ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ: ಪೊಲೀಸರ ಹೈ ಅಲರ್ಟ್, ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ
ಶಿವರಾತ್ರಿ ಹಿನ್ನೆಲೆ ರಾಜ್ಯದ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ಬೆಳಗ್ಗೆಯಿಂದಲೇ ಸಾಗಿದೆ.

ಬೆಂಗಳೂರು: ನಾಡಿನೆಲ್ಲೆಡೆ ಇಂದು ಶಿವರಾತ್ರಿ ಹಬ್ಬದ ಸಂಭ್ರಮ. ಶಿವರಾತ್ರಿ ಹಿನ್ನೆಲೆ ರಾಜ್ಯದ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ಬೆಳಗ್ಗೆಯಿಂದಲೇ ಸಾಗಿದೆ.
ಬೆಂಗಳೂರಿನಲ್ಲಿ ವಿಶೇಷ ಕಟ್ಟೆಚ್ಚರ: ನಗರದ ಎಲ್ಲಾ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದೆ. ಮತ್ತೊಂದೆಡೆ ಕಳೆದ ಶುಕ್ರವಾರ ಬಾಂಬ್ ಸ್ಫೋಟಗೊಂಡಿದ್ದ ರಾಮೇಶ್ವರಂ ಕೆಫೆ ಮತ್ತೆ ಇಂದು ಶಿವಪಾತ್ರಿ ದಿನ ಪುನಾರಂಭಗೊಳ್ಳುತ್ತಿದೆ.
ಶಿವರಾತ್ರಿ ಹಬ್ಬ ಆಚರಣೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಪೊಲೀಸ್ ಹೈ ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಸಂಚಾರಿ ಮಾರ್ಪಾಡು ಮಾಡಿದ್ದಾರೆ.ನಗರದಲ್ಲಿ ಇಂದು ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ.
ಶಿವ ದೇವಸ್ಥಾನಗಳಿಗೆ ಮುನ್ನೆಚ್ಚರಿಕ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಂದು ಬೆಳಗಿನ ಜಾವದಿಂದಲೇ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ನಗರದ ಎಲ್ಲ ಠಾಣೆಗಳ ಇನ್ಸ್ಪೆಕ್ಟರ್, ಸಿಬ್ಬಂದಿ ಗಸ್ತಿನಲ್ಲಿರುವಂತೆ ಸೂಚನೆ ನೀಡಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ನಂತರ ಹೈಅಲರ್ಟ್ ಆಗಿರುವ ಪೊಲೀಸರು ಯಾವುದೇ ವಿಧ್ವಂಸಕ ಕೃತ್ಯ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ: ಬೆಂಗಳೂರಿನಲ್ಲಿ ಇಂದು ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಜೀವನಹಳ್ಳಿ, ಚಾರ್ಲ್ಸ್ ಕ್ಯಾಂಬೇಜ್ ಮುಖ್ಯರಸ್ತೆ, ಬೈಯ್ಯಪ್ಪನಹಳ್ಳಿ ರಸ್ತೆ, ಕಲ್ಲಲ್ಲಿ ಸ್ಮಶಾನದ ರಸ್ತೆ, ಗರುಡಾಚಾರಪಾಳ್ಯ ಜಂಕ್ಷನ್‌ನಿಂದ ರಾಯಣ್ಣ ಸರ್ಕಲ್, ಗೋಶಾಲ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ವರೆಗೆ ಸಂಚಾರ ನಿರ್ಬಂಧ ಇರಲಿದೆ.
ಇಂದು ಮಧ್ಯಾಹ್ನ 12 ಗಂಟೆಯಿಂದ ಸಿಎಂಹೆಚ್ ರಸ್ತೆಯ ಆದರ್ಶ ಜಂಕ್ಷನ್‌ನಿಂದ ಶಾಂತಿ ಸಾಗರ್ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10ರವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಬಜಾರ್ ಸ್ಟ್ರೀಟ್ ಬೇಗಂ ಮಾಲ್ನಿಂದ ರಾಮಯ್ಯ ಜಂಕ್ಷನ್ವರೆಗೆ ನಿರ್ಬಂಧ ಇರಲಿದೆ.
ಓ.ಎಂ.ಸರ್ಕಾರಿ ಕಾಲೇಜ್ ರಸ್ತೆ ಬೆಳಗ್ಗೆ 6ರಿಂದ ನಾಳೆ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಲಾಗಿದೆ. ಯಮಲೂರು ಓಂ ಶಕ್ತಿ ದೇಗುಲದಿಂದ ಸರ್ಕಾರಿ ಶಾಲೆವರೆಗಿನ ರಸ್ತೆ ನಿರ್ಬಂಧ. ಕೆಲ ರಸ್ತೆಗಳಲ್ಲಿ ನಿರ್ಬಂಧ ಹಿನ್ನೆಲೆ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ: ದೊಡ್ಡಗುಂಟೆ ಸರ್ಕಲ್, ಕೆನ್ಸಿಂಗ್ಟನ್ ರಸ್ತೆ ಮೂಲಕ ಬೈಯ್ಯಪ್ಪನಹಳ್ಳಿ ಓವರ್ ಬ್ರಿಡ್ಜ್ ಎಡರಸ್ತೆ, ಹೂಡಿ ಕೃಷ್ಣ ಟೆಂಪಲ್. ಐಟಿಪಿಎಲ್ ರಸ್ತೆ, ಬಿಎಂಶ್ರೀ ಜಂಕ್ಷನ್‌ನಿಂದ ಆದರ್ಶ ಜಂಕ್ಷನ್ ಮೂಲಕ ತೆರಳಬಹುದು. ಬಜಾರ್ ಸ್ಟ್ರೀಟ್ ಸವಾರರಿಗೆ ಗುರುದ್ವಾರ ಜಂಕ್ಷನ್. ರಾಮಯ್ಯ ಜಂಕ್ಷನ್ ಸವಾರರಿಗೆ ಟ್ರಿನಿಟಿ ಜಂಕ್ಷನ್. ಓ.ಎಂ.ರಸ್ತೆ ಸವಾರರಿಗೆ ಕೆ ಆರ್.ಪುರಂ ಎಕ್ಸ್ಟೆನ್ಷನ್ ರಸ್ತೆ ಬಳಸುವಂತೆ ಮನವಿ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


