ಬೆಂಗಳೂರು: ತಂತ್ರಜ್ಞಾನದ ಸಹಾಯದಿಂದ 10 ಸಾವಿರ ಸೊಳ್ಳೆ ಸಂತಾನೋತ್ಪತ್ತಿ ತಾಣ ಪತ್ತೆ
ಡೆಂಗ್ಯೂ ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್ ಮತ್ತು PRISM-H (ಪ್ಲಾಟ್‌ಫಾರ್ಮ್ ಫಾರ್ ಇಂಟಿಗ್ರೇಟೆಡ್ ಸರ್ವೆಲೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಆಫ್ ಹೆಲ್ತ್) ಅಪ್ಲಿಕೇಶನ್ ಸಹಾಯದಿಂದ ಒಂದು ತಿಂಗಳೊಳಗೆ 10,000 ಸೊಳ್ಳೆ - ಸಂತಾನೋತ್ಪತ್ತಿ...

ಬೆಂಗಳೂರು: ಡೆಂಗ್ಯೂ ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್ ಮತ್ತು PRISM-H (ಪ್ಲಾಟ್‌ಫಾರ್ಮ್ ಫಾರ್ ಇಂಟಿಗ್ರೇಟೆಡ್ ಸರ್ವೆಲೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಆಫ್ ಹೆಲ್ತ್) ಅಪ್ಲಿಕೇಶನ್ ಸಹಾಯದಿಂದ ಒಂದು ತಿಂಗಳೊಳಗೆ 10,000 ಸೊಳ್ಳೆ - ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಲಾಗಿದೆ ಮತ್ತು ನಗರದಲ್ಲಿ ಎರಡು ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಲು ಅದು ಸಹಾಯ ಮಾಡಿದೆ.ಕಳೆದ ಸೆಪ್ಟೆಂಬರ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 225 ವಾರ್ಡ್‌ಗಳಲ್ಲಿ ಈ ಅಪ್ಲಿಕೇಶನ್ ಗೆ ಚಾಲನೆ ನೀಡಲಾಗಿತ್ತು ಎಂದು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಎಐ ಮತ್ತು ಟೆಕ್ನಾಲಜಿ ಪಾರ್ಕ್ (ಆರ್‌ಟಿಪಿಆರ್‌ಕೆ) ಕಾರ್ಯಕ್ರಮ ನಿರ್ದೇಶಕ ಡಾ. ಭಾಸ್ಕರ್ ರಾಜ್‌ಕುಮಾರ್ ಅವರು ಹೇಳಿದ್ದಾರೆ.
ಈ ಅಪ್ಲಿಕೇಶನ್ ಅನ್ನು ಬೆಂಗಳೂರಿನ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು(ASHA) ಹೆಚ್ಚು ವೇಗವಾಗಿ ಅಳವಡಿಸಿಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತರು ಮತ್ತು ಇತರ ಕ್ಷೇತ್ರ ಕಾರ್ಯಕರ್ತರು ಅಪ್ಲಿಕೇಶನ್ ಬಿಡುಗಡೆಯಾದ ಒಂದು ತಿಂಗಳೊಳಗೆ ಎರಡು ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಿ, 10,000 ಸೊಳ್ಳೆ-ಸಂತಾನೋತ್ಪತ್ತಿ ಸ್ಥಳಗಳನ್ನು ಗುರುತಿಸಿದ್ದಾರೆ.
ತಂತ್ರಜ್ಞಾನದ ಏಕೀಕರಣದೊಂದಿಗೆ, ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲಾ ಸೊಳ್ಳೆ-ಸಂತಾನೋತ್ಪತ್ತಿ ತಾಣಗಳು ಮತ್ತು ಪಾಸಿಟಿವ್ ಡೆಂಗ್ಯೂ ಪ್ರಕರಣಗಳಿರುವ ಮನೆಗಳ ಭೌಗೋಳಿಕ ಸ್ಥಳವನ್ನು ಛಾಯಾಚಿತ್ರ ಸಾಕ್ಷ್ಯದೊಂದಿಗೆ ಗುರುತಿಸಲು ಸಾಧ್ಯವಾಗಿದೆ. ಬ್ರೀಡಿಂಗ್ ಸ್ಪಾಟ್‌ಗಳ ತೆರವು ಅಥವಾ ಧೂಮೀಕರಣದಂತಹ ಚಟುವಟಿಕೆಗಳ ಮೇಲೆ ಅಧಿಕಾರಿಗಳು ಉತ್ತಮವಾಗಿ ಮೇಲ್ವಿಚಾರಣೆ ಮಾಡಿದ್ದಾರೆ.
ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎಸ್.ಬಾಲಸುಂದರ್ ಮಾತನಾಡಿ, ಈ ಹಿಂದೆ ದತ್ತಾಂಶವನ್ನು ಒಟ್ಟುಗೂಡಿಸುವಲ್ಲಿ ಸಮಸ್ಯೆಗಳಿದ್ದವು. ಸಮೀಕ್ಷೆಗಳನ್ನು ನಡೆಸಲಾಗಿದ್ದರೂ, ಅವುಗಳನ್ನು ಸಮರ್ಥವಾಗಿ ದಾಖಲಿಸಲಾಗಿಲ್ಲ. ಈ ರೋಗದ ಕಣ್ಗಾವಲು ವ್ಯವಸ್ಥೆಯ ಸಹಾಯದಿಂದ, ಅವರು ಡೆಂಗ್ಯೂ ಪ್ರಕರಣಗಳ ಸಂಖ್ಯೆ ಮತ್ತು ಸಂತಾನೋತ್ಪತ್ತಿ ತಾಣಗಳನ್ನು ಸರಿಯಾಗಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡೆಂಗ್ಯೂಗೆ ಸಂಬಂಧಿಸಿದಂತೆ, ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ 4,000 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ಈಗ ಇಳಿಮುಖದ ಪ್ರವೃತ್ತಿಗೆ ಸಾಕ್ಷಿಯಾಗಿದೆ. ನಗರದಲ್ಲಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸುಮಾರು 400 ಪ್ರಕರಣಗಳು ವರದಿಯಾಗಿದ್ದು, ಈ ತಿಂಗಳವರೆಗೆ ಸುಮಾರು 500 ಪ್ರಕರಣಗಳು ವರದಿಯಾಗಿವೆ. ಇನ್ನೂ 20 ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


