ರಾಜ್ಯ

ನಲಪಾಡ್ ಆರತಕ್ಷತೆಯಲ್ಲಿ ಕಿಚ್ಚ ಸುದೀಪ್ ಮಧುರ ಗಾಯನ: 'ಕಾಂತಾ' ಹಾಡಿಗೆ ಅಭಿಮಾನಿಗಳು ಫಿದಾ..! Video

ಮಲಯಾಳಂನ ಜನಪ್ರಿಯ ‘ಕಾಂತಾ ನಾನಂವರಾ’ ಹಾಡನ್ನು ಸುದೀಪ್ ಈ ಹಿಂದೆಯೂ ರಿಯಾಲಿಟಿ ಶೋವೊಂದರ ವೇದಿಕೆಯಲ್ಲಿ ಹಾಡಿದ್ದರು. ಮಲಯಾಳಂನ ಫೋಕ್-ಫ್ಯೂಷನ್ ಶೈಲಿಯ ಈ ಹಾಡು ಬಳಿಕ ಕನ್ನಡದಲ್ಲೂ ಜನಪ್ರಿಯತೆ ಗಳಿಸಿತ್ತು.

ನಲಪಾಡ್ ಆರತಕ್ಷತೆಯಲ್ಲಿ ಕಿಚ್ಚ ಸುದೀಪ್ ಮಧುರ ಗಾಯನ: 'ಕಾಂತಾ' ಹಾಡಿಗೆ ಅಭಿಮಾನಿಗಳು ಫಿದಾ..! Video
ನಲಪಾಡ್ ಆರತಕ್ಷತೆ ಸಮಾರಂಭದಲ್ಲಿ ಸುದೀಪ್ ದಂಪತಿ
Published On :

ಬೆಂಗಳೂರು: ಉದ್ಯಮಿ ಹಾಗೂ ರಾಜಕಾರಣಿ ನಲಪಾಡ್ ಅವರ ಆರತಕ್ಷತೆ ಸಮಾರಂಭದಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ಭಾಗವಹಿಸಿದ್ದು, ಸಮಾರಂಭದಲ್ಲಿ ಸುದೀಪ್ ಅವರು ಹಾಡಿದ ಹಾಡೊಂದು ಎಲ್ಲರ ಗಮನ ಸೆಳೆಯಿತು.

ಆರತಕ್ಷತೆ ವೇಳೆ ಸುದೀಪ್ ಅವರಿಗೆ ಹಾಡು ಹಾಡುವಂತೆ ಒತ್ತಾಯ ಬಂದಿದ್ದು, ಈ ವೇಳೆ ಸುದೀಪ್ ಅವರು, ವೇದಿಕೆಯಲ್ಲಿದ್ದ ತಮ್ಮ ಪತ್ನಿ ಪ್ರಿಯಾ ಅವರನ್ನು ಉದ್ದೇಶಿಸಿ ‘ಕಾಂತಾ’ ಹಾಡನ್ನು ಹಾಡಿದರು.

ಪ್ರಿಯಾ ಮೂಲತಃ ಮಲಯಾಳಿ ಕುಟುಂಬದವರಾಗಿದ್ದು, ಸುದೀಪ್ ಅವರಿಗೆ ಈ ಹಾಡು ಬಹಳ ಇಷ್ಟ ಎನ್ನಲಾಗಿದೆ. ಹೀಗಾಗಿ ಪತ್ನಿಗಾಗಿ ಆಗಾಗ ಈ ಹಾಡನ್ನು ಹಾಡುವ ಕಿಚ್ಚ, ನಲಪಾಡ್ ಆರತಕ್ಷತೆಯಲ್ಲೂ ಅದೇ ಹಾಡನ್ನು ಹಾಡಿ ಸಂಭ್ರಮಿಸಿದರು.

ಮಲಯಾಳಂನ ಜನಪ್ರಿಯ ‘ಕಾಂತಾ ನಾನಂವರಾ’ ಹಾಡನ್ನು ಸುದೀಪ್ ಈ ಹಿಂದೆಯೂ ರಿಯಾಲಿಟಿ ಶೋವೊಂದರ ವೇದಿಕೆಯಲ್ಲಿ ಹಾಡಿದ್ದರು. ಮಲಯಾಳಂನ ಫೋಕ್-ಫ್ಯೂಷನ್ ಶೈಲಿಯ ಈ ಹಾಡು ಬಳಿಕ ಕನ್ನಡದಲ್ಲೂ ಜನಪ್ರಿಯತೆ ಗಳಿಸಿತ್ತು.

ಇದೀಗ ನಲಪಾಡ್ ಅವರ ಆರತಕ್ಷತೆ ಸಮಾರಂಭದಲ್ಲಿ ಸುದೀಪ್ ಮತ್ತೊಮ್ಮೆ ಇದೇ ಹಾಡನ್ನು ಹಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಿಚ್ಚನ ಗಾಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.