ರಾಜ್ಯ

ಬೆಂಗಳೂರು: ಮಾರತಹಳ್ಳಿಯನ್ನು 'ಮಿನಿ ಆಂಧ್ರ' ಎಂದ ತೆಲುಗು ಯುವತಿ; ಕನ್ನಡಿಗರ ಆಕ್ರೋಶ! video

ಬೆಂಗಳೂರಿನ ಮಾರತಹಳ್ಳಿಯನ್ನು 'ಮಿನಿ ಆಂಧ್ರ' ಎಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಗಳೂರು: ಮಾರತಹಳ್ಳಿಯನ್ನು 'ಮಿನಿ ಆಂಧ್ರ' ಎಂದ ತೆಲುಗು ಯುವತಿ; ಕನ್ನಡಿಗರ ಆಕ್ರೋಶ! video
ಆಂಧ್ರದ ಯುವತಿ
Published On :

ಬೆಂಗಳೂರು: ಆಂಧ್ರದ ಯುವತಿಯೊಬ್ಬರು ನೀಡಿರುವ ಹೇಳಿಕೆಯಿಂದ ಕನ್ನಡಿಗರು ಕೆರಳಿದ್ದಾರೆ. ಆಂಧ್ರದ ಯುವತಿಯೊಬ್ಬರದ್ದು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ವಿವಾದ? ಬೆಂಗಳೂರಿನ ಮಾರತಹಳ್ಳಿಯನ್ನು 'ಮಿನಿ ಆಂಧ್ರ' ಎಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಹೌದು. ಮಾರತಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಾ ವಿಡಿಯೋ ಮಾಡಿರುವ ಯುವತಿ, ಸ್ನೇಹಿತರೇ ಮಾರತಹಳ್ಳಿಯನ್ನು ಯಾಕೆ ಮಿನಿ ಆಂಧ್ರ ಎಂದು ಕರೆಯುತ್ತಾರೆ ಗೊತ್ತೆ? ಇಲ್ಲಿ ಶೇ.99. 99ರಷ್ಟು ಆಂಧ್ರದವರೇ ಇದ್ದೇವೆ. ಅದರಲ್ಲೂ ರಾಯಲ ಸೀಮಾದವರೇ ಹೆಚ್ಚು. ಅನಂತಪುರ ಜಿಲ್ಲೆಯವರೇ ಹೆಚ್ಚು ಎಂದು ಹೇಳುವುದು ವಿಡಿಯೋದಲ್ಲಿದೆ.

ಯುವತಿಯ ಹೇಳಿಕೆಯಿಂದ ಬೆಂಗಳೂರಿನ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಕೆರಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ವಲಸೆ ನೀತಿ ಜಾರಿಗೆ ತರುವುದು ಉತ್ತಮ ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.