ಜೀವನಶೈಲಿ

ಭಾವೀ ಭಾರತೀಯ ವಧುಗಳ ಕುತೂಹಲದ ಪ್ರಶ್ನೆ: ಹುಡುಗನಿಗೆ ಅಡುಗೆ ಬರುತ್ತಾ?

ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಹುಡುಗನ ಮನೆಯವರು...

ಭಾವೀ ಭಾರತೀಯ ವಧುಗಳ ಕುತೂಹಲದ ಪ್ರಶ್ನೆ: ಹುಡುಗನಿಗೆ ಅಡುಗೆ ಬರುತ್ತಾ?
ಸಾಂದರ್ಭಿಕ ಚಿತ್ರ
Published On :
ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಹುಡುಗನ ಮನೆಯವರು, ಹುಡುಗಿಗೆ ಅಡುಗೆ ಮಾಡಲು ಬರುತ್ತಾ ಎಂದು ಪ್ರಶ್ನೆ ಕೇಳುವುದು ಸಾಮಾನ್ಯ.
ಹುಡುಗಿಗೆ ಚೆನ್ನಾಗಿ ಅಡುಗೆ ಮಾಡಲು ಬರಬೇಕು, ಮನೆ ಕೆಲಸ ಗೊತ್ತಿರಬೇಕು ಎಂದು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಯುವತಿಯರು ತಮ್ಮ ಸಂಗಾತಿಗೆ, ಮದುವೆಯಾಗುವವನಿಗೆ ಅಡುಗೆ ಮಾಡಲು ಬರುತ್ತದೆಯೇ ಎಂದು ಯೋಚಿಸುತ್ತಾರಂತೆ. ಹೀಗಂತ ಸಮೀಕ್ಷೆಯೊಂದು ತಿಳಿಸಿದೆ. 
ಹೆಣ್ಣು-ಗಂಡುಗಳನ್ನು ಹೊಂದಾಣಿಕೆ ಮಾಡಿಕೊಡುವ ಸಂಸ್ಥೆಯಾದ ಶಾದಿ.ಕಾಂ ನಡೆಸಿದ ಸಮೀಕ್ಷೆ ಪ್ರಕಾರ, ಸಂಬಂಧದ ವಿಚಾರ ಬಂದಾಗ ಯುವತಿಯರು ಯಾವುದಕ್ಕೆ ಒಪ್ಪಿಕೊಳ್ಳುತ್ತಾರೆ ಎಂದು ಅಧ್ಯಯನ ಮಾಡಿದೆ. ಆನ್ ಲೈನ್ ಮತದಲ್ಲಿ 6,800 ಮಂದಿ ಪುರುಷರು ಮತ್ತು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ. ಶಾದಿ.ಕಾಂ ಮೂಲಕ ಮದುವೆ ಮಾಡಿಕೊಂಡ 25ರಿಂದ 34 ವಯಸ್ಸಿನ ಮದುವೆಯಾದ ಭಾರತೀಯರು ಇದರಲ್ಲಿ ಸೇರಿಕೊಂಡಿದ್ದಾರೆ.
ನಿಮ್ಮ ಭಾವೀ ಪತಿಗೆ ಓಕೆ ಅನ್ನಲು ನೀವು ಯಾವೆಲ್ಲಾ ಮೂರು ಗುಣಗಳನ್ನು ಅವರಲ್ಲಿ ಕಂಡು ಮೆಚ್ಚಿ ಮದುವೆ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ಶೇಕಡಾ 36 ಮಹಿಳೆಯರು, ನೀವು ಕೂಡು ಕುಟುಂಬದಲ್ಲಿ ಅಥವಾ ಒಬ್ಬರೇ ನೆಲೆಸಿದ್ದೀರಾ ಎಂದು ಕೇಳಿದ್ದೇವೆ ಎಂದಿದ್ದಾರೆ. ನೀವು ನನ್ನ ವೃತ್ತಿಗೆ ಬೆಂಬಲ ನೀಡುತ್ತೀರಾ ಎಂದು ಶೇಕಡಾ 30 ಯುವತಿಯರು ಕೇಳಿದ್ದಾರಂತೆ.
ಶೇಕಡಾ 26 ಯುವತಿಯರು ನಿಮಗೆ ಅಡುಗೆ ಮಾಡಲು ಬರುತ್ತಾ ಎಂದು ಭಾವಿ ಪತಿಯಲ್ಲಿ ಕೇಳಿದ್ದಾರಂತೆ. ಈ ಶೇಕಡಾವಾರು ಪ್ರಮಾಣ ಪುರುಷರ ವಿಚಾರ ಬಂದಾಗ ಸ್ವಲ್ಪ ಭಿನ್ನವಾಗಿದೆ. ಪುರುಷರು ತಮ್ಮ ಭಾವಿ ಪತ್ನಿಯಲ್ಲಿ ನೀವು ನಮ್ಮ ಕುಟುಂಬದ ಜೊತೆ ನೆಲೆಸಲು ಇಚ್ಛಿಸುತ್ತೀರಾ? ಎಂದು, ಶೇಕಡಾ 34 ಮಂದಿ ಮದುವೆ ನಂತರ ಕೆಲಸ ಮಾಡುವ ಯೋಚನೆಯಿದೆಯೇ ಎಂದು ಮತ್ತು ಕೇವಲ ಶೇಕಡಾ 19 ಮಂದಿ ಪುರುಷರು ಮಾತ್ರ ನಿಮಗೆ ಅಡುಗೆ ಮಾಡಲು ಬರುತ್ತಾ ಎಂದು ಕೇಳಿದ್ದಾರಂತೆ.
ನಿಮ್ಮ ವಿರುದ್ಧ ಲಿಂಗದವರಲ್ಲಿ ಆಕರ್ಷಣೀಯವಾಗುವ ವಿಷಯ ಯಾವುದು ಎಂದು ಕೇಳಿದ್ದಕ್ಕೆ ಮಹಿಳೆ ಮತ್ತು ಪುರುಷರಿಬ್ಬರೂ ಶಾರೀರಿಕ ಸೌಂದರ್ಯ ಮುಖ್ಯವಾಗಿರಬೇಕು ಎಂದು ಶೇಕಡಾ 64 ಮತ್ತು ಶೇಕಡಾ 53 ಮಹಿಳೆಯರು ಉತ್ತರಿಸಿದ್ದಾರೆ. ವೃತ್ತಿಯಲ್ಲಿ ಯಶಸ್ವಿ ಶೇಕಡಾ 21 ಮಂದಿ, ಸಾಮಾನ್ಯ ಇಷ್ಟವಾಗುವ ವಿಷಯಗಳು ಕೂಡ ಮಹಿಳೆಯರಿಗೆ ಇಷ್ಟವಾಗುತ್ತದೆ. ನೀವು ಅಂತಿಮವಾಗಿ ಜೀವನ ಸಂಗಾತಿಯನ್ನು ಒಪ್ಪಿಕೊಳ್ಳಲು ತೆಗೆದುಕೊಳ್ಳುವ ಅಂತಿಮ ನಿರ್ಧಾರ ಯಾವುದು ಎಂದು ಕೇಳಿದಾಗ ಶೇಕಡಾ 56 ಮಂದಿ ಪುರುಷರು ಮತ್ತು ಶೇಕಡಾ 72 ಮಂದಿ ಮಹಿಳೆಯರು ಪೋಷಕರ ಒಪ್ಪಿಗೆ ತಮಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.