ಕೋವಿಡ್-19 ರೋಗಿಗಳು

ಕೋವಿಡ್-19 ರೋಗಿಗಳು ಪಾರ್ಕಿನ್ಸನ್ ಗೆ ತುತ್ತಾಗುವ ಅಪಾಯ ಹೆಚ್ಚು!
ಕೋವಿಡ್-19 ವೈರಾಣುವಿನಿಂದ ಬಳಲಿದವರಿಗೆ ಪಾರ್ಕಿನ್ಸನ್ ರೋಗದಲ್ಲಿ ಕಂಡುಬರುವ ಮೆದುಳು ಕ್ಷೀಣಿಸುವ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಬೇಡಿಕೆ ಹೆಚ್ಚಿದ್ದರೂ, ಪೋರ್ಟಲ್ ಗಳ ಮೂಲಕ ಬೆಡ್ ಬುಕಿಂಗ್ ಪ್ರಮಾಣ ಅತ್ಯಲ್ಪ!
ನಗರದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬೆಡ್ ಗಳ ಬೇಡಿಕೆ, ಆಕ್ಸಿಜನ್ ಗಳ ಬೇಡಿಕೆ ಹೆಚ್ಚಿದ್ದರೂ, ಪೋರ್ಟಲ್ ಗಳ ಮೂಲಕ ಕಾಯ್ದಿರಿಸಲಾಗುತ್ತಿರುವುದು ಕೆಲವೇ ಕೆಲವು ಬೆಡ್ ಗಳನ್ನ ಎಂಬ ಮಾಹಿತಿ ಬಹಿರಂಗಗೊಂಡಿದೆ.

1,100 ಸಿಬ್ಬಂದಿಯ ಕಾಲ್ ಸೆಂಟರ್ ನಿಂದ ಕೋವಿಡ್ ರೋಗಿಗಳಿಗೆ ಮಾರ್ಗದರ್ಶನ: ಸಚಿವ ಡಾ.ಕೆ.ಸುಧಾಕರ್
ಮನೆ ಆರೈಕೆಯಲ್ಲಿರುವ ಕೋವಿಡ್ ರೋಗಿಗಳಿಗೆ ಮಾರ್ಗದರ್ಶನ ನೀಡಲು ಕಾಲ್ ಸೆಂಟರ್ ನಲ್ಲಿ ಒಟ್ಟು 1,100 ಮಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೋವಿಡ್ ರೋಗಿಗಳಿಗೆ ಸ್ವಯಂ ಆರೈಕೆ ವಿಧಾನ ಮಾರ್ಗಸೂಚಿ ಬಿಡುಗಡೆ; ಆಮ್ಲಜನಕ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ..
ದೇಶಾದ್ಯಂತ 2 ಅಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಮಟ್ಟವನ್ನು ಮೀರಿ ಪ್ರಸರಣವಾಗುತ್ತಿದೆ.

ಕೋವಿಡ್-19 ರೋಗಿಗಳಿಗೆ ಆದ್ಯತೆ: ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆಗೆ ಕೇಂದ್ರದ ನಿರ್ಬಂಧ
ಕೋವಿಡ್-19 ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಕೈಗಾರಿಕೆಗಳಿಗೆ ಆಮ್ಲ ಜನಕ ಪೂರೈಕೆ ಮಾಡುವುದನ್ನು ನಿರ್ಬಂಧಿಸಿದೆ.

ಆಮ್ಲಜನಕ ಪೂರೈಕೆಯಲ್ಲಿ ಕೊರತೆ: ಮಧ್ಯ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ 6 ಕೋವಿಡ್-19 ರೋಗಿಗಳ ಸಾವು!
ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯಿಂದ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಮಂದಿ ಕೋವಿಡ್-19 ರೋಗಿಗಳು ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಶಹ್ದೋಲ್ ನಲ್ಲಿ ನಡೆದಿದೆ.

ಖಾಸಗಿ ಆಸ್ಪತ್ರೆಗಳಲ್ಲಿ 50% ರಷ್ಟು ಹಾಸಿಗೆ ಮೀಸಲು: ಸಚಿವ ಡಾ. ಕೆ.ಸುಧಾಕರ್
ಕಳೆದ ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ 50% ರಷ್ಟು ಹಾಸಿಗೆ ಕೋವಿಡ್ ಗೆ ಮೀಸಲಿಡಲಾಗಿತ್ತು. ಇದೇ ರೀತಿ ಈಗ ಹಾಸಿಗೆ ಮೀಸಲಿಡಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೋವಿಡ್ ರೋಗಿಗಳ ದತ್ತಾಂಶ ಸುರಕ್ಷತೆಗೆ ಕುತ್ತು?: ಸ್ಯಾನಿಟೈಸರ್ ಸಂಸ್ಥೆಗಳ ಬಳಿ ನಿಮ್ಮ ನಂಬರ್!
ಕೋವಿಡ್-19 ರೋಗಿಗಳ ದತ್ತಾಂಶ ಸಾರ್ಜನಿಕವಾಗಿ ಲಭ್ಯವಿದ್ದು, ಸ್ಯಾನಿಟೈಸರ್ ಸಂಸ್ಥೆಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.

ಕೋವಿಡ್-19 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಪ್ರಯೋಜನವಾಗುವುದಿಲ್ಲ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ
ಕೋವಿಡ್-19 ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯಿಂದ ಯಾವುದೇ ರೀತಿಯ ಪ್ರಯೋಜನವಾಗಲಿ, ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯವಾಗುವುದಿಲ್ಲ, ರೋಗ ನಿಯಂತ್ರಣಕ್ಕೆ ಸಹ ಸಹಾಯವಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹೇಳಿದೆ.

