ಬೆಂಗಳೂರಿನ ಹೊರವಲಯದಲ್ಲಿ ಹಗಲು ದರೋಡೆ; ಸಿನಿಮಾ ಸ್ಟೈಲ್ನಲ್ಲಿ 23 ಲಕ್ಷ ರೂ ದೋಚಿ ಪರಾರಿ!
ಆನೇಕಲ್ನ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಮಾರಾಟ ಮಾಡಿದ ನಂತರ, ದಂಪತಿಗಳು ಕಾರಿನಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ, ಕಾರಿನ ಒಂದು ಟೈರ್ನಲ್ಲಿ ಗಾಳಿ ಇಲ್ಲದಿರುವುದು ಕಂಡುಬಂದಿದೆ.

ಬೆಂಗಳೂರು: ಬೆಂಗಳೂರಿನ ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಬಂದಿದ್ದ ತಮಿಳುನಾಡಿನ ದಂಪತಿಗಳ ಗಮನವನ್ನು ಸಿನಿಮಾ ಸ್ಟೈಲ್ನಲ್ಲಿ ಬೇರೆಡೆಗೆ ತಿರುಗಿಸಿ, ಸುಮಾರು 23 ಲಕ್ಷ ರೂಪಾಯಿ ನಗದು ಮತ್ತು ಡಿಮ್ಯಾಂಡ್ ಡ್ರಾಫ್ಟ್ನೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕಳೆದ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹೊಸೂರು ರಸ್ತೆಯ ಗುಡ್ಡಹಟ್ಟಿ ಗೇಟ್ನಲ್ಲಿ ಈ ಘಟನೆ ನಡೆದಿದೆ.
ಆನೇಕಲ್ನ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಮಾರಾಟ ಮಾಡಿದ ನಂತರ, ದಂಪತಿಗಳು ಕಾರಿನಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ, ಕಾರಿನ ಒಂದು ಟೈರ್ನಲ್ಲಿ ಗಾಳಿ ಇಲ್ಲದಿರುವುದು ಕಂಡುಬಂದಿದೆ. ಈ ವೇಳೆ ಅಪರಿಚಿತನೊಬ್ಬ ಪಂಕ್ಚರ್ ಅಂಗಡಿ ತೋರಿಸುವುದಾಗಿ ಹೇಳಿ ಅವರನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿದ್ದಾರೆ.
ತಮಿಳುನಾಡಿನ ಕಡಲೂರಿನ ಎನ್. ಕೃಷ್ಣ ಮೋಹನ್ (65) ಎಂಬುವವರು ತಮ್ಮ ಕಾರನ್ನು ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ, ಅವರ ಪತ್ನಿ ಪೆಟ್ರೋಲ್ ಬಂಕ್ನಲ್ಲಿದ್ದಾಗ ಸುತ್ತಮುತ್ತಲಲ್ಲಿ ಪಂಕ್ಚರ್ ಅಂಗಡಿಗಳಿವೆಯೇ ಎಂದು ವಿಚಾರಿಸಲು ಅಪರಿಚಿತರೊಂದಿಗೆ ಹೋಗಿದ್ದರು. ಈ ವೇಳೆ ಕಾರಿನ ಮುಂಭಾಗದ ವಿಂಡ್ಶೀಲ್ಡ್ ಅನ್ನು ಒಡೆದ ದುಷ್ಕರ್ಮಿಗಳು, ನಗದು, ಚಿನ್ನದ ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ.
ಈ ಸಂಬಂಧ ಮೋಹನ್ ಅವರು ಪೊಲೀಸರಿಗೆ ದೂರು ನೀಡಿದ್ದು, "ಆರೋಪಿಯು ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ದೂರುದಾರರನ್ನು ಹಿಂಬಾಲಿಸುತ್ತಿದ್ದನೆಂದು ನಮಗೆ ಅನುಮಾನವಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



