ರಾಜ್ಯ

ಲಾಕ್ ಡೌನ್: ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿಗರು ಆನ್​ಲೈನ್​ನಲ್ಲೇ ಪಡೆಯಬಹುದು ಕರ್ಫ್ಯೂ ಪಾಸ್

ಕೊರೊನಾ ಸೋಂಕು ತಡೆಗಟ್ಟಲು 21ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತು ಪೂರೈಕೆ, ಡೋರ್ ಡೆಲಿವರಿ ಬಾಯ್ಸ್‌ಗೆ ಪಾಸ್ ನೀಡಲಾಗುತ್ತಿದೆ.‌‌ ಇತ್ತೀಚೆಗೆ‌ ನಗರದ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿತ್ತು.

ಲಾಕ್ ಡೌನ್: ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿಗರು ಆನ್​ಲೈನ್​ನಲ್ಲೇ ಪಡೆಯಬಹುದು ಕರ್ಫ್ಯೂ ಪಾಸ್
ಪೊಲೀಸರು
Published On :

ಬೆಂಗಳೂರು: ನಗರ ಪೊಲೀಸರಿಂದ KAP CLEAR ಇ -ಪಾಸ್ ಬಿಡುಗಡೆಗೊಳಿಸಲಾಗಿದೆ.

ಕೊರೊನಾ ಸೋಂಕು ತಡೆಗಟ್ಟಲು 21ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತು ಪೂರೈಕೆ, ಡೋರ್ ಡೆಲಿವರಿ ಬಾಯ್ಸ್‌ಗೆ ಪಾಸ್ ನೀಡಲಾಗುತ್ತಿದೆ.‌‌ ಇತ್ತೀಚೆಗೆ‌  ನಗರದ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿತ್ತು. ಆದರೆ, ಈ ಸಂದರ್ಭದಲ್ಲಿ  ಪಾಸ್ ಕೌಂಟರ್  ಹತ್ತಿರ ಭಾರಿ ಜನದಟ್ಟಣೆ ನಿರ್ಮಾಣವಾಗಿತ್ತು. ಕೊರೊನಾ ಸೋಂಕು  ತಡೆಗಟ್ಟಲು ಮುಖ್ಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಅಗತ್ಯವಾಗಿರುವುದರಿಂದ ಇ-ಪಾಸ್ ನೀಡಲು ನಗರ ಪೊಲೀಸ್ ಇಲಾಖೆ ನಿರ್ಧರಿಸಿದೆ‌.

ಅವಶ್ಯಕತೆ ಇದ್ದವರು https://kspclearpass.mygate.com/signup ಈ ವೆಬ್ ಸೈಟ್ ನಲ್ಲಿ ಲಾಗ್ ಇನ್  ಆಗುವುದರ ಮೂಲಕ KAP CLEAR ಇ- ಪಾಸ್ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.