ಲಾಕ್‌ಡೌನ್ ಅವಧಿಯಲ್ಲಿ ಜನರ ನೆರವಿಗೆ ಮೊಬೈಲ್ ಕೋವಿಡ್ ಟೆಸ್ಟಿಂಗ್ ವಾಹನ ಸಿದ್ಧ: ಆರೋಗ್ಯ ಇಲಾಖೆ
ಬೆಂಗಳೂರು ನಗರದಲ್ಲಿ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳೂ ಮತ್ತು ಸೋಂಕಿನ ಲಕ್ಷಣವುಳ್ಳವರಿಗೆ ತಪಾಸಣೆಗಾಗಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ ಮೊಬೈಲ್ ಟೆಸ್ಟಿಂಗ್ ಯೋಜನೆ ಆರಂಭಿಸಿದೆ.

ಬೆಂಗಳೂರು: ಬೆಂಗಳೂರು ನಗರದಲ್ಲಿ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳೂ ಮತ್ತು ಸೋಂಕಿನ ಲಕ್ಷಣವುಳ್ಳವರಿಗೆ ತಪಾಸಣೆಗಾಗಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ ಮೊಬೈಲ್ ಟೆಸ್ಟಿಂಗ್ ಯೋಜನೆ ಆರಂಭಿಸಿದೆ.
ಜೊತೆಗೆ, ಗಂಟಲು ದ್ರವ( ಸ್ವ್ಯಾಬ್) ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಯಾವುದೇ ವ್ಯಕ್ತಿ ಫಲಿತಾಂಶ ಲಭ್ಯವಾಗುವವರೆಗೆ ಮನೆಯಲ್ಲೇ ಪ್ರತ್ಯೇಕತೆ ಕಾಯ್ದುಕೊಳ್ಳಬೇಕು. ಈ ನಿಯಮ ಉಲ್ಲಂಘಿಸಿದರೆ ಅವರಿಗೆ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಮೊಬೈಲ್ ಟೆಸ್ಟಿಂಗ್ ಸಹಾಯವಾಣಿಗಳು- ಯಲಹಂಕ- 080-28560696/ 8792032820/5180 ಮಹದೇವಪುರ- 080-23010101/102, ಬೊಮ್ಮನಹಳ್ಳಿ- 8548883334/ 8970002228, ಆರ್ ಆರ್ ನಗರ- 080-2600208 , ದಕ್ಷಿಣ ವಲಯ- 7022724772, ಪೂರ್ವ ವಲಯ -9900094042, ಪಶ್ಚಿಮ ವಲಯ 080-68248454/ 7204179723
ಆಪ್ತಮಿತ್ರ-ಕೋವಿಡ್- 9 ಸಹಾಯವಾಣಿ
ಟೆಲಿಮೆಡಿಸಿನ್ ಮತ್ತು ಆಸ್ಪತ್ರೆಗೆ -14410, ಆಂಬುಲೆನ್ಸ್ ಸೇವೆಗೆ -108 ,ಆಸ್ಪತ್ರೆ ನಿರಾಕರಣೆ ಸಂಬಂಧದ ಕೊಂದು ಕೊರತೆಗಾಗಿ-1912, ಸಾಮಾನ್ಯ ಆರೋಗ್ಯ ಸಮಸ್ಯೆ ಕುರಿತ ಮಾಹಿತಿಗಾಗಿ -104 ಸಂಖ್ಯೆಗಳಿಗೆ ಸಾರ್ವಜನಿಕರು ಕರೆ ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


