿ ಪೌಷ್ಟಿಕ ಮತ್ತು ಕೊಬ್ಬುರಹಿತ ಆಹಾರಕ್ಕೆ ಇರಲಿ ಆದ್ಯತೆ!
ಬೇಸಿಗೆಯಲ್ಲಿ ಪೌಷ್ಠಿಕ ಮತ್ತು ಕೊಬ್ಬು ರಹಿತ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಅಮೆರಿಕಾದ ವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ರಾಷ್ಟ್ರೀಯ ಅಕಾಡೆಮಿಯ ತಜ್ಞರು ಸಲಹೆ ನೀಡಿದ್ದಾರೆ

ಬೆಂಗಳೂರು: ಬೇಸಿಗೆ ಕಾಲದಲ್ಲಿ ಪೌಷ್ಠಿಕ ಮತ್ತು ಕೊಬ್ಬು ರಹಿತ ಆಹಾರ ಸೇವನೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಆಹಾರದಂತೆ ನೀರನ್ನು ಸಹ ಸೂಕ್ತ ರೀತಿಯಲ್ಲಿ ಪ್ರತಿನಿತ್ಯ ಕುಡಿಯಬೇಕು ಎಂದು ಅಮೆರಿಕಾದ ವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ರಾಷ್ಟ್ರೀಯ ಅಕಾಡೆಮಿಯ ತಜ್ಞರು ಸಲಹೆ ನೀಡಿದ್ದಾರೆ.
ನಾವು ಆಹಾರ ಸೇವಿಸಿದ ಬಳಿಕ ಶೇ, 20 ರಷ್ಟು ನೀರನ್ನು ಕುಡಿಯಬೇಕು, ಪುರುಷರು ಪ್ರತಿನಿತ್ಯ 3.7 ಲೀಟರ್ ಹಾಗೂ ಮಹಿಳೆಯರು 2.7 ಲೀಟರ್ ನಷ್ಟು ನೀರು ಕುಡಿಯಬೇಕೆಂದು ಅವರು ಹೇಳಿದ್ದಾರೆ.
ಪ್ರತಿನಿತ್ಯ 8 ರಿಂದ 10 ಗ್ಲಾಸ್ ಅಂದರೆ (250 ಎಂಎಲ್ ) ನೀರು ಕುಡಿಯಬೇಕೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅಂದರೆ 2 ರಿಂದ ಎರಡೂವರೆ ಲೀಟರ್ ನಷ್ಟಾಗುತ್ತದೆ. ಬೇಸಿಗೆಯಲ್ಲಿ ಬಿಸಿಯಿಂದಾಗಿ ಇನ್ನೂ ಹೆಚ್ಚಿಗೆ ನೀರನ್ನು ಆಗಾಗ್ಗೆ ಕುಡಿಯಬೇಕಾಗುತ್ತದೆ. ಇದರಿಂದಾಗಿ ದಿನದ ಬಾಯಾರಿಕೆ ತಪ್ಪುತ್ತಲ್ಲದೇ, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದರಿಂದ ಹೆಪಟಿಟೈಸ್ , ಗ್ಯಾಸ್ಟ್ರಿಕ್ ಮತ್ತಿತರ ರೋಗಗಳು ಬೇಸಿಗೆ ಸಂದರ್ಭದಲ್ಲಿ ಬಾರದಂತೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


