ಕೊರೋನಾ ವೈರಸ್: ಸರ್ವಪಕ್ಷ ಸಭೆ ಕರೆದ ಸಿಎಂ ಯಡಿಯೂರಪ್ಪ, ಆಹಾರ ಪೊಟ್ಟಣ ವಿತರಣೆ
ಅಗತ್ಯ ವಸ್ತುಗಳು ಸೇವೆಗಳ ಅನಿಶ್ಚಿತತೆ, ಗೊಂದಲಗಳ ನಡುವೆ ಭಾರತ ಲಾಕ್ ಡೌನ್ ನ 5ನೇ ದಿನಕ್ಕೆ ಭಾನುವಾರ ಕಾಲಿಟ್ಟಿದ್ದು ಬೆಂಗಳೂರಿನ ಹಲವು ಇಂದಿರಾ ಕ್ಯಾಂಟೀನ್ ಗಳಲ್ಲಿ ನಿರ್ಗತಿಕರು, ವಲಸಿಗ ಕೂಲಿ ಕಾರ್ಮಿಕರು, ಹಿರಿಯರ ವೃದ್ಧಾಶ್ರಮ, ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವುದು ಕಂಡುಬಂತು.

ಬೆಂಗಳೂರು:ಅಗತ್ಯ ವಸ್ತುಗಳು ಸೇವೆಗಳ ಅನಿಶ್ಚಿತತೆ, ಗೊಂದಲಗಳ ನಡುವೆ ಭಾರತ ಲಾಕ್ ಡೌನ್ ನ 5ನೇ ದಿನಕ್ಕೆ ಭಾನುವಾರ ಕಾಲಿಟ್ಟಿದ್ದು ಬೆಂಗಳೂರಿನ ಹಲವು ಇಂದಿರಾ ಕ್ಯಾಂಟೀನ್ ಗಳಲ್ಲಿ ನಿರ್ಗತಿಕರು, ವಲಸಿಗ ಕೂಲಿ ಕಾರ್ಮಿಕರು, ಹಿರಿಯರ ವೃದ್ಧಾಶ್ರಮ, ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವುದು ಕಂಡುಬಂತು.
ಸಕಾರಣವಿಲ್ಲದೆ ಮನೆಯಿಂದ ವಾಹನಗಳಲ್ಲಿ ಹೊರಬಂದು ತಿರುಗಾಡುತ್ತಿದ್ದವರನ್ನು ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿ ವಾಪಸ್ ಕಳುಹಿಸುತ್ತಿರುವುದು ಕಂಡುಬಂತು. ಇಂದು ಸುಮಾರು 2 ಸಾವಿರ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ.
ಹುಬ್ಬಳ್ಳಿ –ಧಾರವಾಡದಲ್ಲಿ ಮಹಿಳೆಯರು ಸ್ಯಾನಿಟೈಸರ್, ಮಾಸ್ಕ್ ಗಳನ್ನು ಕೊಳ್ಳಲು ಪರದಾಡುತ್ತಿದ್ದರು.
ಜನರು ಮನೆಯಲ್ಲಿಯೇ ಕುಳಿತು ಕೊರೋನಾ ವೈರಸ್ ಸೋಂಕು ಹಬ್ಬದಂತೆ ಸಹಕರಿಸಿ, ನಿಮ್ಮ ಮನೆ ಬಾಗಿಲಿಗೆ ಸಾಧ್ಯವಾದಷ್ಟು ಸೇವೆಗಳನ್ನು ಒದಗಿಸುತ್ತೇವೆ ಎಂದು ಕಲಬುರಗಿ ನಗರ ಆಯುಕ್ತ ರಾಹುಲ್ ಪಂಡ್ವೆ ಮನವಿ ಮಾಡಿದ್ದಾರೆ.
ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸರ್ವಪಕ್ಷಗಳ ನಾಯಕರೊಂದಿಗೆ ಸಭೆ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಆಡಳಿತ ಪಕ್ಷ ನಾಯಕರು ಮತ್ತು ಪ್ರತಿಪಕ್ಷದಿಂದ ಸಿದ್ದರಾಮಯ್ಯ ಭಾಗವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


