SIR ಕಸರತ್ತು ಚುರುಕು: ಕರ್ನಾಟಕದಲ್ಲಿ 41.63 ಲಕ್ಷ ನೋಟಿಸ್ ವಿತರಣೆ; 2.18 ಲಕ್ಷ ಬಾಕಿ
ಸೆಪ್ಟೆಂಬರ್ 25ರ ಅಂಕಿ-ಅಂಶದ ಪ್ರಕಾರ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಟ್ಟು 4,48,44,080 ಮತದಾರರು ಇದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಚುರುಕುಗೊಂಡಿದ್ದು, ಇದುವರೆಗೆ 41,63,368 ನೋಟಿಸ್ಗಳನ್ನು ಮತದಾರರಿಗೆ ವಿತರಿಸಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಇನ್ನೂ 2,18,928 ನೋಟಿಸ್ಗಳು ವಿತರಣೆಯಾಗಬೇಕಿವೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಶುಕ್ರವಾರ ತಿಳಿಸಿದೆ. ಸೆಪ್ಟೆಂಬರ್ 25ರ ಅಂಕಿ-ಅಂಶದ ಪ್ರಕಾರ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಟ್ಟು 4,48,44,080 ಮತದಾರರು ಇದ್ದಾರೆ.
ಇವರಲ್ಲಿ ಸುಮಾರು 2.22 ಕೋಟಿ ಪುರುಷರು, 2.25 ಕೋಟಿ ಮಹಿಳೆಯರು ಹಾಗೂ 2,873 ತೃತೀಯ ಲಿಂಗದ ಮತದಾರರು ಸೇರಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ‘No Mapping’ ಮತ್ತು ‘Anomalies’ ವಿಭಾಗಗಳಲ್ಲಿ ಗುರುತಿಸಲಾದ ಮತದಾರರಿಗೆ ಈ ನೋಟಿಸ್ಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾದ್ಯಂತ ಒಟ್ಟು 43,82,296 ನೋಟಿಸ್ಗಳನ್ನು ಸೃಷ್ಟಿಸಲಾಗಿದ್ದು, ಈ ಪೈಕಿ 41,63,368 ನೋಟಿಸ್ಗಳು ವಿತರಣೆಗೊಂಡಿವೆ. 2,18,928 ನೋಟಿಸ್ಗಳು ಇನ್ನೂ ವಿತರಣೆಯಾಗಬೇಕಿದ್ದು, ಒಟ್ಟಾರೆ ನೋಟಿಸ್ ವಿತರಣೆ ಪ್ರಮಾಣ ಶೇ.95ರಷ್ಟಾಗಿದೆ.
28.80 ಲಕ್ಷ ವಿಚಾರಣೆ ಪೂರ್ಣ
ಇತ್ತ ವಿತರಿಸಲಾದ ನೋಟಿಸ್ಗಳಿಗೆ ಸಂಬಂಧಿಸಿದಂತೆ 28,80,882 ವಿಚಾರಣೆಗಳು ಪೂರ್ಣಗೊಂಡಿವೆ. ಇದು ವಿತರಿಸಲಾದ ನೋಟಿಸ್ಗಳ ಶೇ.69.20ರಷ್ಟಾಗಿದೆ. ಇನ್ನೂ 12,82,486 ವಿಚಾರಣೆಗಳು ಬಾಕಿ ಉಳಿದಿವೆ ಎಂದು CEO ಕಚೇರಿ ತಿಳಿಸಿದೆ.
ಇದೇ ವೇಳೆ ವಿವಿಧ ನಮೂನೆಗಳ ಮೂಲಕ ಒಟ್ಟು 19,48,164 ಅರ್ಜಿಗಳು ಸ್ವೀಕರಿಸಲಾಗಿದೆ. ಇದರಲ್ಲಿ 7,70,988 Form 6, 4,551 Form 6A, 61,130 Form 7 ಹಾಗೂ 11,11,495 Form 8 ಅರ್ಜಿಗಳು ಸೇರಿವೆ.
ಅಕ್ಟೋಬರ್ 12ರಂದು ಕೊನೆಯ ವಿಚಾರಣೆ ನಡೆಯಲಿದ್ದು, ಅಕ್ಟೋಬರ್ 22 ಕ್ಲೇಮ್ಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ನೋಟಿಸ್ ಹಂತ ಪೂರ್ಣಗೊಳಿಸಲು ಕೊನೆಯ ದಿನವಾಗಿದೆ.
ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮನವಿಯಂತೆ, ‘No Mapping’ ಮತ್ತು ‘Anomalies’ ವಿಭಾಗಗಳಲ್ಲಿ ನೋಟಿಸ್ ಪಡೆದಿರುವವರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
Form 6 ಯಾರಿಗೆ?
ಮತದಾರರ ಪಟ್ಟಿಗೆ ಹೊಸ ಹೆಸರನ್ನು ಸೇರ್ಪಡೆಗೊಳಿಸಲು Form 6 ಬಳಸಬಹುದು. ಮೊದಲ ಬಾರಿಗೆ ಮತದಾರರಾಗುತ್ತಿರುವವರು ಹಾಗೂ ಮತದಾರರ ಗಣತಿ ವೇಳೆ ತಮ್ಮ ವಿಳಾಸದಲ್ಲಿ ಲಭ್ಯವಿರದ ಕಾರಣ ಸ್ಥಳಾಂತರಗೊಂಡವರು ಅಥವಾ ಗೈರುಹಾಜರಿದ್ದಾರೆ ಎಂದು ಗುರುತಿಸಲ್ಪಟ್ಟವರು ಘೋಷಣೆಯೊಂದಿಗೆ Form 6 ಸಲ್ಲಿಸಬಹುದು.
ಭಾರತದ ಬೇರೆ ಯಾವುದೇ ಸ್ಥಳದಲ್ಲಿ ಹೆಸರು ನೋಂದಣಿಯಾಗಿರದಿದ್ದರೆ, ಪ್ರಸ್ತುತ ವಾಸಿಸುವ ವಿಳಾಸದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಈ ನಮೂನೆಯನ್ನು ಬಳಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




