COVID-19 patients

ಕೋವಿಡ್-19: ಅಕಾಲಿಕವಾಗಿ ಬಿಡುಗಡೆಯಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಳ
ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ನಡುವೆಯೇ ತಾವು ಗುಣಮುಖರಾಗಿದ್ದೇವೆ ಎಂದು ಅಕಾಲಿಕವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮತ್ತೆ ಅನಾರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ಕಿಮ್ಸ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯದ ಕೋವಿಡ್ ಚಿಕಿತ್ಸೆ ಸಿಗುತ್ತಿಲ್ಲ: ಸಚಿವ ಸುಧಾಕರ್
ಉತ್ತರ ಕರ್ನಾಟಕ ಭಾಗದ ಆರೋಗ್ಯ ವ್ಯವಸ್ಥೆಯ ಕೇಂದ್ರದಂತೆ ಕಾರ್ಯನಿರ್ವಹಿಸಬೇಕಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಕೋವಿಡ್ ವಿಷಯದಲ್ಲಿ ನಿರೀಕ್ಷೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಚಿವ ಡಾ.ಕೆ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಡಿಕೆ ಹೆಚ್ಚಿದ್ದರೂ, ಪೋರ್ಟಲ್ ಗಳ ಮೂಲಕ ಬೆಡ್ ಬುಕಿಂಗ್ ಪ್ರಮಾಣ ಅತ್ಯಲ್ಪ!
ನಗರದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬೆಡ್ ಗಳ ಬೇಡಿಕೆ, ಆಕ್ಸಿಜನ್ ಗಳ ಬೇಡಿಕೆ ಹೆಚ್ಚಿದ್ದರೂ, ಪೋರ್ಟಲ್ ಗಳ ಮೂಲಕ ಕಾಯ್ದಿರಿಸಲಾಗುತ್ತಿರುವುದು ಕೆಲವೇ ಕೆಲವು ಬೆಡ್ ಗಳನ್ನ ಎಂಬ ಮಾಹಿತಿ ಬಹಿರಂಗಗೊಂಡಿದೆ.

ಕೊರೋನಾ ಲಾಕ್ಡೌನ್ ಸಂಕಷ್ಟ: ಮೈಸೂರು ಆಶ್ರಮದಿಂದ ಸೋಂಕಿತರ ಪರಿಚಾರಕರಿಗೆ ಉಚಿತ ಆಹಾರ ವಿತರಣೆ
ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ 14 ದಿನಗಳ ಲಾಕ್ಡೌನ್ ಹೇರಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೋಟೆಲ್, ಮೊಬೈಲ್ ಕ್ಯಾಂಟೀನ್ ಹಾಗೂ ಇತರೆ ಆಹಾರ ತಿನಿಸು ಅಂಡಗಿಗಳು ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸೋಂಕಿತರನ್ನು ದಾಖಲಿಸಿ...

ಕೊಡಗು: 30 ಬೆಡ್ ಗಳ ಕೇಂದ್ರದಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ
ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಕ್ಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ 30 ಬೆಡ್ ಗಳ ಕೇಂದ್ರವನ್ನು ತೆರಯಲಾಗಿದೆ.

ಕೋವಿಡ್-19 ರೋಗಿಗಳಿಗೆ ನೆರವು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಿಂದ ಸಹಾಯವಾಣಿ
ಕೊರೋನಾ ಸಂಕಷ್ಟ ಕಾಲದಲ್ಲಿ ಜನರ ಅಗತ್ಯಗಳನ್ನೆಲ್ಲಾ ಸರ್ಕಾರವೇ ಮಾಡಬೇಕು, ಸರ್ಕಾರದಿಂದಲೇ ವೈದ್ಯಕೀಯ ನೆರವು ಹಾಗೂ ಇತರ ಸೌಲಭ್ಯ ಸಿಗಬೇಕು ಎಂದು ಕೂತರೆ ಆಗುವುದಿಲ್ಲ ಎಂದು ಜನರಿಗೆ ಅರ್ಥವಾಗುತ್ತಿದೆ. ಅದಕ್ಕಾಗಿ ಇತ್ತೀಚೆಗೆ ಗುಂಪುಗಳನ್ನು ಮಾಡಿಕೊಂಡು ಜನರು ಕೈಲಾದ ಸಹಾಯ ಮಾಡುತ್ತಿದ್ದಾರೆ.

120 ಹಾಸಿಗೆಗಳ ಆಮ್ಲಜನಕ ಬೆಡ್ ಕೇಂದ್ರವಾಗಿ ಬೆಂಗಳೂರು ಶಾಲೆಯ ಹಾಸ್ಟೆಲ್ ಪರಿವರ್ತನೆ
ಕೋವಿಡ್ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಬೆಂಗಳೂರಿನ ಶಾಲೆಯೊಂದರ ಹಾಸ್ಟೆಲ್ ಅನ್ನು ಕೋವಿಡ್ ಸೆಂಟರ್ ಮಾಡಲು ನಿರ್ಧರಿಸಲಾಗಿದೆ.

ಬೆಡ್ ಬುಕ್ಕಿಂಗ್ ಅವ್ಯವಹಾರ, ಮಾಫಿಯಾ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ: ಸಿಎಂ ಭೇಟಿ ಮಾಡಿ ಕ್ರಮಕ್ಕೆ ಆಗ್ರಹ
ಕೊರೋನಾ ಕಾಲದಲ್ಲೂ ಜನರ ಜೀವದ ಜೊತೆ ಆಟಾಡುತ್ತಿರುವ, ಅಕ್ರಮವಾಗಿ ಬೆಡ್ ಬುಕ್ಕಿಂಗ್ ಮಾಡುತ್ತಿದ್ದ ಮಾಫಿಯಾವನ್ನು ಸಂಸದ ತೇಜಸ್ವಿ ಸೂರ್ಯ ಬಹಿರಂಗಪಡಿಸಿದ್ದಾರೆ.

ಕೋವಿಡ್-19 ತುರ್ತು ಸೇವೆಗಳಿಗೆ ದೇಶಾದ್ಯಂತ #BJYMDoctorHelpline ಸಹಾಯವಾಣಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಚಾಲನೆ
ಕೋವಿಡ್-19 ತುರ್ತು ಸೇವೆಗಳು ಹಾಗೂ ಸೋಂಕಿತರು & ವೈದ್ಯರೊಂದಿಗಿನ ಸಮಾಲೋಚನೆಗೆ ಸಹಾಯವಾಗುವ ನಿಟ್ಟಿನಲ್ಲಿ ಇಡೀ ದೇಶಾದ್ಯಂತ ಸಹಾಯವಾಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಏ.28 ರಂದು ಚಾಲನೆ ನೀಡಿದರು.

