Mysuru Dasara: ನಂದಿ ಧ್ವಜ ಹಿಡಿದು ಕುಣಿಯುವಾಗ ಮುರಿದುಬಿದ್ದ ಕಂಬ.. ತಪ್ಪಿದ ಅನಾಹುತ
ಪ್ರತಿವರ್ಷ ದಸರಾ ಉದ್ಘಾಟನೆಗೂ ಮುನ್ನ ಪ್ರಖ್ಯಾತ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಅದರಂತೆ ಉಡಿಗಾಲ ಮಹದೇವಪ್ಪ ಮತ್ತು ತಂಡ ಜೋಡಿ ನಂದಿ ಧ್ವಜಗಳೊಂದಿಗೆ ಆಗಮಿಸಿತ್ತು.

ಮೈಸೂರು: ಇಂದು ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಮುನ್ನ ಅಚಾತುರ್ಯ ನಡೆದಿದೆ. ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ನಡೆಯುತ್ತಿದ್ದ ವೇಳೆ, ಪೂಜೆಗೆಂದು ತರಲಾಗಿದ್ದ ಎರಡು ನಂದಿ ಧ್ವಜಗಳ ಪೈಕಿ ಒಂದು ಮುರಿದುಬಿದ್ದಿದೆ.
ಪ್ರತಿವರ್ಷ ದಸರಾ ಉದ್ಘಾಟನೆಗೂ ಮುನ್ನ ಪ್ರಖ್ಯಾತ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಅದರಂತೆ ಉಡಿಗಾಲ ಮಹದೇವಪ್ಪ ಮತ್ತು ತಂಡ ಜೋಡಿ ನಂದಿ ಧ್ವಜಗಳೊಂದಿಗೆ ಆಗಮಿಸಿತ್ತು. ಮಹಿಷಾಸುರ ಪ್ರತಿಮೆ ವೃತ್ತದ ಬಳಿ ನಂದಿ ಕಂಬವನ್ನು ನೆಡುವಾಗ ಒಂದು ಕಂಬ ಮುರಿದುಬಿದ್ದಿದೆ. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಳಿದ ಒಂದು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು.
ರಾಜರ ಕಾಲದಲ್ಲಿ ನಂದಿ ಧ್ವಜ ಪೂಜೆ
ರಾಜರ ಕಾಲದಲ್ಲಿಯೂ ನಂದಿ ಧ್ವಜ ತಂಡವನ್ನು ಓಲಗ, ಬಿರುದಾವಳಿ, ಗೌರವಾದರಗಳೊಡನೆ ಅರಮನೆಗೆ ಕರೆದೊಯ್ದು, ಅಂಬಾ ವಿಲಾಸ ಅರಮನೆಯಲ್ಲಿ ಸತ್ಕರಿಸಿ ಬಳಿಕ ತಂಡವನ್ನು ಅರಮನೆಯ ಬಲರಾಮ ದ್ವಾರದ ಬಳಿಗೆ ಕರೆದೊಯ್ಯುತ್ತಾರೆ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿತ್ತು. ಈಗಲೂ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ಚಾಲನೆ ವೇಳೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
ಕಂಬಳ, ಡ್ರೋನ್ ಶೋ, ಸೂರ್ಯ ಕಿರಣ್ ಏರ್ ಶೋ, ಕಾವೇರಿ ಆರತಿ, ಜಂಬೂ ಸವಾರಿ, ಪಂಜಿನ ಕವಾಯತು, ಮೈಸೂರು ಅರಮನೆಯ ಭವ್ಯ ವಿದ್ಯುತ್ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



