ತೂಕ ಕಳೆದುಕೊಳ್ಳಲು ದಿನಕ್ಕೆ 6 ಗಂಟೆ ಕಾಲ ನಿಂತುಕೊಂಡರೆ ಸಾಕಾ?
ತೂಕ ಕಳೆದುಕೊಳ್ಳಲು ಮನಸ್ಸಿದೆ, ಆದರೆ ಡಯಟ್ ನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುತ್ತಿಲ್ಲವೇ?

Published On :
ನ್ಯೂಯಾರ್ಕ್: ತೂಕ ಕಳೆದುಕೊಳ್ಳಲು ಮನಸ್ಸಿದೆ, ಆದರೆ ಡಯಟ್ ನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುತ್ತಿಲ್ಲವೇ? ಜಿಮ್ ಗೆ ಹೋಗಲು ಸೋಮಾರಿತನ ಬಿಡುತ್ತಿಲ್ಲವೇ ಅಥವಾ ಸಮಯ ಹೊಂದಾಣಿಕೆಯಾಗುತ್ತಿಲ್ಲವೇ?
ಹಾಗಾದರೆ ತೂಕ ಕಳೆದುಕೊಳ್ಳಬೇಕೆಂದು ಇರುವವರು ಸಾಧ್ಯವಾದರೆ ದಿನದಲ್ಲಿ ಆರು ಗಂಟೆಗಳ ಕಾಲ ನಿಂತುಕೊಳ್ಳಿ ಅಥವಾ ಓಡಾಡಿಕೊಂಡಿರಿ, ಇದರಿಂದ ದೀರ್ಘಾವಧಿಯಲ್ಲಿ ನಿಮ್ಮ ದೇಹದ ತೂಕ ಕಳೆದುಕೊಳ್ಳಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.
ದಿನದಲ್ಲಿ ಕುಳಿತುಕೊಳ್ಳುವುದಕ್ಕಿಂತ ನಿಂತುಕೊಂಡು ಕೆಲಸ ಮಾಡಿದರೆ 0.15 ಕ್ಯಾಲೊರಿ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ನಿಂತುಕೊಳ್ಳುವುದರಿಂದ ಕ್ಯಾಲೊರಿಗಳನ್ನು ದೇಹದಿಂದ ಕರಗಿಸಬಹುದಲ್ಲದೆ, ಹೃದ್ರೋಗ ಸಮಸ್ಯೆ, ಪಕ್ಷಪಾತ, ಸಕ್ಕರೆ ಕಾಯಿಲೆಗಳಂತವುಗಳನ್ನು ಕೂಡ ದೂರ ಮಾಡಬಹುದು. ಹೀಗಾಗಿ ಕೇವಲ ತೂಕ ಕಳೆದುಕೊಳ್ಳುವುದಕ್ಕಿಂತಲೂ ಹೆಚ್ಚಿನ ಉಪಯೋಗ ನಿಂತುಕೊಂಡು ಓಡಾಡಿಕೊಂಡು ಕೆಲಸ ಮಾಡುವುದರಿಂದ ಇವೆ ಎನ್ನುತ್ತಾರೆ ಅಮೆರಿಕಾದ ರೊಚೆಸ್ಟರ್ ನಲ್ಲಿರುವ ಮಯೊ ಕ್ಲಿನಿಕ್ ನ ಪ್ರೊಫೆಸರ್ ಫ್ರಾನ್ಸಿಸ್ಕೊ ಲೊಪೆಝ್-ಜಿಮೆನೆಝ್.
ಕುಳಿತುಕೊಂಡು ಮತ್ತು ನಿಂತುಕೊಂಡು ಕ್ಯಾಲೊರಿಗಳನ್ನು ಕಳೆದುಕೊಳ್ಳುವುದು ಪುರುಷರಲ್ಲಿ ಮಹಿಳೆಯರಿಗಿಂತ ಹೆಚ್ಚಾಗಿರುತ್ತದೆ. ದೀರ್ಘಾವಧಿಯವರೆಗೆ ಒಂದೇ ಕಡೆ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಹಾನಿಕರ. ಕಚೇರಿಗಳಲ್ಲಿ 10-12 ಗಂಟೆಗಳ ಕಾಲ ಕುಳಿತುಕೊಂಡು ಕೆಲಸ ಮಾಡುವವರು ಕೆಲಸದ ಮಧ್ಯೆ ಆಗಾಗ ಎದ್ದು ಓಡಾಡುವುದರಿಂದ ದೇಹದ ಆರೋಗ್ಯಕ್ಕೆ ಉತ್ತಮವಾಗಬಹುದು ಎನ್ನುತ್ತಾರೆ ಲೊಪೆಝ್ ಜಿಮೆನೆಝ್.
ಈ ಅಧ್ಯಯನ ಯುರೋಪ್ ನ ಮ್ಯಾಗಜಿನ್ ಪ್ರಿವೆಂಟಿವ್ ಕಾರ್ಡಿಯೊಲಜಿಯಲ್ಲಿ ಪ್ರಕಟಗೊಂಡಿದೆ. ಅಧ್ಯಯನ ತಂಡ 1,184 ಮಂದಿಯಲ್ಲಿ 46 ಅಧ್ಯಯನಗಳನ್ನು ನಡೆಸಿದ್ದಾರೆ. 33 ವರ್ಷದ ಆಸುಪಾಸಿನಲ್ಲಿರುವವರನ್ನು ಅಧ್ಯಯನಕ್ಕೊಳಪಡಿಸಲಾಯಿತು. ಅವರಲ್ಲಿ ಶೇಕಡಾ 60ರಷ್ಟು ಪುರುಷರು ಸರಾಸರಿ 143.3 ಪೌಂಡ್ ತೂಕವನ್ನು ಹೊಂದಿದ್ದರು.
ಆದರೂ ಕೂಡ ದೀರ್ಘಾವಧಿಯಲ್ಲಿ ಆರೋಗ್ಯ ಮೇಲೆ ಪರಿಣಾಮ ಬೀರುವುದರ ಮೇಲೆ ನಿಂತುಕೊಂಡು ಮತ್ತು ಕುಳಿತುಕೊಂಡು ಕೆಲಸ ಮಾಡುವ ಶೈಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಇನ್ನೂ ಹೆಚ್ಚಿನ ಅಧ್ಯಯನ ನಡೆಸಬೇಕೆಂದು ಸಂಶೋಧಕರು ಮನಗಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


