ಎಸ್ಕಾಂ

ತುರ್ತು ನಿರ್ವಹಣೆ: ಅಕ್ಟೋಬರ್ 24-25 ರಂದು ESCOM ಸೇವೆಯಲ್ಲಿ ವ್ಯತ್ಯಯ
ತುರ್ತು ನಿರ್ವಹಣಾ ಕಾರ್ಯಗಳಿಂದಾಗಿ ಅ.24 ರಂದು ರಾತ್ರಿ 8 ಗಂಟೆಯಿಂದ ಅ.25 ರ ಮಧ್ಯಾಹ್ನ 1 ಗಂಟೆವರೆಗೆ ಐದು ಎಸ್ಕಾಂಗಳ ನಗರ ವ್ಯಾಪ್ತಿಯ ಗ್ರಾಹಕರಿಗೆ (ಆರ್‌ಎಪಿಡಿಆರ್‌ಪಿ) ಆನ್‌ಲೈನ್ ಸೇವೆ ಲಭ್ಯವಿರುವುದಿಲ್ಲ.

ಮತ್ತೆ ದರ ಏರಿಕೆ ಶಾಕ್: ESCOM ಆದಾಯ ಅಂತರ ಸರಿದೂಗಿಸಲು ಜನರ ಜೇಬಿಗೆ ಕತ್ತರಿ..?
ಸರ್ಕಾರವು IP ಸೆಟ್‌ಗಳಿಗೆ ನೀಡಿರುವ ಸಬ್ಸಿಡಿ ಹೆಚ್ಚಾಗಿದೆ, ಇದನ್ನು ESCOM ಗಳು ನಿರ್ವಹಿಸಲು ಕಷ್ಟಕರವಾಗಿದೆ. ಹೀಗಾಗಿ ಆದಾಯವನ್ನು ಹೊಂದಿಸಲು, ESCOM ಗಳು ಗ್ರಾಹಕರ ಮೇಲೆ ಹೆಚ್ಚಿನ ಸುಂಕ ಹೇರಲು ಬಯಸುತ್ತಿದ್ದಾರೆ.

ಸರ್ಕಾರದಿಂದ ಸಂದಾಯವಾಗದ ಗೃಹಜ್ಯೋತಿ ಹಣ: ಜನರಿಂದಲೇ ವಸೂಲಿಗೆ ಎಸ್ಕಾಂಗಳ ಪ್ರಸ್ತಾವ: ವ್ಯಾಪಕ ಆಕ್ರೋಶ
ಎಸ್ಕಾಮ್ ಗಳ ಮನವಿ ಈಗ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದು, ಗೃಹಜ್ಯೋತಿ ಯೋಜನೆ ಶೀಘ್ರವೇ ಸ್ಥಗಿತಗೊಳ್ಳಲಿದೆಯೇ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಸಾಫ್ಟ್‌ವೇರ್ ಅಪ್‌ಗ್ರೇಡ್ ಕಾರಣ 10 ದಿನಗಳ ಕಾಲ ಎಸ್ಕಾಂಗಳ ಆನ್‌ಲೈನ್ ಸೇವೆ ಸ್ಥಗಿತ
ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಕಾರಣ ಮಾರ್ಚ್ 10 ರಿಂದ 19 ರವರೆಗೆ ಒಟ್ಟು ಹತ್ತು ದಿನಗಳ ಕಾಲ ರಾಜ್ಯದ ಎಲ್ಲಾ ಎಸ್ಕಾಂಗಳ ಆನ್‌ಲೈನ್ ಸೇವೆಗಳು ನಗರ ಪುದೇಶದ ಗ್ರಾಹಕರಿಗೆ ಲಭ್ಯವಿರುವುದಿಲ್ಲ.

ರೈತರಿಗೆ ನಿತ್ಯ 5 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ರೈತರಿಗೆ ಕೃಷಿ ಪಂಪ್ ಸೆಟ್ ಬಳಕೆಗೆ ನಿತ್ಯ 5 ಗಂಟೆಗಳ ತಡೆರಹಿತ 3-ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

13,700 ಕೋಟಿ ರೂ. ವರೆಗೆ ಸಾಲ ಪಡೆಯಲು ಎಸ್ಕಾಂಗೆ ಅವಕಾಶ: ರಾಜ್ಯ ಸಚಿವ ಸಂಪುಟ ನಿರ್ಧಾರ
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಮ್ಸ್) 13,708.32 ಕೋಟಿ ರೂಪಾಯಿ ಸಾಲ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಗುರುವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ವಿದ್ಯುತ್ ದರ ಏರಿಕೆಗೆ ಎಸ್ಕಾಂ ಚಿಂತನೆ: ಎಫ್'ಕೆಸಿಸಿಐ ವಿರೋಧ
ವಿದ್ಯುತ್ ದರವನ್ನು ಹೆಚ್ಚಳ ಮಾಡುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ) ವಿರೋಧ ವ್ಯಕ್ತಪಡಿಸಿದೆ.

ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಕಾಂಗ್ರೆಸ್ ಪ್ರಯತ್ನ ಎಂದ ಸುನಿಲ್ ಕುಮಾರ್, ಸಿದ್ದರಾಮಯ್ಯ ತಿರುಗೇಟು
ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೂ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡುತ್ತಿದೆ. ಈ ಮೂಲಕ ವಿದ್ಯುತ್ ಸರಬರಾಜು ಕಂಪನಿಗಳನ್ನು (ಎಸ್ಕಾಂ) ಖಾಸಗೀಕರಣಗೊಳಿಸುವುದು ಕಾಂಗ್ರೆಸ್‌ನ ಗುರಿಯಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಶುಕ್ರವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ತಿರುಗೇ

ನಿಗದಿತ ಸಮಯಕ್ಕೆ ಬಿಲ್'ಗಳ ಪಾವತಿಸಿ: ಎಸ್ಕಾಂಗಳಿಗೆ ಹೈಕೋರ್ಟ್ ಸೂಚನೆ
ವಿದ್ಯುತ್ ಉತ್ಪಾದಕರಿಗೆ ಬಾಕಿ ಇರುವ ಬಿಲ್ ಗಳನ್ನು ವಿಳಂಬವಿಲ್ಲದೆ ಪಾವತಿಸುವುದು ಸೇರಿದಂತೆ ವಿದ್ಯುತ್ ಖರೀದಿ ಒಪ್ಪಂದಗಳ (ಪಿಪಿಎ) ಅಡಿಯಲ್ಲಿ ತಮ್ಮ ಬಾಧ್ಯತೆ ಮತ್ತು ಹೊಣೆಗಾರಿಕೆಗಳನ್ನು ಗೌರವಿಸುವಂತೆ ಎಲ್ಲಾ ಎಸ್ಕಾಮ್‌ಗಳು (ವಿದ್ಯುತ್ ಸರಬರಾಜು ಕಂಪನಿಗಳು) ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.

