ರಾಜ್ಯ

ಕೋವಿಡ್-19 ಎಫೆಕ್ಟ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಲ್ಲ ಸೇವೆಗಳೂ ಈಗ ವರ್ಚುವಲ್; ಪ್ರಯಾಣಿಕರಿಗೆ ಸ್ಪರ್ಶ ಮುಕ್ತ ಅನುಭವ

ಮಾರಕ ಕೊರೋನಾ ವೈರಸ್ ಎಫೆಕ್ಟ್ ಇದೀಗ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಎಲ್ಲ ಸೇವೆಗಳನ್ನೂ ವರ್ಚುವಲ್ ಮಾಡಿದ್ದು, ಇನ್ನು ಮುಂದೆ ಪ್ರಯಾಣಿಕರು ಸ್ಪರ್ಶ ಮುಕ್ತ ಸೇವೆಯ ಅನುಭವ ಪಡೆಯಬಹುದು.

ಕೋವಿಡ್-19 ಎಫೆಕ್ಟ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಲ್ಲ ಸೇವೆಗಳೂ ಈಗ ವರ್ಚುವಲ್; ಪ್ರಯಾಣಿಕರಿಗೆ ಸ್ಪರ್ಶ ಮುಕ್ತ ಅನುಭವ
ಕೆಂಪೇಗೌಡ ವಿಮಾನ ನಿಲ್ದಾಣ
Published On :

ಬೆಂಗಳೂರು: ಮಾರಕ ಕೊರೋನಾ ವೈರಸ್ ಎಫೆಕ್ಟ್ ಇದೀಗ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಎಲ್ಲ ಸೇವೆಗಳನ್ನೂ ವರ್ಚುವಲ್ ಮಾಡಿದ್ದು, ಇನ್ನು ಮುಂದೆ ಪ್ರಯಾಣಿಕರು ಸ್ಪರ್ಶ ಮುಕ್ತ ಸೇವೆಯ ಅನುಭವ ಪಡೆಯಬಹುದು.

ಹೌದು.. ಕೊರೋನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪ್ರಯಾಣಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾನವ ಸಂಪರ್ಕ ಇಲ್ಲದಂತಹ ಹಾಗೂ ಸುರಕ್ಷಿತವಾಗಿ ಸಹಾಯ ಮತ್ತು ಮಾಹಿತಿಗಳನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾದಂತಹ ಹಾಗೂ ಸ್ಪರ್ಶರಹಿತವಾದ  ಸೇವೆ ನೀಡುವ ವರ್ಚುವಲ್‌ ಇನ್‌ಫರ್ಮೇಷನ್‌ ಡೆಸ್ಕ್‌ ಅನ್ನು ಪರಿಚಯಿಸಿದೆ. ಟರ್ಮಿನಲ್‌ ನಲ್ಲಿನ ನಾಲ್ಕು ಸ್ಥಳಗಳಲ್ಲಿ ಇನ್ನು ಮುಂದೆ ವರ್ಚುವಲ್‌ ಡೆಸ್ಕ್‌ಗಳು ಲಭ್ಯವಿರಲಿದೆ.

ಈ ಬಗ್ಗೆ ಬಿಐಎಎಲ್‌ ಸಂಸ್ಥೆ ಪ್ರಕಟಣೆ ನೀಡಿದ್ದು, ವರ್ಚುವಲ್ ಡೆಸ್ಕ್ ಗಳು, ಸಂಪರ್ಕ ರಹಿತ ಪ್ರಯಾಣಿಕರ ಸಂಸ್ಕರಣಾ ಪ್ರಕ್ರಿಯೆಗೆ ನೂತನ ಆಯಾಮ ನೀಡಲಿದೆ ಎಂದು ಹೇಳಿದೆ.

'ಸ್ಪರ್ಶ ರಹಿತವಾಗಿ ವಿಡಿಯೋ ಮೂಲಕ ದೂರದಲ್ಲಿರುವ ವಿಮಾನ ನಿಲ್ದಾಣ ಸಿಬ್ಬಂದಿಯೊಂದಿಗೆ ತತ್‌ಕ್ಷಣ ಸಂಭಾಷಣೆ ನಡೆಸಲು ಪ್ರಯಾಣಿಕರಿಗೆ ವರ್ಚುವಲ್‌ ಇನ್‌ಫರ್ಮೇಷನ್‌ ಡೆಸ್ಕ್‌ ಅವಕಾಶ ಮಾಡಿಕೊಡಲಿದೆ. ಪ್ರಯಾಣಿಕರು ವರ್ಚುವಲ್‌ ಡೆಸ್ಕ್‌ ಮುಂದೆ ಹೋಗಿ ನಿಂತ ಕೂಡಲೇ ಅಲ್ಲಿನ ಸೆನ್ಸರ್‌ಗಳಿಗೆ ಚಾಲನೆ  ಲಭಿಸುತ್ತದೆ. ಅಲ್ಲದೆ, ಪರಸ್ಪರ ಸಂವಾದ ಆರಂಭವಾಗುತ್ತದೆ. ಪ್ರಯಾಣಿಕರು ಹಗಲು ಮತ್ತು ರಾತ್ರಿಯಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಬೆಂಗಳೂರು ವಿಮಾನ ನಿಲ್ದಾಣ, ಸೌಲಭ್ಯಗಳು, ವಿಮಾನ ಹಾರಾಟಗಳು, ಆಹಾರ ಮತ್ತು ಪೇಯಗಳು, ಸಾರಿಗೆ ಕುರಿತ ಮಾಹಿತಿಯನ್ನು ಈ ಮೂಲಕ  ಪ್ರಯಾಣಿಕರು ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸೇವೆ ಪ್ರಸ್ತುತ ಇಂಗ್ಲಿಷ್‌, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿರುತ್ತದೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿರುವ ಸಿಬ್ಬಂದಿಗೆ ಈ ವರ್ಚುವಲ್‌ ವೇದಿಕೆ ಮೂಲಕ ಎಲ್ಲಾ ಮೂರು ಭಾಷೆಗಳಲ್ಲಿ ಪ್ರಯಾಣಿಕರ ಪ್ರಶ್ನೆಗಳಿಗೆ ಉತ್ತರ ನೀಡಿ ನಿಭಾಯಿಸುವುದಕ್ಕಾಗಿ ತರಬೇತಿ ನೀಡಲಾಗಿರುತ್ತದೆ.  ಬಿ.ಐ.ಎ.ಎಲ್‌. ಮತ್ತು ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ಕೂಡ ಟರ್ಮಿನಲ್‌ನಲ್ಲಿ ಲಭ್ಯವಿದ್ದು, ಪ್ರಯಾಣಿಕರಿಗೆ ಅಗತ್ಯವಾದ ರೀತಿಯಲ್ಲಿ ಸಹಾಯ ಮತ್ತು ಮಾಹಿತಿಯನ್ನು ಪೂರೈಸುತ್ತಾರೆ. ವಿಮಾನ ನಿಲ್ದಾಣದ ಪಾರ್ಕಿಂಗ್ ನಿಂದ ಬೋರ್ಡಿಂಗ್ ವರೆಗಿನ ಸೇವೆಗಳನ್ನು ಮೇ ತಿಂಗಳಲ್ಲಿ ವರ್ಚುವಲ್ ಮಾಡಲಾಗಿತ್ತು.  ಇದೀಗ ಡಿಜಿಯಾತ್ರಾ (ಬಯೋಮೆಟ್ರಿಕ್ ಆಧಾರಿತ ಸ್ವಯಂ-ಬೋರ್ಡಿಂಗ್), ಸ್ವಯಂ ಬ್ಯಾಗ್-ಡ್ರಾಪ್, ಸಂಪರ್ಕವಿಲ್ಲದ ಚೆಕ್-ಇನ್ ಮತ್ತು ಸ್ಯಾನಿಟೈಸರ್ಸ್ ಸೇವೆಯನ್ನೂ ಕೂಡ ಇದೀಗ ಸ್ಪರ್ಶ ರಹಿತವನ್ನಾಗಿ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.