ಕೊಡಗು: 30 ಬೆಡ್ ಗಳ ಕೇಂದ್ರದಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ
ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಕ್ಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ 30 ಬೆಡ್ ಗಳ ಕೇಂದ್ರವನ್ನು ತೆರಯಲಾಗಿದೆ.

ಮಡಿಕೇರಿ: ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಕ್ಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ 30 ಬೆಡ್ ಗಳ ಕೇಂದ್ರವನ್ನು ತೆರಯಲಾಗಿದೆ.
ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇಂದ್ರ (ಡಿಸಿಹೆಚ್ ಸಿ)ಯನ್ನು ಕರುಣಾ ಟ್ರಸ್ಟ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಕೈ ಜೋಡಿಸಿವೆ.
ಮೇ.15 ರಿಂದ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಈ ಕೇಂದ್ರಗಳಲ್ಲಿ 15 ಬೆಡ್ ಗಳಲ್ಲಿ ಪೈಪ್ ಲೈನ್ಡ್ ಆಕ್ಸಿಜನ್ ಗಳು, 5 ಬೆಡ್ ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಹಾಗೂ 10 ಬೆಡ್ ಗಳಲ್ಲಿ ಬಿಪಾಪ್ ಮೆಷಿನ್ (ವೆಂಟಿಲೇಟರ್ ಗಳು) ಗಳಿದೆ ಎಂದು ಕರುಣಾ ಟ್ರಸ್ಟ್ ನ ಜಂಟಿ ಕಾರ್ಯದರ್ಶಿ ವೆಂಕಟ್ ಚೆಕುರಿ ಹೇಳಿದ್ದಾರೆ.
ಅಮೆರಿಕದಲ್ಲಿರುವ ಕೊಡವ ಕೂಟ, ಕೂರ್ಗ್ ಸಂಘಟನೆಗಳು, ಕೊಡವ ಸಮಾಜದವರು ಕರುಣಾ ಟ್ರಸ್ಟ್ ನ ನೆರವಿಗೆ ಧಾವಿಸಿದ್ದು ಕೈ ಜೋಡಿಸಿದ್ದಾರೆ. ಲೋಪಮುದ್ರಾ ಖಾಸಗಿ ಆಸ್ಪತ್ರೆಯಲ್ಲಿರುವ ಕೋವಿಡ್-19 ಚಿಕಿತ್ಸಾ ಕೇಂದ್ರದಲ್ಲಿ ಫಾರ್ಮಸಿ ಲ್ಯಾಬ್ ಸೌಲಭ್ಯಗಳು ಇರಲಿವೆ ಎಂದು ವೆಂಕಟ್ ಮಾಹಿತಿ ನೀಡಿದ್ದಾರೆ.
ಜಿಲ್ಲಾಡಳಿತ ಹೇಳುವ ಕೋವಿಡ್-19 ರೋಗಿಗಳಿಗೆ ಈ ಕೇಂದ್ರದಲ್ಲಿ ಚಿಕಿತ್ಸೆ ದೊರೆಯಲಿದೆ. ಊಟದ ವ್ಯವಸ್ಥೆಯೊಂದಿಗೆ ಉಚಿತ ಚಿಕಿತ್ಸೆಯನ್ನು ಈ ಕೇಂದ್ರ ಒದಗಿಸುತ್ತಿದ್ದು, ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸಂಪೂರ್ಣ ಬೆಂಬಲ ನೀಡಿದ್ದು, ಆಂಬುಲೆನ್ಸ್ ಸೌಲಭ್ಯವನ್ನೂ ಕೇಂದ್ರಕ್ಕೆ ಒದಗಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಸ್ಥಳಾವಕಾಶಕ್ಕೆ ಟ್ರಸ್ಟ್ ಬಾಡಿಗೆಯನ್ನೂ ನೀಡಲಿದ್ದು, ಟ್ರಸ್ಟ್ ವತಿಯಿಂದಲೇ ವೈದ್ಯರು ಹಾಗೂ ನರ್ಸ್ ಗಳನ್ನು ನೇಮಕ ಮಾಡಲಾಗುತ್ತಿದೆ, ಟ್ರಸ್ಟ್ ನ ಸ್ಥಾಪಕ ಸದಸ್ಯ ಡಾ. ಸುದರ್ಶನ್ ಇಡಿ ಯೋಜನೆಗೆ ಮಾರ್ಗದರ್ಶಿಗಳಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


