ಜೀವನಶೈಲಿ

ಕಾಲೇಜು ವಿದ್ಯಾರ್ಥಿಗಳಿಗೆ ಆಹಾರಕ್ಕಿಂತ ಸ್ಮಾರ್ಟ್ ಫೋನ್ ಹೆಚ್ಚು ಮುಖ್ಯ!

ಕಾಲೇಜು ವಿದ್ಯಾರ್ಥಿಗಳು ತಾವು ಸೇವಿಸುವ ಆಹಾರಕ್ಕಿಂತ ಸ್ಮಾರ್ಟ್ ಫೋನ್ ಗಳ ಕಡೆ ಹೆಚ್ಚು ಒಲವು ...

ಕಾಲೇಜು ವಿದ್ಯಾರ್ಥಿಗಳಿಗೆ ಆಹಾರಕ್ಕಿಂತ ಸ್ಮಾರ್ಟ್ ಫೋನ್ ಹೆಚ್ಚು ಮುಖ್ಯ!
ಸಾಂದರ್ಭಿಕ ಚಿತ್ರ
Published On :

ವಾಷಿಂಗ್ಟನ್: ಕಾಲೇಜು ವಿದ್ಯಾರ್ಥಿಗಳು ತಾವು ಸೇವಿಸುವ ಆಹಾರಕ್ಕಿಂತ ಸ್ಮಾರ್ಟ್ ಫೋನ್ ಗಳ ಕಡೆ ಹೆಚ್ಚು ಒಲವು ಮತ್ತು ಪ್ರಾಮುಖ್ಯತೆ ತೋರಿಸುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

'ಅಡಿಕ್ಟಿವ್ ಬಿಹೇವಿಯರ್ಸ್' ಎಂಬ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಹಾರಕ್ಕಿಂತ ಸ್ಮಾರ್ಟ್ ಫೋನ್ ಗಳೇ ಹೆಚ್ಚು ಮುಖ್ಯವಾಗುತ್ತದೆ, ಸ್ಮಾರ್ಟ್ ಫೋನ್ ಒಂಥರಾ ಗೀಳಿನಂತೆ ಅದನ್ನು ಬಿಟ್ಟು ಬದುಕಲು ಸಾಧ್ಯವಾಗದ ರೀತಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ವರ್ತಿಸುತ್ತಾರೆ ಎಂದು ಅಮೆರಿಕಾದ ಬಫಲೊ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳುತ್ತಾರೆ.

ವಿಜ್ಞಾನಿಗಳು ಈ ಅಧ್ಯಯನಕ್ಕೆ 18ರಿಂದ 22 ವರ್ಷದೊಳಗಿನ 76 ವಿದ್ಯಾರ್ಥಿಗಳನ್ನು ಪ್ರಯೋಗಕ್ಕೆ ಒಳಪಡಿಸಿದ್ದರು. ಆಹಾರ ಮತ್ತು ಸ್ಮಾರ್ಟ್ ಫೋನ್ ಎರಡನ್ನೂ ವಿದ್ಯಾರ್ಥಿಗಳಿಗೆ ನೀಡದೆ ನೋಡಿದಾಗ ಸ್ಮಾರ್ಟ್ ಫೋನ್ ಕೈಗೆ ಸಿಕ್ಕಿದರೆ ಸಾಕು ಎಂಬ ಚಡಪಡಿಕೆ ಅವರಲ್ಲಿ ಕಾಣಿಸುತ್ತಿತ್ತು ಎಂದು ವಿಶ್ವವಿದ್ಯಾಲಯದ ವಿಜ್ಞಾನಿ ಸಾರಾ ಒ ಡೊನ್ನೆಲ್ಲ್ ಹೇಳಿದ್ದಾರೆ.

ಮನುಷ್ಯನಲ್ಲಿ ಆಹಾರ, ಆಲ್ಕೋಹಾಲ್, ಡ್ರಗ್ಸ್ ಗಳು ಹೇಗೆ ಬಲಪಡಿಸುತ್ತದೆಯೋ, ವರ್ತನೆಯಲ್ಲಿ ಪ್ರಚೋದಿಸುತ್ತದೆಯೋ ಅದೇ ರೀತಿ ಸ್ಮಾರ್ಟ್ ಫೋನ್ ಗಳು ಕೂಡ ಮನುಷ್ಯನ ವರ್ತನೆ, ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆಯಲ್ಲಿ ಕೂಡ ಹೆಚ್ಚಳ ಕಂಡುಬಂದಿದೆ. ದಿನದಲ್ಲಿ ಕನಿಷ್ಟವೆಂದರೂ 5ರಿಂದ 9 ಗಂಟೆಗಳವರೆಗೆ ಬಳಸುತ್ತಾರೆ ಎಂದಿದ್ದಾರೆ ವಿಜ್ಞಾನಿಗಳು.

ವಿದ್ಯಾರ್ಥಿಗಳನ್ನು ಅಧ್ಯಯನಕ್ಕೊಳಪಡಿಸಿದಾಗ ವಿದ್ಯಾರ್ಥಿಗಳು ಆಹಾರವಿಲ್ಲದೆ ಮೂರು ಗಂಟೆಗಳವರೆಗೆ ಇದ್ದರು, ಆದರೆ ಸ್ಮಾರ್ಟ್ ಫೋನ್ ಇಲ್ಲದೆ ಎರಡು ಗಂಟೆಯವರೆಗೆ ಮಾತ್ರ ಇದ್ದರು. ಈ ಸಮಯದಲ್ಲಿ ಅವರು ಅಧ್ಯಯನದಲ್ಲಿ ಇಲ್ಲವೇ ಪತ್ರಿಕೆಗಳನ್ನು ಓದುವುದರಲ್ಲಿ ತೊಡಗಿದ್ದರು.

ಕಾಲೇಜು ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಗೀಳಿಗೆ ಒಳಗಾಗಿ ಬೇರೆಯದನ್ನು ತ್ಯಾಗ ಮಾಡಲು, ಆಹಾರ ಸೇವಿಸುವುದಕ್ಕೆ ಗಮನ ನೀಡದಿರುವುದು ಕೂಡ ಅಧ್ಯಯನದಿಂದ ತಿಳಿದುಬಂತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.