Video: ಮುಂಬೈ ವಿಮಾನ ನಿಲ್ದಾಣದಲ್ಲಿ ವಿದ್ಯಾ ಬಾಲನ್-ಸಿದ್ಧಾರ್ಥ್ ಲಿಪ್ಲಾಕ್! ವಿಡಿಯೋ ವೈರಲ್
ನಟಿ ವಿದ್ಯಾ ಬಾಲನ್ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಅವರನ್ನು ಬೀಳ್ಕೊಡಲು ಪತಿ ಸಿದ್ಧಾರ್ಥ್ ಅವರು ಸ್ವತಃ ಏರ್ಪೋರ್ಟ್ಗೆ ಬಂದಿದ್ದರು.

ಮುಂಬೈ: ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ತಮ್ಮ ಪತಿ ಸಿದ್ಧಾರ್ಥ್ ರಾಯ್ ಕಪೂರ್ ಅವರಿಗೆ ಸಾರ್ವಜನಿಕವಾಗಿಯೇ ರೋಮ್ಯಾಂಟಿಕ್ ಆಗಿಯೇ ಕಿಸ್ ಮಾಡಿರುವ ಅಪರೂಪದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನಟಿ ವಿದ್ಯಾ ಬಾಲನ್ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಅವರನ್ನು ಬೀಳ್ಕೊಡಲು ಪತಿ ಸಿದ್ಧಾರ್ಥ್ ಅವರು ಸ್ವತಃ ಏರ್ಪೋರ್ಟ್ಗೆ ಬಂದಿದ್ದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಕಾಯುತ್ತಿದ್ದ ಪಾಪರಾಜಿಗಳನ್ನು (ಛಾಯಾಗ್ರಾಹಕರನ್ನು) ಕಂಡು ದಂಪತಿಗಳು ಮುಗುಳುನಗುತ್ತಾ ಸಾಂಪ್ರದಾಯಿಕವಾಗಿ ಫೋಟೋಗಳಿಗೆ ಪೋಸ್ ನೀಡಿದರು..
ಟರ್ಮಿನಲ್ನೊಳಗೆ ತೆರಳುವ ಮುನ್ನ, ವಿದ್ಯಾ ಮತ್ತು ಸಿದ್ಧಾರ್ಥ್ ಪರಸ್ಪರ ಅಪ್ಪಿಕೊಂಡು ಮುತ್ತಿಕ್ಕಿ, ಬಳಿಕ ಅಲ್ಲಿಂದ ಹೊರಟರು.
ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನವನ್ನು ಕ್ಯಾಮೆರಾಗಳಿಂದ ಕೊಂಚ ದೂರವೇ ಇಡುವ ಈ ಜೋಡಿ, ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಇಷ್ಟೊಂದು ಮುದ್ದಾಗಿ ಪ್ರೀತಿ ವ್ಯಕ್ತಪಡಿಸಿದ್ದು ಎಲ್ಲರ ಗಮನ ಸೆಳೆದಿದೆ. ಪ್ರಸ್ತುತ ಈ ವಿಡಿಯೋ ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಗೂ ಅಭಿಮಾನಿಗಳು ಈ ದಂಪತಿಯ ಆಕರ್ಷಕ ಕೆಮಿಸ್ಟ್ರಿಗೆ ಹಾಗೂ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



