ತುರ್ತು ನಿರ್ವಹಣೆ: ಅಕ್ಟೋಬರ್ 24-25 ರಂದು ESCOM ಸೇವೆಯಲ್ಲಿ ವ್ಯತ್ಯಯ
ತುರ್ತು ನಿರ್ವಹಣಾ ಕಾರ್ಯಗಳಿಂದಾಗಿ ಅ.24 ರಂದು ರಾತ್ರಿ 8 ಗಂಟೆಯಿಂದ ಅ.25 ರ ಮಧ್ಯಾಹ್ನ 1 ಗಂಟೆವರೆಗೆ ಐದು ಎಸ್ಕಾಂಗಳ ನಗರ ವ್ಯಾಪ್ತಿಯ ಗ್ರಾಹಕರಿಗೆ (ಆರ್‌ಎಪಿಡಿಆರ್‌ಪಿ) ಆನ್‌ಲೈನ್ ಸೇವೆ ಲಭ್ಯವಿರುವುದಿಲ್ಲ.

ಬೆಂಗಳೂರು: ರಾಜ್ಯದ ಐದೂ ಎಸ್ಕಾಂಗಳ ಸೇವೆಗಳಲ್ಲಿ ಅಕ್ಟೋಬರ್ 24-25ರಂದು ವ್ಯತ್ಯಯ ಉಂಟಾಗಲಿದೆ.
ತುರ್ತು ನಿರ್ವಹಣಾ ಕಾರ್ಯಗಳಿಂದಾಗಿ ಅ.24 ರಂದು ರಾತ್ರಿ 8 ಗಂಟೆಯಿಂದ ಅ.25 ರ ಮಧ್ಯಾಹ್ನ 1 ಗಂಟೆವರೆಗೆ ಐದು ಎಸ್ಕಾಂಗಳ ನಗರ ವ್ಯಾಪ್ತಿಯ ಗ್ರಾಹಕರಿಗೆ (ಆರ್‌ಎಪಿಡಿಆರ್‌ಪಿ) ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಮೀಟರ್ ಬದಲಾವಣೆ, ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಸೇರಿದಂತೆ ಯಾವುದೇ ಆನ್‌ಲೈನ್ ಸೇವೆ ಲಭ್ಯವಿರುವುದಿಲ್ಲ.
ಜತೆಗೆ ವಿದ್ಯುತ್ ಬಿಲ್ ಪಾವತಿಗಾಗಿ ಬಳಸುವ ಬೆಸ್ಕಾಂ ಮಿತ್ರ ಆ್ಯಪ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿ ಥರ್ಡ್ ಪಾರ್ಟಿ ಪಾವತಿ ವಿಧಾನಗಳಲ್ಲೂ ಈ ಸೇವೆ ಅಲಭ್ಯ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ಹುಬ್ಬಳ್ಳಿಯ ಹೆಸ್ಕಾಂ, ಕಲಬುರಗಿಯ ಜೆಸ್ಕಾಂ, ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್), ಮಂಗಳೂರಿನ ಮೆಸ್ಕಾಂ ಸೇರಿ ಐದು ಕಂಪೆನಿಗಳ ವ್ಯಾಪ್ತಿಯಲ್ಲಿ ಆನ್‌ಲೈನ್ ಸೇವೆ ಲಭ್ಯವಿರುವುದಿಲ್ಲ. ಅನಾನುಕೂಲತೆಗಾಗಿ ಜನರು ಸಹಕರಿಸಬೇಕೆಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



