ಬಿಬಿಎಂಪಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 85 ರಿಂದ 113ಕ್ಕೇರಿಕೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಇತ್ತ ಬಿಬಿಎಂಪಿ ತನ್ನ ವ್ಯಾಪ್ತಿಯ ಕಂಟೈನ್ ಮೆಂಟ್ ಝೋನ್ ಸಂಖ್ಯೆಗಳನ್ನು 85ರಿಂದ 113ಕ್ಕೆ ಏರಿಕೆ ಮಾಡಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಇತ್ತ ಬಿಬಿಎಂಪಿ ತನ್ನ ವ್ಯಾಪ್ತಿಯ ಕಂಟೈನ್ ಮೆಂಟ್ ಝೋನ್ ಸಂಖ್ಯೆಗಳನ್ನು 85ರಿಂದ 113ಕ್ಕೆ ಏರಿಕೆ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಗುರುವಾರ ಒಂದೇ ದಿನ 28 ಹೊಸ ಕಂಟೈನ್ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದೆ. ಬುಧವಾರ ಈ ಸಂಖ್ಯೆ 85 ಇತ್ತು. ಇದುವರೆಗೆ ಪಾಲಿಕೆಯ 198 ವಾರ್ಡ್ಗಳಲ್ಲಿ 109 ವಾರ್ಡ್ಗಳಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ.
ಕಾವಲ್ ಭೈರಸಂದ್ರ, ಕೋಣನಕುಂಟೆ, ಹೂಡಿ, ಬೆಳ್ಳಂದೂರು, ವಸಂತಪುರ, ಅರಕೆರೆ, ಬಾಗಲಕುಂಟೆ, ದೇವಸಂದ್ರ, ವಿ.ವಿ.ಪುರ, ಗಂಗಾನಗರ, ಸಂಪಂಗಿರಾಮನಗರ, ಕುಶಾಲನಗರ, ಚಾಮರಾಜಪೇಟೆ, ರಾಯಪುರ, ಧರ್ಮರಾಯ ಸ್ವಾಮಿನಗರ, ಚಿಕ್ಕಪೇಟೆ, ಕಮ್ಮನಹಳ್ಳಿ, ಹನುಮಂತನಗರ, ವಸಂತನಗರ ವಾರ್ಡ್ಗಳಲ್ಲಿ ತಲಾ ಒಂದು ಹಾಗೂ ಗರುಡಾಚಾರ್ಪಾಳ್ಯ, ಸಿಂಗಸಂದ್ರ, ಹಾಗೂ ಎಸ್.ಕೆ.ಗಾರ್ಡನ್ ವಾರ್ಡ್ಗಳಲ್ಲಿ ತಲಾ ಎರಡು ಕಂಟೈನ್ಮೆಂಟ್ ಪ್ರದೇಶಗಳನ್ನು ಹೊಸತಾಗಿ ಗುರುತಿಸಲಾಗಿದೆ.
ನಗರದಲ್ಲಿ 24 ಗಂಟೆಗಳಲ್ಲಿ 17 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಇದರಿಂದಾಗಿ ಕೋವಿಡ್ ಪೀಡಿತರ ಸಂಖ್ಯೆ 581ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾದರೂ ನಗರದಲ್ಲಿ ಮಾತ್ರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮೂರು ದಿನಗಳಲ್ಲಿ 89 ಮಂದಿ ಸೋಂಕಿತರಾಗಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಸೋಂಕು ತಗುಲಿರುವುದು ಹೇಗೆ ಎಂಬುದು ಪತ್ತೆಯೇ ಆಗಿಲ್ಲ. ಅಂತೆಯೇ ನಗರದಲ್ಲಿ ಮತ್ತೆ ಇಬ್ಬರು ಕೊರೊನಾ ಸೋಂಕಿನಿಂದಲೇ ಮೃತ ಪಟ್ಟಿರುವುದು ಬುಧವಾರ ದೃಢಪಟ್ಟಿದೆ. ಇದರಿಂದ ಕೋವಿಡ್ಗೆ ಸಾವಿಗೀಡಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


