ಜೀವನಶೈಲಿ

ಬೆಳಿಗ್ಗೆ ಬೇಗ ಏಳುವುದು ಮತ್ತು ರಾತ್ರಿ ಬೇಗ ಮಲಗುವುದರಿಂದ ಖಿನ್ನತೆ ದೂರ

ಖಿನ್ನತೆ ದೂರ ಮಾಡುವುದರ ಕುರಿತು ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯ ಹಾಗೂ ಬಾಸ್ಟನ್ ನಲ್ಲಿರುವ ಮಹಿಳಾ ಆಸ್ಪತ್ರೆಯ ಸಂಶೋಧಕರು ಮಹತ್ವದ ಸಂಗತಿಯನ್ನು ಕಂಡುಕೊಂಡಿದ್ದಾರೆ.

ಬೆಳಿಗ್ಗೆ ಬೇಗ ಏಳುವುದು ಮತ್ತು ರಾತ್ರಿ ಬೇಗ ಮಲಗುವುದರಿಂದ ಖಿನ್ನತೆ ದೂರ
ಬೆಳಿಗ್ಗೆ ಬೇಗ ಏಳುವುದು ಮತ್ತು ರಾತ್ರಿ ಬೇಗ ಮಲಗುವುದರಿಂದ ಖಿನ್ನತೆ ದೂರ
Published On :
ಖಿನ್ನತೆ ದೂರ ಮಾಡುವುದರ ಕುರಿತು ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯ ಹಾಗೂ ಬಾಸ್ಟನ್ ನಲ್ಲಿರುವ ಮಹಿಳಾ ಆಸ್ಪತ್ರೆಯ ಸಂಶೋಧಕರು ಮಹತ್ವದ ಸಂಗತಿಯನ್ನು ಕಂಡುಕೊಂಡಿದ್ದಾರೆ. 
ಅಧ್ಯಯನದ ಭಾಗವಾಗಿದ್ದ ಮಧ್ಯಮ ಹಾಗೂ ವಯಸ್ಸಾದ ಮಹಿಳೆಯರಿಯನ್ನು ಸಮೀಕ್ಷೆ ನಡೆಸಲಾಗಿದ್ದು, ಬೆಳಿಗ್ಗೆ ಬೇಗ ಏಳುವುದು ಹಾಗೂ ರಾತ್ರಿ ಬೇಗೆ ಮಲಗುವುದರಿಂದ ಖಿನ್ನತೆ ದೂರವಾಗಲಿದೆ ಎಂಬ ಅಂಶ ಬಹಿರಂಗವಾಗಿದೆ.  ಬೆಳಗ್ಗೆ ಬೇಗ ಏಳುವುದು ಮತ್ತು ರಾತ್ರಿ ಬೇಗ ಮಲಗುವ ಅಭ್ಯಾಸ ಹೊಂದಿರುವ ಮಹಿಳೆಯರಿಗೆ ಖಿನ್ನತೆ ಸಮಸ್ಯೆ ಕಾಡುವುದು ಅಪರೂಪವಾಗಿದೆ. 
ಬೇಗ ಮಲಗಿ ಬೇಗ ಏಳುವ ಅಭ್ಯಾಸಕ್ಕೂ ಖಿನ್ನತೆಗೂ ಸಂಬಂಧವಿದ್ದು, ವಂಶಾವಾಹಿ ಸಂಬಂಧಪಟ್ಟಿದೆ ಎಂದು ಮುಂಚೂಣಿ ಬರಹಗಾರರಾಗಿರುವ ಸೆಲೀನ್ ವೆಟರ್ ಅಭಿಪ್ರಾಯಪಟ್ಟಿದ್ದಾರೆ. ವಂಶಾವಾಹಿಗಳು ನಿದ್ರಾ ಕ್ರಮದ ಮೇಲೆ ಪರಿಣಾಮ ಬೀರುತ್ತವೆ ಎಂದು ಅಧ್ಯಯನ ವರದಿ ಹೇಳಿದ್ದು, ಸೈಕಿಯಾಟ್ರಿಕ್ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.