ವಿದೇಶ

Nepal airportನಲ್ಲಿ ವಿಮಾನ ಅವಘಡ: ಲ್ಯಾಂಡಿಂಗ್ ವೇಳೆ ಕಳಚಿಬಿದ್ದ ಟೈರ್; ಸಾವಿನ ದವಡೆಯಿಂದ 16 ಮಂದಿ ಪಾರು..!

ಸೀತಾ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಡೋಲ್ಪಾ ಜಿಲ್ಲೆಯ ಜುಫಾಲ್ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಹಿಂಭಾಗದ ಬಲ ಚಕ್ರ ಕಳಚಿಕೊಂಡಿದೆ.

Nepal airportನಲ್ಲಿ ವಿಮಾನ ಅವಘಡ: ಲ್ಯಾಂಡಿಂಗ್ ವೇಳೆ ಕಳಚಿಬಿದ್ದ ಟೈರ್; ಸಾವಿನ ದವಡೆಯಿಂದ 16 ಮಂದಿ ಪಾರು..!
ಸೀತಾ ಏರ್‌ಲೈನ್ಸ್‌ ವಿಮಾನ
Published On :

ಕಠ್ಮಂಡು: ನೇಪಾಳದ ಡೊಲ್ಪಾ ಜಿಲ್ಲೆಯ ಜುಫಾಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ಭೀಕರ ವಿಮಾನ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಖಾಸಗಿ ವಿಮಾನಯಾನ ಸಂಸ್ಥೆಯಾದ 'ಸೀತಾ ಏರ್‌ಲೈನ್ಸ್‌ಗೆ ಸೇರಿದ ಸಣ್ಣ ಪ್ರಯಾಣಿಕರ ವಿಮಾನವೊಂದು ರನ್‌ವೇನಲ್ಲಿ ಲ್ಯಾಂಡ್ ಆಗುವಾಗ ಅದರ ಹಿಂದಿನ ಚಕ್ರದ ಟೈರ್ ಸಂಪೂರ್ಣವಾಗಿ ಕಳಚಿ ಬಿದ್ದಿದೆ.

ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ 13 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿ ಸೇರಿದಂತೆ ಒಟ್ಟು 16 ಜನರೂ ಸುರಕ್ಷಿತವಾಗಿದ್ದಾರೆ.

ಸೀತಾ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಡೋಲ್ಪಾ ಜಿಲ್ಲೆಯ ಜುಫಾಲ್ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಹಿಂಭಾಗದ ಬಲ ಚಕ್ರ ಕಳಚಿಕೊಂಡಿದೆ. ವಿಮಾನದಲ್ಲಿ 13 ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿ ಸೇರಿದಂತೆ ಒಟ್ಟು 16 ಮಂದಿ ಇದ್ದರು. ಪ್ರಯಾಣಿಕರ ಪೈಕಿ ಏಳು ಮಂದಿ ವಿದೇಶಿ ಪ್ರಜೆಗಳಾಗಿದ್ದರು.

"ಹಿಂಭಾಗದ ಬಲಭಾಗದ ಟೈರ್ ಕಳಚಿಕೊಂಡ ಬಳಿಕ 13 ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿಯನ್ನು ಹೊತ್ತಿದ್ದ ಸಣ್ಣ ವಿಮಾನ ರನ್‌ವೇಯಲ್ಲೇ ಅವಘಡಕ್ಕೀಡಾಯಿತು" ಎಂದು ಡೋಲ್ಪಾ ಜಿಲ್ಲಾ ಪೊಲೀಸ್ ಕಚೇರಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ರಾಜ್ ಗಿರಿ ತಿಳಿಸಿದ್ದಾರೆ.

ವಾಯವ್ಯ ನೇಪಾಳದ ಕರ್ಣಾಲಿ ಪ್ರಾಂತ್ಯದಲ್ಲಿರುವ ಡೋಲ್ಪಾ ಜಿಲ್ಲೆಗೆ ನೇಪಾಳ್‌ಗಂಜ್‌ನಿಂದ ವಿಮಾನ ಹೊರಟಿತ್ತು. ಸ್ಥಳೀಯ ಕಾಲಮಾನ ಬೆಳಗ್ಗೆ ಸುಮಾರು 8.25ಕ್ಕೆ ಜುಫಾಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಘಟನೆ ನಡೆದಿದೆ.

ಅವಘಡ ಸಂಭವಿಸುತ್ತಿದ್ದಂತೆ ಪೈಲಟ್ ತಕ್ಷಣವೇ ವಿಮಾನದ ಎಂಜಿನ್‌ನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದೆ. ವಿಮಾನಕ್ಕೆ ಯಾವುದೇ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ವಿಮಾನ ರನ್‌ವೇಯಲ್ಲೇ ಸಿಲುಕಿಕೊಂಡಿರುವುದರಿಂದ ಜುಫಾಲ್ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ಜುಫಾಲ್‌ಗೆ ಬರುತ್ತಿದ್ದ ನೇಪಾಳ ಸೇನೆಯ ವಿಮಾನವೂ ಮಾರ್ಗ ಬದಲಿಸಿ ಹಿಂದಿರುಗಬೇಕಾಯಿತು.

ಸದ್ಯ ರನ್‌ವೇಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ವಿಮಾನವನ್ನು ತೆರವುಗೊಳಿಸಿ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಕಾರ್ಯಾಚರಣೆ ಪುನರಾರಂಭಿಸಲು ಹೆಲಿಕಾಪ್ಟರ್ ಮೂಲಕ ತಾಂತ್ರಿಕ ಸಿಬ್ಬಂದಿಯನ್ನು ಕರೆತರಲು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.