ಜೀವನಶೈಲಿ

ಮಕ್ಕಳಲ್ಲಿ ಸ್ಮಾರ್ಟ್ ಫೋನ್ ಗಳ ಅತಿ ಬಳಕೆ: ಆರೋಗ್ಯ,ನಿದ್ದೆ ಮೇಲೆ ದುಷ್ಪರಿಣಾಮ

ನಿಮ್ಮ ಮಗು ಮಲಗುವ ಹೊತ್ತಿನಲ್ಲಿ ಕೂಡ ಸ್ಮಾರ್ಟ್ ಫೋನ್ ನಲ್ಲಿ ಗೇಮ್ ಆಡುವುದು, ವಿಡಿಯೋ...

ಮಕ್ಕಳಲ್ಲಿ ಸ್ಮಾರ್ಟ್ ಫೋನ್ ಗಳ ಅತಿ ಬಳಕೆ: ಆರೋಗ್ಯ,ನಿದ್ದೆ ಮೇಲೆ ದುಷ್ಪರಿಣಾಮ
ಸಾಂದರ್ಭಿಕ ಚಿತ್ರ
Published On :
ಲಂಡನ್: ನಿಮ್ಮ ಮಗು ಮಲಗುವ ಹೊತ್ತಿನಲ್ಲಿ ಕೂಡ ಸ್ಮಾರ್ಟ್ ಫೋನ್ ನಲ್ಲಿ ಗೇಮ್ ಆಡುವುದು, ವಿಡಿಯೋ ನೋಡುವುದು ಮಾಡುತ್ತಿರುತ್ತದೆಯೇ? ನಿದ್ದೆ ಮಾಡುವುದನ್ನು ಬಿಟ್ಟು ಗೇಮ್ಸ್, ಟ್ಯಾಬ್ ಎಂದು ಕಾಲ ಕಳೆಯುತ್ತದೆಯೇ? ಹಾಗಾದರೆ ಪೋಷಕರು ಎಚ್ಚೆತ್ತುಕೊಳ್ಳಿ, 
ಮಕ್ಕಳು ಸರಿಯಾಗಿ ನಿದ್ದೆ ಮಾಡದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ನಾಂದಿ ಹಾಡಬಹುದು. 
ಮನುಷ್ಯರು ಅದರಲ್ಲೂ ಮಕ್ಕಳ ನಿದ್ದೆಯನ್ನು ಹಲವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಪ್ರತಿನಿತ್ಯ ಮಕ್ಕಳು ಸರಿಯಾಗಿ ನಿದ್ದೆ ಮಾಡದಿದ್ದರೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹ ಸ್ಥೂಲತೆ, ವರ್ತನೆಯಲ್ಲಿ ವ್ಯತ್ಯಾಸ, ದೇಹದ ಶಕ್ತಿಯಲ್ಲಿ ಕೊರತೆ, ಬೆಳವಣಿಗೆ ಕುಂಠಿತಗೊಳ್ಳುವುದು, ಮಾನಸಿಕ ಆರೋಗ್ಯ ಸಮಸ್ಯೆಗಳು ಮಕ್ಕಳಲ್ಲಿ ತಲೆದೋರುತ್ತವೆ ಎಂದು ಬ್ರಿಟನ್ ನ ಕಾರ್ಡಿಫ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳುತ್ತಾರೆ.
ಇಂದು ಶೇಕಡಾ 72 ಮಕ್ಕಳು ಮತ್ತು ಶೇಕಡಾ 89 ವಯಸ್ಕರು ನಿದ್ದೆ ಮಾಡುವ ಸಮಯದಲ್ಲಿ ಟ್ಯಾಬ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಗಳನ್ನು ಉಪಯೋಗಿಸುತ್ತಾರೆ ಎಂದು ಕಾರ್ಡಿಫ್ ವಿಶ್ವವಿದ್ಯಾಲಯದ ಬೆನ್ ಕಾರ್ಟರ್ ಹೇಳುತ್ತಾರೆ.
ಮಕ್ಕಳು ಸರಿಯಾದ ಹೊತ್ತಿನಲ್ಲಿ ಸಾಕಷ್ಟು ನಿದ್ದೆ ಮಾಡದಿದ್ದರೆ ಮೆದುಳಿನ ಮೇಲೆ ಕೂಡ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಜೆಎಎಂಎ ಪಿಡಿಯಾಟ್ರಿಕ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದು, 1 ಲಕ್ಷದ 25 ಸಾವಿರದ 198 ವಿದ್ಯಾರ್ಥಿಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ಮಕ್ಕಳ ಮೇಲೆ 20 ವಿವಿಧ ಬಗೆಯ ಅಧ್ಯಯನ ಮಾಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.